ಪ್ರೇರಣೆಲೇಖನ ಸಂಗಮ

ಭಾರತದ ಹೆಮ್ಮೆಯ ಸುಪುತ್ರಿ ಅವನಿ ಚತುರ್ವೇದಿ

Share news

2018-19 ರಲ್ಲಿ ಭಾರತೀಯ ಮೊದಲ ಬಾರಿಗೆ ಯುದ್ಧ ವಿಮಾನ ಚಲಾಯಿಸಿದ ಮೂವರು ಹೆಮ್ಮೆಯ ಮಹಿಳೆಯರಲ್ಲಿ ಅವನಿ ಚತುರ್ವೇದಿ ಕೂಡ ಒಬ್ಬರು. ತಮ್ಮ ಬದುಕಿನಲ್ಲಿ ಸಾಧನೆಯ ಶಿಖರವೇರಿದ, ನಡೆದು ಬಂದ ಹೆಜ್ಜೆಗಳು ಸಾವಿರಾರು ಯುವಕ ಯುವತಿಯರಿಗೆ ಪ್ರೇರಣೆದಾಯಿ.

ಭಾರತದ ಯುದ್ಧ ವಿಮಾನ MiG – 29 ಯುದ್ಧ ವಿಮಾನವನ್ನು ಮೊದಲ ಬಾರಿಗೆ ಬಾನಂಗಳದಲ್ಲಿ ಹಾರಿಸಿದ ಅವನಿ ಚತುರ್ವೇದಿ
ಭಾರತೀಯ ವಾಯುಸೇನೆಯಲ್ಲಿ ಹೊಸ ಇತಿಹಾಸವನ್ನೇ ಬರೆದಳು. 27 ಅಕ್ಟೋಬರ್ 1993 ರಲ್ಲಿ ರೇವಾ ಮಧ್ಯಪ್ರದೇಶದಲ್ಲಿ ಜನಿಸಿದ ಅವನಿ ಚತುರ್ವೇದಿ, ತನ್ನ ವಿದ್ಯಾಭ್ಯಾಸವನ್ನು ಅಲ್ಲೇ ಮಧ್ಯಪ್ರದೇಶದ ಸಣ್ಣ ಪಟ್ಟಣದಲ್ಲಿ ಮುಗಿಸಿ 2014 ರಲ್ಲಿ ರಾಜಸ್ಥಾನದ ಬನಸ್ಥಲಿ ವಿಶ್ವವಿದ್ಯಾಲಯದಲ್ಲಿ ಬಿ-ಟೆಕ್ ವ್ಯಾಸಂಗ ಮಾಡಿದಳು.

ಅವನಿ ಅವರು ತನ್ನ ಅಣ್ಣನ ಪ್ರೇರಣೆಯಿಂದ ತಾನು ವಾಯುಸೇನೆ ಸೇರಲು ಆಸಕ್ತಿ ಹೊಂದಿದ್ದರು, ಅವರ ಅಣ್ಣ ಭಾರತೀಯ ಸೇನಾ ಪಡೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಅವನಿ ತನ್ನ ಸೇನಾ ತರಬೇತಿಯನ್ನು ಭಾರತೀಯ ಸೇನಾ ತರಬೇತಿ ಅಕಾಡೆಮಿ ಹೈದರಾಬಾದ್ ನಲ್ಲಿ ಮುಗಿಸಿ ಭಾರತೀಯ ವಾಯುಸೇನೆಗೆ 2016ರಲ್ಲಿ ಆಯ್ಕೆಗೊಂಡರು. ಆಕೆ ತಾನು ಏನೆಂದು ವಿಶ್ವಕ್ಕೆ ತೋರಿಸಬೇಕೆಂಬ ಛಲದಿಂದ 2 ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ಕೊನೆಗೂ ತಾನು ಒಬ್ಬಳೇ Mig – 29 ಯುದ್ಧ ವಿಮಾನವನ್ನು 19 ಫೆಬ್ರವರಿ 2018ರಲ್ಲಿ ಹಾರಿಸಿದಳು. ಇದು ಭಾರತದ ಇತಿಹಾಸದಲ್ಲಿ ಮರೆಯಲಾರದ ಕ್ಷಣ.

ಇಂದು ಅವನಿ ಚತುರ್ವೇದಿಯಂತೆ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಮಹಿಳೆಯರಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಛಲ ಬಿಡದೆ ಪ್ರಯತ್ನ ಮಾಡುತ್ತಾ ಸಾಗಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತೀಯ ಸುಪುತ್ರಿ ಅವನಿ ಚತುರ್ವೇದಿಯೇ ಮಾದರಿ.


Share news

Related Articles

Leave a Reply

Your email address will not be published. Required fields are marked *

Back to top button