Articles

ಹೆಚ್ಚಿನದನ್ನು ಪಡೆಯಲು ಹೆಚ್ಚು ಮೌಲ್ಯಯುತ ವ್ಯಕ್ತಿಗಳಾಗಬೇಕು.

Share news

ಒಂದು ವ್ಯವಸ್ಥೆಯಾ ಸಂಸ್ಥೆಯಲ್ಲಿ ನಾವು ಸ್ವಪ್ರಯತ್ನದಿಂದ ಹೇಗೆ ವೇತನ ಪಡೆಯುತ್ತೇವೆ, ಎಷ್ಟು ಆದಾಯ ಗಳಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಆದರೆ ನಾವು ಇರುವ ವ್ಯವಸ್ಥೆಗೆ ಮತ್ತು ಆ ವ್ಯವಸ್ಥೆಯ ವಿವಿಧ ಅವಲಂಬಿತ ವಿಭಾಗಗಳಿಗೆ ನಾವು ಎಷ್ಟು ಮೌಲ್ಯವನ್ನು ಅಥವಾ ಸಹಾಯವನ್ನು ಒದಗಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮಗೆ ವೇತನ ನಿರ್ಧಾರ ಆಗುತ್ತದೆ. ನನ್ನಿಂದಾಗಿ ಒಂದು ವ್ಯವಸ್ಥೆಗೆ ಎಷ್ಟು ಸಹಾಯವಾಗಿದೆ ಎನ್ನುವ ಬಗ್ಗೆ ನಾವು ದಿನವೂ ಯೋಚಿಸಬೇಕು.

ಉದಾಹರಣೆಗೆ ನಾವು ಮಾಡುತ್ತಿರುವ ಉದ್ಯೋಗದಲ್ಲಿ ಒಂದು ಗಂಟೆಯ ಕೆಲಸಕ್ಕಾಗಿ ನಮಗೆ ರೂ.100/- ವೇತನ ನಮಗೀಗ ದೊರೆಯುತ್ತಾ ಇರಬಹದು. ಅದರ ಅರ್ಥ ನಾವು 60 ನಿಮಿಷಗಳ ಕಾಲ ನಮ್ಮ ಕೆಲಸದ ಸ್ಥಳದಲ್ಲಿ ಇದ್ದೇವೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ವ್ಯವಸ್ಥೆಯಾ ಸಂಸ್ಥೆಯು ನಮಗೆ ಗಂಟೆಗೆ ರೂ.100/- ವೇತನವನ್ನು ನೀಡುವುದಿಲ್ಲ. ಬದಲಿಗೆ ಆ 60 ನಿಮಿಷಗಳಲ್ಲಿ ನಾವು ರೂ.100/- ಕ್ಕೂ ಮೀರಿದ ಮೌಲ್ಯದ ಕೆಲಸವನ್ನು ವ್ಯವಸ್ಥೆಗೆ ಸಂಸ್ಥೆಗೆ ಒಟ್ಟುಗೂಡಿಸುತ್ತಿದ್ದೇವೆ ಎಂಬ ಕಾರಣಕ್ಕೆ ಅಷ್ಟು ವೇತನ ನೀಡುತ್ತದೆ. ಆದ್ದರಿಂದ ನಾವು ಪಡೆಯುವ ಹಣದ ರೂಪದ ವೇತನವು ನಾವು ಎಷ್ಟು ಗಂಟೆಗಳ ಅಥವಾ ವರ್ಷಗಳ ಕಾಲ ಕೆಲಸ ಮಾಡಿದ್ದೇವೆ ಎನ್ನುವುದರ ಆಧಾರದ ಮೇಲೆ ನಿರ್ಧಾರ ಆಗುವುದಿಲ್ಲ. ಬದಲಿಗೆ ವ್ಯವಸ್ಥೆ ಯಾ ಸಂಸ್ಥೆಗೆ ಎಷ್ಟು ಮೌಲ್ಯದ ಕೆಲಸ ಮತ್ತು ಸಹಾಯವನ್ನು ನಾವು ಸೇರಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಿರ್ಧಾರ ಆಗುತ್ತದೆ.

ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾರಾಜು ಸಾಧನೆ

ಒಬ್ಬ ತೆರೆದ ಹೃದಯದ ಶಸ್ತ್ರಚಿಕಿತ್ಸಕನಿಗೆ ಒಬ್ಬ ಸಾಮಾನ್ಯ ಚಹಾದ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರನಿಗಿಂತ ಹೆಚ್ಚಿನ ವೇತನವನ್ನು
ನೀಡಲಾಗುತ್ತದೆ. ಹೆಚ್ಚು ವೇತನವನ್ನು ನೀಡಲಾಗುತ್ತದೆ ಎನ್ನುವುದರ ಅರ್ಥ ಹೃದಯದ ಶಸ್ತ್ರಚಿಕಿತ್ಸಕ ಹೃದಯವಂತ ವ್ಯಕ್ತಿ, ಕಠಿಣ ಪರಿಶ್ರಮಿ, ಸುಂದರ ರೂಪವನ್ನು ಹೊಂದಿದ್ದಾನೆ, ಹೆಚ್ಚು ಬುದ್ಧಿವಂತ ಎನ್ನುವ ಕಾರಣಕ್ಕಾಗಿ ಅಲ್ಲ. ಆದರೆ ಒಂದಂತೂ ಸತ್ಯ, ತೆರೆದ ಹೃದಯ ಶಸ್ತ್ರಚಿಕಿತ್ಸಕ ಸಾಮಾನ್ಯ ಚಹಾದ ಅಂಗಡಿಯಲ್ಲಿ ಕೆಲಸ ಮಾಡುವವನಿಗಿಂತ ಹೆಚ್ಚು ವಿಶೇಷ ಜ್ಞಾನ, ಕೌಶಲ ಮತ್ತು ನಿರ್ದಿಷ್ಟ ತಿಳುವಳಿಕೆಯನ್ನು ಹೊಂದಿರುತ್ತಾನೆ. ತೆರೆದ ಹೃದಯ ಶಸ್ತ್ರಚಿಕಿತ್ಸಕ ಮಾಡುವ ವಿಶಿಷ್ಟವಾದ, ಕ್ಲಿಷ್ಟಕರವಾದ ಮತ್ತು ಸಂಕೀರ್ಣವಾದ ಕೆಲಸವನ್ನು ಕೆಲವೇ ಕೆಲವು ತಜ್ಞರಷ್ಟೇ ಮಾಡಲು ಸಾಧ್ಯ. ಚಹಾದ ಅಂಗಡಿಯಾತ ಮಾಡುವ ಕೆಲಸವನ್ನು ಬಹಳಷ್ಟು ಜನರು ಮಾಡಬಹುದು. ಈ ಕಾರಣದಿಂದ ಪ್ರಾಪಂಚಿಕವಾಗಿ ಹೃದಯ ಶಸ್ತ್ರಚಿಕಿತ್ಸಕರನ್ನು ಹೆಚ್ಚು ಮೌಲ್ಯವಿರುವ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸಾಮಾನ್ಯ ಚಹಾದ ಅಂಗಡಿಯಲ್ಲಿ ಕೆಲಸ ಮಾಡುವನಿಗಿಂತ 20-30 ಪಟ್ಟು ಹೆಚ್ಚು ವೇತನವನ್ನು ಹೃದಯ ಶಸ್ತ್ರಚಿಕಿತ್ಸಕರಿಗೆ ನೀಡಲಾಗುತ್ತದೆ.

ಒಟ್ಟಾರೆಯಾಗಿ ಒಬ್ಬ ವ್ಯಕ್ತಿಯು ವ್ಯವಸ್ಥೆಗೆ ಮತ್ತು ಒಂದು ಸಂಸ್ಥೆಗೆ ಎಷ್ಟು ಮೌಲ್ಯವನ್ನು ಪ್ರತಿಫಲವಾಗಿ ನೀಡುತ್ತಾನೆ ಎನ್ನುವುದರ ಇನ್ನೊಂದು ಅರ್ಥವೇ ಆತ ಗಳಿಸುವ ಆದಾಯ ಎನ್ನಬಹುದು. ಆದ್ದರಿಂದ ನಮ್ಮ ದುಡಿಮೆಯ ಮೂಲಕ ಹೆಚ್ಚು ವೇತನ ಪಡೆಯಬೇಕು ಎಂದರೆ ನಾವು ಉದ್ಯೋಗದ ಮೂಲಕ ವ್ಯವಸ್ಥೆಗೆ ಹೆಚ್ಚಿನ ಮೌಲ್ಯವನ್ನು ಪ್ರತಿಫಲವಾಗಿ ನೀಡಲು ಅಗತ್ಯವಿರುವ ಜ್ಞಾನ, ಕೌಶಲ ಮತ್ತು ತಜ್ಞತೆಯನ್ನು ಗಳಿಸಬೇಕು. ಪ್ರಪಂಚದಲ್ಲಿ ಹೆಚ್ಚು ಆದಾಯವನ್ನು ಗಳಿಸಲು ಇರುವ ಸರಿಯಾದ ದಾರಿಯೆಂದರೆ ಜ್ಞಾನ, ಕೌಶಲ, ಬುದ್ಧಿವಂತಿಕೆಯ ಮೂಲಕ ಹೆಚ್ಚು ಮೌಲ್ಯಯುತ ವ್ಯಕ್ತಿಯಾಗುವುದು.

ಅಗ್ನಿಪಥ್ ಯೋಜನೆ 2023 : ವಾಯುಪಡೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ಅರ್ಹತೆ, ಪೂರ್ಣ ವಿವರಗಳು

ಅಂದರೆ ಇತರರಲ್ಲಿ ಇರದೇ ಇರುವ ಕೌಶಲಗಳನ್ನು ತಾನು ಗಳಿಸಿಕೊಳ್ಳುವುದು. ಇದರ ಅರ್ಥ ನಾವು ಯಾರೂ ಓದದೇ ಇರುವಂತಹ ಪುಸ್ತಕಗಳನ್ನು ಓದಬೇಕು, ಯಾರು ಆಲೋಚಿಸದೇ ಇರುವಂತಹ ವಿಷಯಗಳ ಕುರಿತು ಯೋಚಿಸಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈಗ ನಾವು ಹೇಗಿದ್ದೇವೆಯೋ ಹಾಗೆಯೇ ಇದ್ದರೆ ನಾವು ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಜೀವನದಲ್ಲಿ ಹೆಚ್ಚು ಹೆಚ್ಚು ಪಡೆಯುವಂತೆ ಆಗಲು ನಾವು ಹೆಚ್ಚು ಮೌಲ್ಯಯುತ ವ್ಯಕ್ತಿಗಳಾಗುವ ಪ್ರಯತ್ನವನ್ನು ಮಾಡಬೇಕು. ಇದರಿಂದಾಗಿ ವ್ಯಕ್ತಿಗತವಾಗಿ ಹೆಚ್ಚು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ.

ಫ್ರಾನ್ಸ್‌ ಪ್ರವಾಸದಲ್ಲಿ ಮೋದಿ ನೀಡಿದ ಭಾರತೀಯತೆ ಸಾರುವ ಉಡುಗೊರೆಗಳು ಹೇಗಿದೆ ?

ಲೇಖನ:
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198


Share news

Related Articles

Leave a Reply

Your email address will not be published. Required fields are marked *

Back to top button