ಪ್ರತಿಭಾನ್ವೇಷಣೆಲೇಖನ ಸಂಗಮ
Trending

ಯಕ್ಷಹೆಜ್ಜೆ-ಗೆಜ್ಜೆಯ ಕಲಾಶೃತಿ

Share news

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಹೆಗ್ಗೋಡು ಶ್ರೀಮತಿ ನಾಗರತ್ನ ಕಾಶಿ ಹಾಗೂ ಶ್ರೀ ಕೃಷ್ಣಮೂರ್ತಿ ಕಾಶಿ ಇವರ ಮಗಳಾಗಿ ೦೬.೧೦.೧೯೯೦ ರಂದು ಶೃತಿ ಕಾಶಿ ಅವರ ಜನನ. M.A (ಇಂಗ್ಲಿಷ್) ಇವರ ವಿದ್ಯಾಭ್ಯಾಸ. ಇವರ ಮನೆಯ ವಾತಾವರಣ ಹಾಗೂ ಹೆಗ್ಗೋಡಿನ ಸಾಂಸ್ಕೃತಿಕ ಚಟುವಟಿಕೆಗಳು ಶೃತಿ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಶ್ರೀ ಸಂಜೀವ ಸುವರ್ಣ ಬನ್ನಂಜೆ ಇವರ ಯಕ್ಷಗಾನದ ಗುರುಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ನೀವು:-
ನಮ್ಮಂಥಹ ಹವ್ಯಾಸಿ ಕಲಾವಿದರಿಗೆ ಪೂರ್ವ ತಯಾರಿ ಬಹಳ ಮುಖ್ಯ ಹಾಗೂ ಪ್ರಸಂಗದ ನಡೆ ಹಾಗೂ ನನ್ನ ಪಾತ್ರದ ಬಗ್ಗೆ ಭಾಗವತರು, ಕಲಾವಿದರೊಂದಿಗಿನ ಪೂರ್ವಭಾವಿ ಚರ್ಚೆ ಮಾಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶೃತಿ.

ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಸುಭದ್ರೆ, ಪ್ರಭಾವತಿ, ಕೃಷ್ಣ, ವೃಷಕೇತು, ಸತ್ಯಭಾಮೆ, ಕುಶ, ಅಭಿಮನ್ಯು ಇವರ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ :-
ಯಕ್ಷಗಾನ ಕಲಿಕಾ ಆಸಕ್ತಿ ಹೆಚ್ಚಾಗಿದೆ. ಕಲಿಕೆಯನ್ನು ಚೆನ್ನಾಗಿ ರೂಢಿಸಿಕೊಂಡರೆ ಭವಿಷ್ಯತ್ತಿಗೆ ಒಳ್ಳೆಯದು ಅನಿಸುತ್ತದೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಹೆಚ್ಚಿನ ಪ್ರೇಕ್ಷಕರು ಕಲಾವಿದಾಭಿಮಾನಿಗಳಾಗಿದ್ದಾರೆ. ಕಲಾಭಿಮಾನಿಗಳಾಗಬೇಕಿದೆ ಎಂದು ಅನಿಸುತ್ತದೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನಾದರೂ ಇದೆಯಾ :-
ಒಂದಷ್ಟು ಯಕ್ಷ ಪ್ರಯೋಗಗಳನ್ನು ಯೋಗ್ಯರ ನಿರ್ದೇಶನದಲ್ಲಿ ಮಾಡಬೇಕು. ಹೊಸತನದ ಹುಡುಕಾಟ.

ಹಲವಷ್ಟು ನಾಟಕ, ಏಕಪಾತ್ರಾಭಿನಯ, ಸಂಗೀತ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಗೆದ್ದಿರುತ್ತೇನೆ. ಯಕ್ಷಗಾನ, ನಾಟಕ, ಸಿನೆಮಾ ವೀಕ್ಷಣೆ ಹಾಗೂ ಅಭಿನಯ ಇವರ ಹವ್ಯಾಸಗಳು. ‘ಮಾಡರ್ನ್ ಮಹಾಭಾರತ’ ಕನ್ನಡ ಸಿನಿಮಾದಲ್ಲಿ ಪ್ರಧಾನ ಭೂಮಿಕೆಯ ಅಭಿನಯ.

ಶೃತಿ ಕಾಶಿ ಅವರು ಶಶಾಂಕ್ ಪಟೇಲ್, ಕೆಳಮನೆ (ಪ್ರೊಫೆಸರ್ ಹಾಗೂ ಯಕ್ಷಗಾನ ಕಲಾವಿದರು)
ಇವರನ್ನು ೦೧.೦೫.೨೦೧೩ ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಬರಹ : ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.


Share news

Related Articles

Leave a Reply

Your email address will not be published. Required fields are marked *

Back to top button