ಆಧಾರ್ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವಾಗಿದೆ. ಭಾರತೀಯರು ತಮ್ಮ ವಿಶಿಷ್ಟ ಗುರುತಿಗಾಗಿ ಆಧಾರ್ ಕಾರ್ಡ್ ಹೊಂದಿರಲೇಬೇಕು. ಯಾವುದೇ ಒಂದು ಸೌಲಭ್ಯಗಳಿಗೂ ಆಧಾರ್ ಸಂಖ್ಯೆ ಜೋಡಣೆಯಾಗಿರಲೇಬೇಕಾಗಿದೆ. ಇಂತಹ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯು ಐ ಡಿ ಎ ಐ) ಈಗ ಆಧಾರ್ ಪೋರ್ಟಲ್ ನಲ್ಲಿ ದಾಖಲೆಗಳನ್ನು ಉಚಿತವಾಗಿ ಅಪ್ಲೋಡ್ ಮಾಡುವ ಗಡುವನ್ನು ವಿಸ್ತರಿಸಿದೆ.
ಸೇವೆಯ ಪರಿಷ್ಕೃತ ಗಡುವು ಡಿಸೆಂಬರ್ 14 ಆಗಿದೆ. ಹೊಸ ಸೇವೆಯು ಲಕ್ಷಾಂತರ ಆಧಾರ್ ಸಂಖ್ಯೆ ಹೊಂದಿರುವವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಉಚಿತ ಸೇವೆಯನ್ನು ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಪ್ರವೇಶಿಸಬಹುದು ಎಂದು ಆಧಾರ್ನ ನೋಡಲ್ ಏಜೆನ್ಸಿ ತಿಳಿಸಿದೆ. ತಮ್ಮ ದಾಖಲೆಗಳನ್ನು ಆಧಾರ್ ನಲ್ಲಿ ನವೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಯುಐಡಿಎಐ ಸಾರ್ವಜನಿಕರನ್ನು ಕೋರಿದೆ.