Agriculture

ಕೃಷಿ ವಿವಿಯಲ್ಲಿ ರೈತ ತರಬೇತಿ ಭವನ ಆರಂಭ

Share news

ಸಂಶೋಧನೆಯ ಜೊತೆಗೆ ರೈತರಿಗೆ ಕೌಶಲ ಅಭಿವೃದ್ಧಿ ಮತ್ತು ತರಬೇತಿ ನೀಡುವುದನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆರಂಭಿಸಿದೆ.

ಹೆಬ್ಬಾಳದಲ್ಲಿರುವ ಕೃಷಿ ವಿವಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೈತ ಭವನ ನಿರ್ಮಿಸಲಾಗಿದೆ. ಇಲ್ಲಿ ರೈತರಿಗೆ ಕೌಶಲ ಅಭಿವೃದ್ಧಿ ತರಬೇತಿಗಾಗಿ ಉಚಿತ ಊಟ, ವಸತಿಯ ಸೌಲಭ್ಯವಿದೆ.ಈ ಭವನವು ಅಕ್ಟೋಬರ್‌ ತಿಂಗಳಿಂದ ಕಾರ್ಯಾರಂಭ ಮಾಡಲಿದೆ. ಈ ಭವನದಲ್ಲಿ ಏಕಕಾಲದಲ್ಲಿ 45 ರೈತರು ವಾಸ್ತವ್ಯ ಮಾಡಬಹುದು.

‘ಕೃಷಿಯಿಂದ ಬರುವ ಆದಾಯವು ಅನಿಶ್ಚಿತತೆಯಿಂದ ಕೂಡಿದ್ದು, ರೈತರು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಈ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಇದರಿಂದ, ರೈತರು ಹೆಚ್ಚುವರಿ ಆದಾಯಗಳಿಸಲು ಸಹಾಯವಾಗಲಿದೆ. ಇಲ್ಲಿ ರೇಷ್ಮೆ, ಅಣಬೆ ಕೃಷಿ, ಬೀಜ ಉತ್ಪಾದನೆ, ಜೈವಿಕ ಗೊಬ್ಬರ ತಯಾರಿಕೆ, ಸಸ್ಯ ಸಂರಕ್ಷಣಾ ಉಪಕರಣಗಳ ದುರಸ್ತಿ, ಡ್ರೋನ್‌ ಚಾಲನೆ, ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಕುರಿತು ತರಬೇತಿಗಳನ್ನು ನೀಡಲಾಗುವುದು’ ಎಂದು ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಸ್.ವಿ. ಸುರೇಶ್ ತಿಳಿಸಿದರು.

ಕೃಷಿ ಚಟುವಟಿಕೆಗಳು, ತಂತ್ರಜ್ಞಾನ, ಮಿಶ್ರ ಬೆಳೆಗಳು, ಪ್ರಾಂತ್ಯವಾರು ಬೆಳೆಗಳು ಬಗ್ಗೆ ತರಬೇತಿ ನೀಡಲಾಗುತ್ತಿದೆ. ರೈತರು ಆಯ್ಕೆ ಮಾಡಿಕೊಳ್ಳುವ ವಿಷಯಗಳ ತರಬೇತಿ ಮುಗಿಯುವವರೆಗೂ ಅವರು ರೈತ ಭವನದಲ್ಲಿ ತಂಗಬಹುದು. ರಾಜ್ಯದ ಯಾವುದೇ ಜಿಲ್ಲೆಯ ರೈತರು ಇಲ್ಲಿಗೆ ಬರಬಹುದು. ಕೃಷಿ ವಿಕಾಸ ಕೇಂದ್ರಗಳು ಹಾಗೂ ಇತರೆ ಸಂಸ್ಥೆಗಳು ರೈತರನ್ನು ಗುಂಪುಗಳಾಗಿ ಆಯ್ಕೆ ಮಾಡಿ ತರಬೇತಿಗೆ ನಿಯೋಜಿಸಲಾಗುವುದು’ ಎಂದು ಅವರು ವಿವರಿಸಿದರು.


Share news

Related Articles

Leave a Reply

Your email address will not be published. Required fields are marked *

Back to top button