ಪ್ರೇರಣೆಲೇಖನ ಸಂಗಮ

5,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೀಠೋಪಕರಣಗಳಾಗಿ ಪರಿವರ್ತಿಸಿದ 4 ಸ್ನೇಹಿತರ ಯಶೋಗಾಥೆ

Share news

ಭಾರತದ ಪ್ರತಿ ಮೂಲೆಯಲ್ಲೂ ಟನ್ ಗಳಷ್ಟು ಪ್ಲಾಸ್ಟಿಕ್ ಉತ್ಪತ್ತಿಯಾಗುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಈ ಸಮಸ್ಯೆಗೆ ಪರಿಹಾರವಾಗಿ ಪ್ಲಾಸ್ಟಿಕ್ ಮೂಲಕ ಪೀಠೋಪಕರಣ ತಯಾರಿಸಿ ತಮ್ಮ ಬದುಕನ್ನು ಕಟ್ಟಿಕೊಂಡ 4 ಸ್ನೇಹಿತರ ಯಶೋಗಾಥೆ ಪ್ರತಿಯೊಬ್ಬರಿಗೂ ಪ್ರೇರಣೆ. 2017 ರಲ್ಲಿ, ಮಹಾರಾಷ್ಟ್ರದ ಅಮರಾವತಿಯ ನಾಲ್ವರು ಸ್ನೇಹಿತರು ಭಾರತ ದೇಶದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಉದ್ಯಮವನ್ನು ನಿರ್ಮಿಸಲು ತಲಾ 5 ಲಕ್ಷ ರೂಪಾಯಿಯಂತೆ ಬಂಡವಾಳ ಹೂಡಿಕೆ ಮಾಡಿದರು.

ಮಧುರ್ ಎನ್ ರಾಠಿ ಎಂಬಿಎ ವಿದ್ಯಾರ್ಥಿಯಾಗಿದ್ದಾಗ ಮತ್ತು ತ್ಯಾಜ್ಯ ನಿರ್ವಹಣೆ ಕುರಿತ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿಂದ ಈ ಯೋಚನೆ ಮೊಳಕೆಯೊಡೆಯಿತು. ಕಾಲೇಜು ಮುಗಿದ ಕೂಡಲೇ ಅವರು ರೋಶನ್ ಪಿಡಿಯಾರ್, ಭೂಷಣ್ ಬೂಬ್ ಮತ್ತು ಆಶಿಶ್ ಮೋದಕ್ ಅವರನ್ನು ಸೇರಿಸಿಕೊಂಡು ತ್ಯಾಜ್ಯ ನಿರ್ವಹಣಾ ಕಂಪನಿಯಾದ ರೀಸೈಕಲ್ ಬೆಲ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಉದ್ಯಮವನ್ನು ಪ್ರಾರಂಭಿಸಿದ ಆರಂಭಿಕ ದಿನಗಳಲ್ಲಿ, ಸ್ನೇಹಿತರು ವಿವಿಧ ಕಟ್ಟಡಗಳು ಮತ್ತು ಕೈಗಾರಿಕೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಅವುಗಳನ್ನು ಪ್ರತ್ಯೇಕಿಸಿ ಮತ್ತು ಮರುಬಳಕೆಯ 100 ಉತ್ಪನ್ನಗಳನ್ನು ತಯಾರಿಸಿದರು.

2018 ರಲ್ಲಿ,ಎರಡು ವರ್ಷಗಳ ನಂತರ ಅವರು ಸ್ವತಂತ್ರವಾಗಿ ಕಂಪನಿಯನ್ನು ಪ್ರಾರಂಭಿಸಲು ನಿರ್ಧರಿಸಿ ಪ್ಲಾಸ್ಟಿಕ್‌ನಿಂದ ಮರುಬಳಕೆಯ ತಮ್ಮದೇ ಆದ ಉತ್ಪನ್ನವನ್ನು ಮಾಡಲು ಮುಂದಾದರು ಹೀಗೆ ಒಂದು ವರ್ಷದ ಸಂಶೋಧನೆಯ ನಂತರ, ಅಕ್ಟೋಬರ್ 2019 ರಲ್ಲಿ ‘Econiture’ ಎಂಬ ಸಂಸ್ಥೆ ಹುಟ್ಟಿಕೊಂಡಿತು . ಇದೀಗ ತಾವೇ ಪೀಠೋಪಕರಣಗಳು ಮತ್ತು ಗೃಹಾಲಂಕಾರಗಳನ್ನು ಮಾರಾಟ ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇಲ್ಲಿಯವರೆಗೆ, ಸುಮಾರು 5000 ಕೆಜಿ ಪ್ಲಾಸ್ಟಿಕ್ ಅನ್ನು ಬಳಸಿ ಕುರ್ಚಿಗಳು, ಸ್ಟೂಲ್‌ಗಳು, ಚರಣಿಗೆಗಳು, ಸ್ಟ್ಯಾಂಡ್‌ಗಳು, ಕಪಾಟುಗಳು, ಮಡಕೆಗಳು, ಬೆಂಚುಗಳು ಮತ್ತು ಟೇಬಲ್‌ಗಳಂತಹ ಬಹು ಉತ್ಪನ್ನಗಳನ್ನು ತಯಾರಿಸಿ ಮರುಬಳಕೆ ಮಾಡಲಾಗಿದೆ.

Econiture ಎಲ್ಲಾ ಸರಕುಗಳನ್ನು ಅಮೆಜಾನ್ (amezon) ಮತ್ತು Saryu Homes ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟಕ್ಕಿವೆ. ಬೆಲೆ 300 ರಿಂದ 29,000 ರೂಪಾಯಿ ವರೆಗೆ ಇದೆ. ಇದೀಗ ಕಂಪನಿಯು 50 ಉದ್ಯೋಗಿಗಳನ್ನು ಹೊಂದಿದೆ ಮತ್ತು ಅವರಲ್ಲಿ 60 ಪ್ರತಿಶತ ಮಹಿಳೆಯರು. ಒಟ್ಟಾಗಿ, ಅವರು 1400 ಮೆಟ್ರಿಕ್ ಟನ್ ಒಣ ತ್ಯಾಜ್ಯವನ್ನು ಮರುಬಳಕೆಯಾಗಿ ಪರಿವರ್ತಿಸಿದ್ದಾರೆ. ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿ ಹಾನಿಯಾಗುವ ಭಯವಿಲ್ಲದೆ ಪೀಠೋಪಕರಣಗಳನ್ನು ಹೊರಾಂಗಣದಲ್ಲಿ ಇರಿಸಬಹುದಾಗಿದೆ.

Econiture ಮಾಸಿಕ 1.5- 2 ಲಕ್ಷ ರೂಪಾಯಿ ಆದಾಯವನ್ನು ಗಳಿಸುತ್ತಿದೆ. ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಮಾರಾಟದಿಂದ, ಕಂಪನಿಯ ಒಟ್ಟು ಆದಾಯವು ತಿಂಗಳಿಗೆ 7 ರಿಂದ 8 ಲಕ್ಷ ರೂ. ಮತ್ತು 60% ಉದ್ಯೋಗಿಗಳು ಮಹಿಳೆಯರು. ಕಂಪನಿಯಲ್ಲಿ ಎಲ್ಲಾ ಪ್ಲಾಸ್ಟಿಕ್ ಪ್ರತ್ಯೇಕತೆಯ ಕೆಲಸ ಮಹಿಳೆಯರಿಂದ ಮಾಡಲ್ಪಡುತ್ತದೆ. ತ್ಯಾಜ್ಯ ಉತ್ಪಾದಕರು ನೀಡುವ ಪ್ಲಾಸ್ಟಿಕ್‌ಗೆ ಒಂದು ವೇಳೆ ಹಣವನ್ನು ಬಯಸದಿದ್ದರೆ, ಅವರ ಅವಶ್ಯಕತೆಗಳಿಗೆ ಅನುಗುಣವಾಗಿ Econiture ಉತ್ಪನ್ನಗಳನ್ನು ಒದಗಿಸುತ್ತಾರೆ.

4 ಜನ ಸ್ನೇಹಿತರು ಪರಿಸರ ಸ್ನೇಹಿಯಾಗಿ ಹಾಗೂ ಸಮಾಜದ ಹಿತಕ್ಕಾಗಿ ಹುಟ್ಟು ಹಾಕಿದ ಪ್ಲಾಸ್ಟಿಕ್ ಮೂಲಕ ಪೀಠೋಪಕರಣ ಮಾಡುವ Econiture ಬ್ರ್ಯಾಂಡ್ ಯುವ ಪೀಳಿಗೆಗೆ ಸ್ಪೂರ್ತಿದಾಯಕ. ಅನೇಕರು ಇಂತಹ ಹೊಸ ಆವಿಷ್ಕಾರಗಳೊಂದಿಗೆ ಜನರ ಹಾಗೂ ದೇಶದ ಸಮಸ್ಯೆಗಳನ್ನು ಪರಿಹರಿಸುವ ವಿಭಿನ್ನ ಉಪಾಯದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.

ಭೇಟಿ ನೀಡಿ : https://www.econiture.com/


Share news

Related Articles

Leave a Reply

Your email address will not be published. Required fields are marked *

Back to top button