Articles

ಪ್ರಪಂಚದಾದ್ಯಂತ ಬರುವ ಜನರಿಗೆ ಪ್ರಾಚೀನ ಬಿಲ್ಲುಗಾರಿಕೆಯನ್ನು ಕಲಿಸುವ 72 ವರ್ಷದ ಕೇರಳದ ಗೋವಿಂದನ್ ಯಾರು ?

Share news

ಕೇರಳದ ವಯನಾಡಿನ ಕಾಡಿನಲ್ಲಿ ವಾಸಿಸುವ ‘ಆಶನ್’ ಎಂದು ಕರೆಯಲ್ಪಡುವ ಕೆ ಗೋವಿಂದನ್‌ ಅವರು ಬಿಲ್ಲು ಮತ್ತು ಬಾಣಗಳನ್ನು ಹಿಡಿದು ನಿಂತರೆ ಅವರ ಬಿಲ್ಲು ವಿದ್ಯೆಯ ಕೈಚಳಕ ನೋಡಿದರೆ ಮಹಾಭಾರತದಲ್ಲಿ ಬರುವ ಅರ್ಜುನ ನೆನಪಗುವುದು ಖಂಡಿತ. 72ರ ಹರೆಯದ ‘ಪ್ರಾಚೀನ ಬಿಲ್ಲುಗಾರ’ ಯುವ ಪೀಳಿಗೆಗೆ ಬಿಲ್ಲುಗಾರಿಕೆಯನ್ನು ಕಲಿಸುವುದನ್ನು ಈಗಲೂ ಮುಂದುವರೆಸಿದ್ದಾರೆ. ತಮ್ಮ ಹಳೆಯದಾದ ಕೌಶಲ್ಯವನ್ನು ಉಳಿಸುವ ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶ ಹೊಂದಿದ್ದಾರೆ.

ಗೋವಿಂದನ್ ಅವರು ಬೇಟೆಯನ್ನು ಪವಿತ್ರವೆಂದು ಪರಿಗಣಿಸುವ ವಯನಾಡಿನ ಮುಳ್ಳೂರ್ ಕುರ್ಮಾ ಸಮುದಾಯದಿಂದ ಬಂದವರು. ಅವರ ಸಮುದಾಯದ ಜನರು ಕೇವಲ ಆಹಾರಕ್ಕಾಗಿ ಬೇಟೆಯಾಡುತ್ತಾರೆ, ವ್ಯಾಪಾರಕ್ಕಾಗಿ ಅಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಗೋವಿಂದನ್ ತಾವು ಮತ್ತು ಅವರ ಪೂರ್ವಜರು ಬೇಟೆಯಾಡಿದ ಎಲ್ಲಾ ಪ್ರಾಣಿಗಳಿಗೆ ಪ್ರಾಯಶ್ಚಿತ್ತ ಮಾಡಲು ಸಸ್ಯಾಹಾರಿಯಾಗಲು ನಿರ್ಧರಿಸಿದರು.

ಪ್ರಸ್ತುತ, ಅವರು ತಮ್ಮ ದಿನದ ಬಹುಪಾಲು ಭಾಗವನ್ನು ಬಿದಿರನ್ನು ಬಳಸಿ ತಯಾರಿಸಿದ ಪರಿಕರಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅವರ ಸಮುದಾಯದಲ್ಲಿ ಅವರ ಉಪಕರಣವಾದ ಬಿಲ್ಲು ಬಾಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬೇಟೆಗಾರ ಸತ್ತಾಗ, ಆತನ ಉಪಕರಣಗಳನ್ನು ಅವನ ಜೊತೆಯೇ ಚಿತೆಗೆ ಹಾಕಲಾಗುತ್ತದೆ.

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

ಅವರನ್ನು ಭೇಟಿಯಾಗಿ ಅವರ ಕೈಚಳಕ ನೋಡಲುಬರುವುದಲ್ಲದೆ, ಪ್ರಪಂಚದಾದ್ಯಂತದ ಅನೇಕ ಜನರು ಬಿಲ್ಲು ವಿದ್ಯೆ ಕಲಿಯಲು ಅವರ ವಿದ್ಯಾರ್ಥಿಗಳಾಗಲು ಆಗಮಿಸುತ್ತಾರೆ. ಗೋವಿಂದನ್ ಅವರು ಈ ಕಲಿಯುವವರಲ್ಲಿ ಉತ್ಸಾಹವನ್ನು ಕಂಡು ಸಂತೋಷಪಡುತ್ತಾರೆ ಆದರೆ ಅವರದೇ ಸಮುದಾಯದ ಹೆಚ್ಚಿನ ಯುವಕರು ತಮ್ಮ ಹಳೆಯ ಬಿಲ್ಲುಗಾರಿಕೆ ತಂತ್ರಗಳನ್ನು ಕಲಿಯಲು ಆಸಕ್ತಿ ಹೊಂದಿಲ್ಲ ಎಂಬುದು ದುಃಖದ ಸಂಗತಿ.

ಗೋವಿಂದನ್ ಅವರಿಗೆ ವಯಸ್ಸು ಎಂದೂ ಅಡ್ಡಿಯಾಗಲಿಲ್ಲ. ಅವರು ಚುರುಕಾಗಿ, ಶಕ್ತಿಯುತವಾಗಿ ದಿನವಿಡೀ ಇದರಲ್ಲೇ ತೊಡಗಿಸಿಕೊಂಡಿದ್ದಾರೆ. ಪುರಾತನವಾದ ಬಿಲ್ಲುಗಾರಿಕೆಯನ್ನು ಸಂರಕ್ಷಿಸುವ ಬಗ್ಗೆ ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರಿಗೆ ಮುಂದಿನ ಪೀಳಿಗೆಗೆ ದಾಟಿಸಲು ನಿರ್ಧರಿಸಿದ್ದಾರೆ. ತಮ್ಮಲ್ಲಿರುವ ವಿದ್ಯೆಯನ್ನು ಮುಚ್ಚಿಡದೆ ಪರರಿಗೆ ದಾನ ಮಾಡುವ ಅವರ ಯೋಚನೆ ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ…

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ (KSOU) ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.


Share news

Related Articles

Leave a Reply

Your email address will not be published. Required fields are marked *

Back to top button