ಜಾರಿಯಾಗಲಿದೆ ಏಕೀಕೃತ ಪಿಂಚಣಿ ಯೋಜನೆ. ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರದ ಖಚಿತ ಪಿಂಚಣಿಗಾಗಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 2025ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2023ರ ಏಪ್ರಿಲ್ ನಲ್ಲಿ, ಆಗಿನ ಹಣಕಾಸು ಕಾರ್ಯದರ್ಶಿಯಾಗಿದ್ದ ಟಿವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ವ್ಯಾಪಕ ಸಮಾಲೋಚನೆ ಮತ್ತು ಚರ್ಚೆಗಳ ನಂತರ, ಏಕೀಕೃತ ಪಿಂಚಣಿ ಯೋಜನೆಗೆ ಸಮಿತಿ ಶಿಫಾರಸು ಮಾಡಿದೆ. ಈಗ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದ್ದು, ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಏಕೀಕೃತ ಪಿಂಚಣಿ ಯೋಜನೆ ಎಂದರೇನು?
ಕೇಂದ್ರ ಸರಕಾರಿ ನೌಕರರಿಗಾಗಿ ಜಾರಿಗೆ ಬಂದಿರುವ ಹೊಸ ಪಿಂಚಣಿ ಯೋಜನೆ ಇದಾಗಿದೆ. ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಯು ರಾಷ್ಟ್ರೀಯ ಪಿಂಚಣಿ ಯೋಜನೆಗಿಂತ (ಎನ್.ಪಿ.ಎಸ್) ಭಿನ್ನವಾಗಿ, ಸರಕಾರಿ ನೌಕರರಿಗೆ ಸ್ಥಿರ ಖಚಿತ ಪಿಂಚಣಿಯ ಅವಕಾಶವಿರುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯ 5 ಮುಖ್ಯ ಅಂಶಗಳು
- ನಿಶ್ಚಿತ ಪಿಂಚಣಿ: ಯುಪಿಎಸ್ ಯಲ್ಲಿ ಕನಿಷ್ಠ 25 ವರ್ಷಗಳ ಅರ್ಹ ಸೇವೆಗೆ, ನಿವೃತ್ತಿಗೆ ಮುಂಚಿತವಾಗಿ ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಸ್ಥಿರ ಪಿಂಚಣಿ ಇರುತ್ತದೆ. ಈ ವೇತನ ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಅನುಗುಣವಾಗಿರಬೇಕು.
- ಕುಟುಂಬಕ್ಕೆ ಖಚಿತ ಪಿಂಚಣಿ: ಇದು ಖಚಿತ ಕುಟುಂಬ ಪಿಂಚಣಿಯನ್ನು ಸಹ ಹೊಂದಿರುತ್ತದೆ, ಇದು ನೌಕರರು ಪಡೆಯುತ್ತಿದ್ದ ಪಿಂಚಣಿಯ ಶೇಕಡ 60ರಷ್ಟಿರುತ್ತದೆ. ನಿವೃತ್ತರಾದವರು ನಿಧನರಾದ ಸಂದರ್ಭದಲ್ಲಿ ಅದನ್ನು ತಕ್ಷಣವೇ ಕುಟುಂಬಕ್ಕೆ ನೀಡಲಾಗುತ್ತದೆ.
- ಖಚಿತ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಸಂದರ್ಭದಲ್ಲಿ, ಯುಪಿಎಸ್ ಯಲ್ಲಿ ತಿಂಗಳಿಗೆ 10,000 ಖಚಿತ ಕನಿಷ್ಠ ಪಿಂಚಣಿ ಸಿಗಲಿದೆ.
- ಹಣದುಬ್ಬರ ಸೂಚ್ಯಂಕ: ಖಚಿತ ಪಿಂಚಣಿ, ಖಚಿತ ಕುಟುಂಬ ಪಿಂಚಣಿ ಮತ್ತು ಖಚಿತ ಕನಿಷ್ಠ ಪಿಂಚಣಿಯ ಮೇಲೆ ಸೂಚ್ಯಂಕದ ಪ್ರಯೋಜನವೂ ದೊರೆಯಲಿದೆ.
- ಗ್ರ್ಯಾಚುಯಿಟಿ: ಗ್ರ್ಯಾಚುಯಿಟಿ ಎಂದರೆ ನಿವೃತ್ತಿಯ ಸಮಯದಲ್ಲಿ ದೊರೆಯುವ ಒಂದು ದೊಡ್ಡ ಮೊತ್ತ. ಇದು ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವೆಗೆ ನಿವೃತ್ತಿ ದಿನಾಂಕದಂದು ಮಾಸಿಕ ವೇತನದ (ವೇತನ+ತುಟ್ಟಿಭತಭತ್ಯೆ) 1/10 ಆಗಿರುತ್ತದೆ. ಪಾವತಿಯಿಂದ ಖಚಿತ ಪಿಂಚಣಿಯ ಪ್ರಮಾಣ ಕಡಿಮೆಯಾಗುವುದಿಲ್ಲ.
ಯಾರು ಯುಪಿಎಸ್ ಸೇರಬಹುದು?
ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್.ಪಿ.ಎಸ್) ಉಳಿಯಲು ಅಥವಾ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಸೇರಲು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ. ಈ ಬಗ್ಗೆ ಮಾಹಿತಿ ನೀಡಿರುವ ಟಿ.ವಿ. ಸೋಮನಾಥನ್, 2004 ರಿಂದ ಎನ್‌ಪಿಎಸ್ ಹೊಂದಿರುವ ಈಗಾಗಲೇ ನಿವೃತ್ತರಾದ ಎಲ್ಲರಿಗೂ ಯುಪಿಎಸ್ ಅನ್ವಯಿಸುತ್ತದೆ ಎಂದು ಹೇಳಿದರು. ಹೊಸ ಯೋಜನೆ ಏಪ್ರಿಲ್ 1 2025 ರಿಂದ ಜಾರಿಗೆ ಬಂದರೂ, ಎನ್ ಪಿ ಎಸ್ ಪ್ರಾರಂಭವಾದ ಸಮಯದಿಂದ ನಿವೃತ್ತರಾದ ಪ್ರತಿಯೊಬ್ಬರು ಮತ್ತು ಮಾರ್ಚ್ 31,2025 ರವರೆಗೆ ನಿವೃತ್ತರಾಗುವವರೂ, ಈ ಯೋಜನೆಯ ಎಲ್ಲಾ ಐದು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ ಎಂದರು.
ಯು.ಪಿ.ಎಸ್ v/s ಎನ್.ಪಿ.ಎಸ್
2004ರ ಜನವರಿಯಲ್ಲಿ ಪರಿಚಯಿಸಲಾದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಮೂಲತಃ ಸರ್ಕಾರಿ ಉದ್ಯೋಗಿಗಳಿಗೆ ಮೀಸಲಾದ ಸರ್ಕಾರಿ ಪ್ರಾಯೋಜಿತ ನಿವೃತ್ತಿ ಯೋಜನೆಯಾಗಿತ್ತು. ಬಳಿಕ, 2009ರಲ್ಲಿ, ಇದನ್ನು ಇತರ ಎಲ್ಲಾ ವಲಯಗಳಿಗೂ ಅನ್ವಯವಾಗುವಂತೆ ವಿಸ್ತರಿಸಲಾಯಿತು. ಎನ್.ಪಿ.ಎಸ್ ಅನ್ನು ಸರ್ಕಾರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಟಿ.ಎಫ್.ಆರ್.ಡಿ.ಎ) ಜಂಟಿಯಾಗಿ ನಿರ್ವಹಿಸುತ್ತದೆ ಮತ್ತು ಇದನ್ನು ನಿವೃತ್ತಿಗೆ ಅನುಗುಣವಾಗಿ ಧೀರ್ಘವಧಿಯ, ಸ್ವಯಂ ಪ್ರೇರಿತ ಹೂಡಿಕೆ ಯೋಜನೆಯಾಗಿ ವಿನ್ಯಾಸಗೊಳಿಸಲಾಗಿದೆ. ಎನ್.ಪಿ.ಎಸ್ ಗಣನೀಯ ಹೂಡಿಕೆ ಲಾಭದ ಸಾಧ್ಯತೆಯೊಂದಿಗೆ ಪಿಂಚಣಿಯನ್ನು ಖಚಿತಪಡಿಸುತ್ತದೆ. ನಿವೃತ್ತಿಯ ನಂತರ, ನೌಕರರು ತಮ್ಮ ಹೂಡಿಕೆಯ ಒಂದು ಭಾಗವನ್ನು ಹಿಂಪಡೆಯುವ ಆಯ್ಕೆ ಹೊಂದಿರುತ್ತಾರೆ, ಉಳಿದ ಮೊತ್ತವನ್ನು ಮಾಸಿಕ ಆದಾಯವಾಗಿ ವಿತರಿಸಲಾಗುತ್ತದೆ. ಈ ಯೋಜನೆ ನಿವೃತ್ತಿಯ ನಂತರ ಖಚಿತ ಆದಾಯ ಒದಗಿಸುತ್ತದೆ.
ಆಗಸ್ಟ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಎನ್.ಪಿ.ಎಸ್ 2 ಹಂತಗಳಾಗಿ ವಿಂಗಡಣೆ
ಶ್ರೇಣಿ 1 ಖಾತೆ ಮತ್ತು ಶ್ರೇಣಿ 2 ಖಾತೆ. ಶ್ರೇಣಿ 1 ಖಾತೆಯನ್ನು ಆಯ್ಕೆ ಮಾಡಿಕೊಳ್ಳುವವರು ನಿವೃತ್ತರಾದ ನಂತರವೇ ಹಣ ಹಿಂಪಡೆಯುವುದು, ಆದರೆ ಶ್ರೇಣಿ 2 ಖಾತೆಗಳು ಮುಂಚಿತವಾಗಿ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡುತ್ತವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿಸಿಡಿ ಅಡಿಯಲ್ಲಿ, ಎನ್.ಪಿ.ಎಸ್ ನಲ್ಲಿ ಹೂಡಿಕೆ ಮಾಡುವುದರಿಂದ 1.5ಲಕ್ಷ ರೂ.ವರೆಗಿನ ಮೊತ್ತ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಎನ್.ಪಿ.ಎಸ್ ಕಾರ್ಪಸ್ ನಾ ಶೇ.60 ರಷ್ಟನ್ನು ಹಿಂಪಡೆಯುವುದು ರಿಂದ ಅದು ತೆರಿಗೆ ಮುಕ್ತವಾಗಿರುತ್ತದೆ.
ಒ.ಪಿ.ಎಸ್ ಗಿಂತ ಎನ್.ಪಿ.ಎಸ್ ಹೇಗೆ ಭಿನ್ನ?
ಡಿಫೈನ್ಡ್ ಬೆನಿಫಿಟ್ ಪಿಂಚಣಿ ವ್ಯವಸ್ಥೆ (ಡಿಬಿಪಿಎಸ್) ಎಂದು ಕರೆಯಲಾಗುವ ಹಳೆಯ ಪಿಂಚಣಿ ಯೋಜನೆ (ಒ.ಪಿ.ಎಸ್) ನೌಕರನು ಪಡೆದ ಕೊನೆಯ ವೇತನವನ್ನು ಆಧರಿಸಿತ್ತು. ಎನ್.ಪಿ.ಎಸ್ ಅನ್ನು ಡಿಫೈನ್ಡ್ ಕಾಂಟ್ರಿಬ್ಯೂಷನ್ ಪಿಂಚಣಿ ವ್ಯವಸ್ಥೆ (ಡಿಸಿಪಿಎಸ್) ಎಂದು ಕರೆಯಲಾಗುತ್ತದೆ. ಇದರಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ಮಾನದಂಡಗಳ ಪ್ರಕಾರ ನಿವೃತ್ತಿಯ ಸಮಯದಲ್ಲಿ ಪಾವತಿಸಬೇಕಾದ ಪಿಂಚಣಿ ಸಂಪತ್ತನ್ನು ಕ್ರೋಢೀಕರಿಸಲು ಕೊಡುಗೆ ನೀಡುತ್ತಾರೆ. ಏಕೀಕೃತ ಪಿಂಚಣಿ ಯೋಜನೆ ಅಥವಾ ಯುಪಿಎಸ್ ಯಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್.ಪಿ.ಎಸ್) ಗಿಂತ ಭಿನ್ನವಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಸ್ಥಿರ ಖಚಿತ ಪಿಂಚಣಿಯ ಅವಕಾಶವಿರುತ್ತದೆ. ಇದು ನೌಕರರಿಗೂ ಸಹಾಯಕವಾಗಲಿದೆ.ಜಾರಿಯಾಗಲಿದೆ ಏಕೀಕೃತ ಪಿಂಚಣಿ ಯೋಜನೆ.
ವಿಶ್ವದ ಟಾಪ್ 100 ಐಸ್ಕ್ರೀಮ್ ಪಟ್ಟಿಯಲ್ಲಿ ಮಂಗಳೂರು ಪಬ್ಬಾಸ್ ಐಸ್ಕ್ರೀಮ್