ಲೇಖನ ಸಂಗಮಸಿನಿ ವಿಹಾರ

ಮನೆ ಮೆಚ್ಚಿದ ಮಗಳಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿ ಬೆಡಗಿ ಅಮಿತಾ ಕುಲಾಲ್

Share news

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ “ಒಲವಿನ ನಿಲ್ದಾಣ” ಧಾರಾವಾಹಿಯಲ್ಲಿ ನಾಯಕಿ ತಾರಿಣಿ ಆಗಿ ನಟಿಸುತ್ತಿರುವ ಅಮಿತಾ ಕುಲಾಲ್ ಕಡಲನಗರಿ ಕರಾವಳಿಯ ಕುವರಿ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಮಲೆನಾಡ ಕುವರಿ ತಾರಿಣಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಅಮಿತಾ ಕುಲಾಲ್ ಕರುನಾಡಿನ ಮನೆ ಮೆಚ್ಚಿದ ಮಗಳು ಹೌದು ಅನ್ನಿ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿವರ್ಷ ನಡೆಯುವ ಅನುಬಂಧ ಅವಾರ್ಡ್ಸ್ ಕಳೆದ ವರ್ಷವೂ ಕೂಡಾ ನಡೆದಿದ್ದು ಪ್ರಸಕ್ತ ವರ್ಷದ “ಮನೆ ಮೆಚ್ಚಿದ ಮಗಳು” ಪ್ರಶಸ್ತಿ ಕರಾವಳಿ ಕುವರಿಯ ಮುಡಿಗೇರಿದೆ. “ಒಲವಿನ ನಿಲ್ದಾಣ ನನ್ನ ಮೊದಲ ಧಾರಾವಾಹಿ. ಮೊದಲ ಧಾರಾವಾಹಿಯಲ್ಲಿಯೇ ಮನೆ ಮೆಚ್ಚಿದ ಮಗಳು ಪ್ರಶಸ್ತಿ ದೊರಕಿದೆ. ಎಂದಿಗೂ ನಾನು ಇದರ ಬಗ್ಗೆ ಖಂಡಿತಾ ಯೋಚನೆ ಮಾಡಿರಲಿಲ್ಲ. ನಮ್ಮ ಧಾರಾವಾಹಿ ಆರಂಭವಾಗಿ ಸ್ವಲ್ಪ ಸಮಯ ಆಗಿತ್ತಷ್ಟೇ. ಒಮ್ಮೆಲೇ ನನ್ನ ಹೆಸರು ಕರೆದಾಗ ನಾನು 5 ಸೆಕೆಂಡ್ ಗಳ ಕಾಲ ಬ್ಲಾಂಕ್ ಆಗಿದ್ದೆ. ತುಂಬಾ ಖುಷಿಯಾಯಿತು. ಜನ ನನ್ನನ್ನು, ನಟನೆಯನ್ನು ಸ್ವೀಕರಿಸಿದ್ದಾರೆ ಎಂದು ಸಂತಸವಾಯಿತು” ಎಂದು ಹೇಳಿಕೊಂಡಿದ್ದರು ಅಮಿತಾ ಕುಲಾಲ್.

ಅಂದ ಹಾಗೇ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಮಿತಾ ಕುಲಾಲ್ ಅವರಿಗೆ ಕನ್ನಡ ಕಿರುತೆರೆ ಹೊಸತು ಹೊರತು ಕಿರುತೆರೆಯಲ್ಲ! ಹಿರಿತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಮಿತಾ ಕುಲಾಲ್ ಅವರ ಕಿರುತೆರೆ ಪಯಣ ಶುರುವಾಗಿದ್ದು ಪರಭಾಷೆಯ ಕಿರುತೆರೆಯ ಮೂಲಕ.

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ” ರೌಡಿ ಗಾರಿ ಪೆಳ್ಳಂ” ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆ ಅಂಗಳಕ್ಕೆ ಕಾಲಿಟ್ಟ ಅಮಿತಾ ಕುಲಾಲ್ ಅಲ್ಲಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಸದ್ಯ ಒಲವಿನ ನಿಲ್ದಾಣದ ತಾರಿಣಿಯಾಗಿ ನಟಿಸುತ್ತಿರುವ ಈಕೆ ತಮ್ಮ ನಟನಾ ಶೈಲಿಯ ಮೂಲಕ ವೀಕ್ಷಕರ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ “ಹ್ಯಾಪಿ ಜರ್ನಿ” ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅಮಿತಾ ಕುಲಾಲ್ ಮುಂದೆ “ಗಿಫ್ಟ್ ಬಾಕ್ಸ್” ಸಿನಿಮಾದಲ್ಲಿಯೂ ನಾಯಕಿಯಾಗಿ ಕಮಾಲ್ ಮಾಡಿದರು.

ಹಿರಿತೆರೆಯ ನಂತರ ಇದೀಗ ಕಿರುತೆರೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಡಲನಗರಿಯ ಕುವರಿಯ ಬಣ್ಣದ ನಂಟು ಶುರುವಾಗಿದ್ದು ಮಾಡೆಲಿಂಗ್ ನಿಂದ. ಪದವಿಯ ವಿದ್ಯಾಭ್ಯಾಸದ ಮಾಡೆಲಿಂಗ್ ನತ್ತ ಮುಖ ಮಾಡಿದ ಅಮಿತಾ ಕುಲಾಲ್ ಮುಂಬೈಗೆ ತೆರಳಿ ಮಾಡೆಲಿಂಗ್ ನ ಕುರಿತು ಮಗದಷ್ಟು ವಿಚಾರಗಳನ್ನು ಅರಿತುಕೊಂಡರು.

ಒಂದಷ್ಟು ಫ್ಯಾಷನ್ ಶೋಗಳಲ್ಲಿ ಮೋಡಿ ಮಾಡಿದ ಅಮಿತಾ ಕುಲಾಲ್ ರೂಪದರ್ಶಿಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ. ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಬಾದ್ ಸಾರೀಸ್ ಗಳಿಗೆ ರೂಪದರ್ಶಿಯಾಗಿ ಈಕೆ ಮಿಂಚಿದ್ದರು.

Join WhatsApp Group : https://chat.whatsapp.com/Da9eGexrq4ZB37XCxdQRie


Share news

Related Articles

Leave a Reply

Your email address will not be published. Required fields are marked *

Back to top button