ಭಾರತದ ವಿಜ್ಞಾನಿಗಳು, ಸತತವಾಗಿ 90 ದಿನಗಳವರೆಗೆ ಹಾರಬಲ್ಲ ಸೌರಶಕ್ತಿ ಚಾಲಿತ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅದರ ಸಣ್ಣ ಆವೃತ್ತಿಯನ್ನು ಹತ್ತು ಗಂಟೆಗಳ ಕಾಲ ಯಶಸ್ವಿಯಾಗಿ ಹಾರಿಸಲಾಗಿದೆ.
ಹೈ-ಆಲ್ಟಿಟ್ಯೂಡ್ ಪ್ಲಾಟ್ಫಾರ್ಮ್(ಎಚ್.ಎ.ಪಿ) ಎಂದು ಕರೆಯಲ್ಪಡುವ ಇದನ್ನು ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್) ಬೆಂಗಳೂರು ಅಭಿವೃದ್ಧಿಪಡಿಸಿದೆ. ಇದೊಂದು ಸ್ವಾಯತ್ತ ಮಾನವರಹಿತ ವಿಮಾನವಾಗಿದ್ದು, 17-20ಕೀ.ಮೀ ಎತ್ತರದಲ್ಲಿ ಹಗಲು ರಾತ್ರಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಪೇಲೋಡ್ ಹೊಂದಿರುವ ಎಚ್ಎಪಿಯನ್ನು ಸಾಮಾನ್ಯವಾಗಿ ಹೈ-ಆಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್ (ಹೆಚ್ಎಪಿಎಸ್) ಎಂದು ಕರೆಯಲಾಗುತ್ತದೆ. ಎನ್ಎಎಲ್ ಪ್ರಕಾರ, ಯುದ್ಧದ ಸಮಯದಲ್ಲಿ, ಎಚ್ಎಪಿಎಸ್ ಐಎಸ್ಆರ್ ನ (ಗುಪ್ತಚರ, ಕಣ್ಗಾವಲು ಮತ್ತು ಬೇಹುಗಾರಿಕೆ) ಕಾರ್ಯತಂತ್ರ ಮತ್ತು ಯುದ್ಧತಂತ್ರ ಮತ್ತು ಯುದ್ಧತಂತ್ರದ ಪಾತ್ರಗಳನ್ನು ತುಂಬಬಲ್ಲದು, ಮತ್ತು ಯುದ್ಧಭೂಮಿಯ ಸಂವಹನಗಳಿಗೆ ಸಹಕಾರಿಯಾಗಬಲ್ಲದು. ಇಂತಹ ವಿಮಾನಗಳು ವೈಮಾನಿಕ ಕಾರ್ಯಾಚರಣೆಗಳನ್ನು ನನ್ನ ನಿರ್ದೇಶಿಸುವಲ್ಲಿ ಹೆಚ್ಚುವರಿ ಪಾತ್ರ ವಹಿಸುತ್ತವೆ. ಸುಮಾರು 12 ಮೀಟರ್ (ಸುಮಾರು 40 ಅಡಿ) ರೆಕ್ಕೆಗಳನ್ನು ಹೊಂದಿರುವ ವಿಮಾನ, ಪೂರ್ಣಗೊಂಡಾಗ 22 ಕೆ.ಜಿ ಗಿಂತ ಕಡಿಮೆ ತೂಗುತ್ತದೆ.
ಪ್ರಸ್ತುತ, ವಿಶ್ವದಲ್ಲಿ ಏಕೈಕ ಎಚ್.ಎ.ಪಿ.ಎಸ್ ಎಂದರೆ ಏರ್ಬಸ್ ಜೆಫಿರ್, ಇದು ಅಮೇರಿಕಾದ ಅರಿಝೋನಾ ಮರುಭೂಮಿಯಲ್ಲಿ 64 ದಿನಗಳ ನಿರಂತರ ಹಾರಾಟವನ್ನು ಪ್ರದರ್ಶಿಸಿದೆ.