Articles

ಚಹಾ ವ್ಯಾಪಾರಿಯ ಮಗಳು ಇಂದು ಭಾರತೀಯ ವಾಯುಸೇನೆಯಲ್ಲಿ ಪೈಲಟ್

Share news

ತಂದೆ ಚಹಾ ವ್ಯಾಪಾರಿ. ಬಡತನದ ವಾತಾವರಣ. ಕೇದಾರನಾಥದ ಪ್ರಕೃತಿ ವಿಕೋಪವನ್ನು ಟಿ.ವಿ.ಯಲ್ಲಿ ಕಂಡ ಅಂಚಲ್‌ಗೆ ತಾನೊಬ್ಬ ವಾಯುಪಡೆಯ ಪೈಲಟ್ ಆಗುವ ಕನಸು ಕಾಣುತ್ತಾಳೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಲೇಬರ್ ಇನ್‌ಸ್ಪೆಕ್ಟರ್ ಆಗಿ ಸೇವೆಯನ್ನು ಪ್ರಾರಂಭಿಸುತ್ತಾರೆ. ಈ ಇಲಾಖೆಯ ಕೆಲಸ ಅವರ ಕನಸನ್ನು ನನಸಗಾಗಿಸಲು ಬೆಂಬಲವಾಗಿ ನಿಲ್ಲುತ್ತದೆ ಆದರೆ ತನ್ನ ಕನಸನ್ನು ಬಿಡಲಿಲ್ಲ..

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

BHARATHAVANI NEWS

ಏರ್‌ಫೋರ್‌ ಸರ್ಧಾತ್ಮಕ ಪರೀಕ್ಷೆಗೆ ತರಬೇತಿ ತೆಗೆದುಕೊಳ್ಳಲು ಆಂಚಲ್‌ (Anchal Gangwal) ತಂದೆ ಸುರೇಶ ಗಂಗ್ವಾಲ್ ಸಾಲ ಮಾಡಿ ಮಗಳನ್ನು ಇಂದೋರ್‌ಗೆ ಕಳುಹಿಸುತ್ತಾರೆ. ಅಲ್ಲಿ ತರಬೇತಿ ಪಡೆದು ವಾಯುಪಡೆಯ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಾಳೆ. ಅಂಚಲ್ 5ನೆಯ ಸಲವು ಪರೀಕ್ಷೆಯನ್ನು ಎದುರಿಸಿದರೂ ಯಶಸ್ವಿಯಾಗುವದಿಲ್ಲ. ಅಂಚಲ್ ನಿರಾಶರಾಗದೇ ಛಲದಿಂದ 6ನೆಯ ಬಾರಿಗೆ ಎ. ಎಫ್.ಸಿ.ಎ. ಪರೀಕ್ಷೆಗೆ ಹಾಜರಾಗಿ ಪ್ರಥಮಳಾಗಿ ತೇರ್ಗಡೆ ಹೊಂದಿ, ತನ್ನ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿತ್ತಾರೆ. ನಿರಂತರ 6ನೆಯ ಬಾರಿ ಪ್ರಯತ್ನದಿಂದ ಭಾರತೀಯ ವಾಯುಸೇನೆಗೆ ಆಯ್ಕೆಯಾಗುತ್ತಾರೆ.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

ಪರೀಕ್ಷೆ ಬರೆದ 6 ಲಕ್ಷ ಅಭ್ಯರ್ಥಿಗಳಲ್ಲಿ ಕೇವಲ 22 ಅಭ್ಯರ್ಥಿಗಳು ಆಯ್ಕೆಯಾಗಿರುವದು ವಿಶೇಷ, ಇವರಲ್ಲಿ ಐವರು ಮಾತ್ರ ಯುವತಿಯರು. ಅಚಲ್‌ ವಾಯುಸೇನೆ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಆಯ್ಕೆಯಾದ ಒಬ್ಬಳೆ ಒಬ್ಬ ಯುವತಿಯು ಹೌದು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಅವರು ತಮ್ಮ ಟ್ವಿಟ್‌ ನಲ್ಲಿ ಅಂಚೆಲ್‌ರವರ ಸಾಧನೆ ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಬಡತನವಿದ್ದರೂ ತನ್ನ ಕನಸಿನ ಬೆನ್ನೇರಿ ಪ್ರಯತ್ನ ಬಿಡದೆ ಛಲದಿಂದ ಭಾರತೀಯ ವಾಯುಸೇನೆಯಲ್ಲಿ ಪೈಲೆಟ್ ಆದ ಆಕೆಯ ಸಾಧನೆ ಯುವಕರಿಗೆ ಮಾದರಿ..

ಆನ್‌ಲೈನ್‌ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಹೇಗೆ ? | ಇಲ್ಲಿದೆ ಸಂಪೂರ್ಣ ಮಾಹಿತಿ…

BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button