Articles

ವೃತ್ತಿಯಲ್ಲಿ ವೈದ್ಯೆಯಾದರೂ ಯಕ್ಷಗಾನದಲ್ಲಿ ಮಿಂಚುತ್ತಿರುವ ಕಲಾವಿದೆ ಡಾ. ವರ್ಷ ಶೆಟ್ಟಿ

Share news

ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಶ್ರೀಮಂತ ಕಲೆಯಲ್ಲಿ ಅನೇಕ ಯುವ ಕಲಾವಿದರು, ಹವ್ಯಾಸಿ ಕಲಾವಿದರು, ಮಹಿಳಾ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿದ್ದಾರೆ. ಇಂದು ನಾವು ಪರಿಚಯ ಮಾಡಲು ಹೊರಟ ಕಲಾವಿದರು ವೃತ್ತಿಯಲ್ಲಿ ಡಾಕ್ಟರ್, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆಯಾಗಿ ಮಿಂಚುತ್ತಿರುವವರು ಡಾ.ವರ್ಷ ಶೆಟ್ಟಿ.

18.07.1991ರಂದು ಶಶಿಕುಮಾರ್ ಹಾಗೂ ವಸುಧಾ ಶೆಟ್ಟಿ ಇವರ ಮಗಳಾಗಿ ಜನನ. ಡಾಕ್ಟರ್ ಹಾಗೂ PG in Hospital Administration ಇವರ ವಿದ್ಯಾಭ್ಯಾಸ. ಪ್ರಸ್ತುತ Ph.D in Hospital Administration ಮಾಡುತ್ತಿದ್ದಾರೆ. ಚಿಕ್ಕಮ್ಮನವರು ಪ್ರಮದಾ ಶೆಟ್ಟಿ, ಶುಭದ ಶೆಟ್ಟಿ ಹಾಗೂ ತಾಯಿ ವಸುಧಾ ಶೆಟ್ಟಿ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ರಕ್ಷಿತ್ ಶೆಟ್ಟಿ ಪಡ್ರೆ ಹಾಗೂ ಗಣೇಶಪುರ ಗಿರೀಶ್ ನಾವಡ ಇವರ ಯಕ್ಷಗಾನ ಗುರುಗಳು.

ವಿದ್ಯಾರ್ಥಿ ಬಸ್ ಪಾಸ್‌ಗೆ ಅರ್ಜಿ ಸಲ್ಲಿಕೆ ಹೇಗೆ ? ಶುಲ್ಕವೇಷ್ಟು ? ಮಾಹಿತಿ ಇಲ್ಲಿದೆ..

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಭಾಗವತರಲ್ಲಿ ಪ್ರಸಂಗದ ಪಾತ್ರದ ಕುರಿತು ಕೇಳಿ, ಚಿಕ್ಕಮ್ಮನವರಲ್ಲಿ ಪ್ರಸಂಗದ ಮಾಹಿತಿ ಪಡೆದುಕೊಂಡು ಹಾಗೂ ಸಹ ಕಲಾವಿದರ ಬಳಿ ಚರ್ಚಿಸಿ ತಿಳಿದುಕೊಳ್ಳುತ್ತೇನೆ.

ದೇವಿ, ಚಂಡ, ರಾಧಾ ವಿಲಾಸದ ರಾಧೆ, ಪ್ರಸಿದ್ಧಿ, ರೋಹಿಣಿ, ಅನಿರುದ್ಧ, ಬಲರಾಮ, ಲಕ್ಷ್ಮಿ, ಮೋಹಿನಿ, ರಾಮ, ಕೃಷ್ಣ ಹಾಗೂ ಸ್ತ್ರೀ – ಪುರುಷ ವೇಷಗಳು ನೆಚ್ಚಿನ ವೇಷಗಳು ಹಾಗೂ ಯಕ್ಷಗಾನ ರಂಗದಲ್ಲಿ ಮಾಡಿದ ಎಲ್ಲಾ ಪಾತ್ರ ಹಾಗೂ ಪ್ರಸಂಗಗಳು ಇವರ ನೆಚ್ಚಿನವು.
ಯಕ್ಷ ನಾಟ್ಯ ವೈಭವದಲ್ಲಿ ಪ್ರಸಿದ್ಧಿ ಪಡೆದದ್ದು ರಾಧಾ ವಿಲಾಸ, ನೆನಪಾದಳು ಶಾಕುಂತಲೆ ಹಾಗೂ ಕದ್ರಿ ಕ್ಷೇತ್ರ ಮಹಾತ್ಮೆಯಲ್ಲಿ ರೋಹಿಣಿ ಜನ ಮನ ಗೆದ್ದ ಪಾತ್ರಗಳು.

2022-23ನೇ ಸಾಲಿನ “ರಾಜ್ಯ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿಗತಿಯ ಬಗ್ಗೆ ಕಾಳಜಿ ಇದೆ. ಯಕ್ಷಗಾನದ ಬೆಳವಣಿಗೆ ಬಗ್ಗೆ ಹೆಮ್ಮೆ ಇದೆ. ಆದರೆ ಸಿಗುವ ಸ್ಥಾನಮಾನದ ಬಗ್ಗೆ ವಿಷಾದ ಇದೆ. ಹಾಗಂತ ನಮ್ಮನ್ನು ತುಂಬಾ ಪ್ರೀತಿಯಿಂದ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ, ಆ ಬಗ್ಗೆ ತೃಪ್ತಿ ಇದೆ. ಹೊಸತನವನ್ನು ಬಯಸುವ ಪ್ರೇಕ್ಷಕರಿಗೆ, ಅದನ್ನು ನೀಡುವ ಜವಾಬ್ದಾರಿ ಕಲಾವಿದರದು.

ಓದುವುದು, ವಿದ್ಯಾಭ್ಯಾಸ ಮುಂದುವರೆಸುವುದು, ಭಾರತನಾಟ್ಯ ಹಾಗೂ ಸಂಸಾರದ ಜೊತೆ ಹೆಚ್ಚಿನ ಅವಧಿ ಕಳೆಯುವುದು ಇವರ ಹವ್ಯಾಸಗಳು.

ದೆಹಲಿ, ಮುಂಬೈ, ಬೆಂಗಳೂರಿನಲ್ಲಿ ಸನ್ಮಾನ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ನೀಡಿ ಗೌರವಿಸಿದ್ದಾರೆ.

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಬೆಳ್ಳಿ ಗೆದ್ದ ಹಾಸನದ ಡಿಪಿ ಮನು

ಡಾ.ವರ್ಷ ಶೆಟ್ಟಿ ಅವರು ಜನವರಿ 14ರಂದು ಅಪುಲ್ ಆಳ್ವ ಅವರನ್ನು ಮದುವೆಯಾಗಿ ಮಗ ಸಮಕ್ಷ್ ಆಳ್ವ ಇವರೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಮಳೆ ನೀರು ಕೊಯ್ಲು ಮಾಡುವ ವಿಧಾನ ಮತ್ತು ಅದರ ಉಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ…

Photos By:- A.K Aithal, Anil S Karkera, Apul Alva Photography, Prashanth Malyadi.


ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.

2300 ಮಕ್ಕಳಿಂದ ಮೊಳಗಿದ ಸಾಮೂಹಿಕ ರಾಮಜಪ…


Share news

Related Articles

Leave a Reply

Your email address will not be published. Required fields are marked *

Back to top button