Agriculture

ಪಿಎಂ ಕಿಸಾನ್‌ನ 15ನೇ ಕಂತು ಶೀಘ್ರದಲ್ಲಿ ಬಿಡುಗಡೆ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಜುಲೈ 27, 2023 ರಂದು ಕೇಂದ್ರವು ಬಿಡುಗಡೆ ಮಾಡಿತ್ತು. 15 ನೇ ಕಂತಿನ ಮೊತ್ತವನ್ನು ಸರ್ಕಾರವು ನವೆಂಬರ್ ಮತ್ತು ಡಿಸೆಂಬರ್ 2023 ರ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಯೋಜನೆ ಪ್ರಯೋಜನ ಪಡೆಯಲು ಯಾರು ಅರ್ಹರು ?

ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್) ಲಾಭವನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.

ಯೋಜನೆಗೆ ಯಾರು ಅರ್ಹರಲ್ಲ?

  • ಸಾಂಸ್ಥಿಕ ಭೂಮಿಯನ್ನು ಹೊಂದಿರುವವರು (ವಸತಿ, ಮನೆ)
  • ಸಾಂವಿಧಾನಿಕವಾಗಿ ಅರ್ಹತೆಯನ್ನು ಹೊಂದಿರುವ ರೈತ ಕುಟುಂಬಗಳು
  • ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು ರೈತ ಕುಟುಂಬಗಳು
  • ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು
  • 10 ರೂಪಾಯಿಗಿಂತ ಅಧಿಕ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅರ್ಜಿ ಹೀಗೆ ಸಲ್ಲಿಸಿ :

ಹಂತ 1: ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ

ಹಂತ 2: ಹೋಮ್‌ಪೇಜ್‌ನಲ್ಲಿ Farmer’s Corner ಗೆ ಹೋಗಿ ‘New Farmer Registration’ ಮೇಲೆ ಕ್ಲಿಕ್ ಮಾಡಿ

ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಹಾಕಿ

ಹಂತ 4: click here to continue ಆಯ್ಕೆ ಮೇಲೆ ಕ್ಲಿಕ್ ಮಾಡಿ

ಹಂತ 5: YES ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ

ಹಂತ 6: ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್‌ ಔಟ್‌ ಅನ್ನು ತೆಗೆಯಿರಿ

ಸ್ಟೇಟಸ್ ಪರಿಶೀಲನೆ ಮಾಡುವುದು ಹೇಗೆ ?

ಹಂತ 1: ಮೊದಲು PM ಕಿಸಾನ್ ವೆಬ್‌ಸೈಟ್‌ www.pmkisan.gov.in ಗೆ ಭೇಟಿ ನೀಡಿ

ಹಂತ 2: ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ

ಹಂತ 3: ನಂತರ Beneficiary Status ಮೇಲೆ ಕ್ಲಿಕ್ ಮಾಡಿ

ಹಂತ 4: ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ

ಹಂತ 5: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ


Share news

Related Articles

Leave a Reply

Your email address will not be published. Required fields are marked *

Back to top button