ಜಿಯೋ ಸ್ಟುಡಿಯೋಸ್ ಸಂಸ್ಥೆ ಈಗಾಗಲೇ ಬಾಲಿವುಡ್‌ನಲ್ಲಿ ಘಟಾನುಘಟಿ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದಿದೆ. ಇಂತಹ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ, ಅದು ‘ಕೋಟಿ’ ಮೂಲಕ. ಜಿಯೋ ಸ್ಟುಡಿಯೋಸ್ ನಿರ್ಮಾಣದ ‘ಕೋಟಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೋ ಆಗಿದ್ದರೆ, ನಿರ್ದೇಶನ ಮಾಡಿದವರು ಪರಮ್
ಪರಮ್ ತಮ್ಮ ಮೊದಲ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡ ತಂತ್ರಜ್ಞರು ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದಾರೆ. ಸರಳವಾದ ಕತೆಯನ್ನು ಬಹಳ ಚೆನ್ನಾಗಿ ಜನರ ಮುಂದೆ ತೆರೆದಿಡುವ ಕನ್ನಡದ ಕೋಟಿ ಸಿನಿಮಾ ಯಶಸ್ವಿ ಆಗಿದೆ.