ಪ್ರೇರಣೆಲೇಖನ ಸಂಗಮ
Trending

ಕೆಲಸ ಸಿಗ್ತಿಲ್ವಾ ? ಮಾತಾಡೋಣ ಬನ್ನಿ….

Share news

‘ನಿರುದ್ಯೋಗ’ ದೇಶದ ಅಭಿವೃದ್ಧಿಯ ಹಾದಿಯಲ್ಲಿ ಪರಿಹರಿಸಬೇಕಾದ ಘನತರವಿಷಯ. ಯಾಕೆಂದರೆ ಯಾರು ಏನು ಮಾಡಬೇಕು ಎಂಬ ತೀರ್ಮಾನ ಆಗದಿದ್ದರೆ ಯಾರಿಂದಲೂ ಏನು ಮಾಡಲಾಗದೆ ಏನಕ್ಕೇನೋ ಆಗಿಬಿಡುತ್ತದೆ. ಇತರ ದೇಶಗಳಿಗೆ ಸವಾಲು ಹಾಕಿ ಭಾರತ ಎದೆಸೆಟೆದು ನಿಲ್ಲಬೇಕಾದರೆ, ಸಾಧಿಸಬೇಕಾದ್ದು ಕಾರ್ಯಪ್ರವೃತ್ತ ನಾಗರಿಕರ ಸೃಷ್ಟಿ. ರಾಷ್ಟ್ರದ ಪ್ರಜೆಯೆಂದೆನಿಸುವ ಸರ್ವರೂ ಕಾರ್ಯತತ್ಪರರಾದರೆ ದೇಶದ ಆಂತರಿಕ ವ್ಯವಹಾರ ಹಾಗೂ ಹಣದ ವಹಿವಾಟು ತನ್ನಿಂದ ತಾನಾಗಿ ವೃದ್ಧಿಸುತ್ತದೆ. ಇಲ್ಲಿ ಎದ್ದು ಬಂದು ಎದೆಗೆ ಬಡಿಯುವ ವಿಷಯ ‘ನಿರುದ್ಯೋಗ’.

ತಾನು ಅವಕಾಶದ ಸೆರೆಯಲ್ಲಿ ನುಗ್ಗಿ, ತಡೆಗಳನ್ನು ತಪ್ಪಿಸಿ, ಅರ್ಹವು – ಸಮಾಧಾನಕರವೂ ಆದ ವೃತ್ತಿ ಗಳಿಸುವುದು ಸುಲಭದ ಮಾತಲ್ಲ. ಶ್ರೀಮಂತ – ಬಡವ, ಹಳ್ಳಿ – ಪೇಟೆ, ಹುಡುಗ – ಹುಡುಗಿ, ಅಂತರ್ಮುಖಿ(intravort) – ಬಹಿರ್ಮುಖಿ(extravert) , ಹೀಗೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅನುಸರಿಸಿ ಪ್ರತಿಯೊಬ್ಬರೂ ‘ಕೆಲಸಕ್ಕಾಗಿ ಮಾಡುವ ಹುಡುಕಾಟ’ ಭಿನ್ನವಾಗಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಸಾಧನೆಯ ಹಾದಿ ಕಠಿಣ ಆಗುವುದು ಸ್ಪರ್ಧಿಗಳ ಸಂಖ್ಯೆ ಹೆಚ್ಚಾದ ಕಾರಣ. ಅದೇ ರೀತಿ ಒಂದೇ ಲಕ್ಷ್ಯದತ್ತ ಗುರಿ ಇಟ್ಟು ಮುನ್ನಡೆಯುವ ಧೈರ್ಯ ಕೂಡ ಇರುವುದಿಲ್ಲ. Backup ಅಗತ್ಯ.

ಉಪದೇಶಗಳು ಹೀಗಿರುತ್ತದೆ, “ನೀನು ನಿನ್ನ ಆಸೆಯ ಕೆಲಸಕ್ಕೆ ಏನು ಕಲಿಯಬೇಕೊ ಅದನ್ನು ಕಲಿ, ನಿನ್ನ ಅಚಂಚಲ ಶ್ರದ್ಧೆ ಮತ್ತು ಪರಿಶ್ರಮ ಖಂಡಿತ ನಿನ್ನನ್ನು ಅಲ್ಲಿ ತಲುಪಿಸುತ್ತದೆ”
ಹೌದಾ…! ನಿಜಾನಾ…..?
ಯಾರಿಗೊತ್ತು….!

ತೀರ್ಮಾನಿಸಬೇಕಾದ್ದು ನಾನು. ನನ್ನ ಸ್ವಂತ ನಿರ್ಧಾರಗಳು ಇತರರ ಅನುಭವ ಸಂಪನ್ನ ಉಪದೇಶಗಳನ್ನು ಮನ್ನಿಸಬೇಕು. ನನ್ನ ತೀರ್ಮಾನಗಳು ನನ್ನನ್ನು ಮುಂದಿನ ದಿನಗಳಲ್ಲಿ ಏನಾಗಿ ಕಾಣಬೇಕು ಎಂಬುದಕ್ಕೆ ಆದ್ಯತೆ ಕೊಡಬೇಕು. “ಭವಿಷ್ಯ ಹಸನಾಗಬೇಕಾದರೆ ತೀರ್ಮಾನಗಳು ಸ್ಪಷ್ಟವಾಗಿರಬೇಕಲ್ವಾ?” ನಿಜ ಹೇಳ್ಬೇಕಾದ್ರೆ ಹಾಗೇನೂ ಇಲ್ಲ….. ಕಾಲಿಟ್ಟಲ್ಲಿ ಜಾಗದಲ್ಲಿ ಮಣ್ಣನ್ನು ಚಿನ್ನ ಮಾಡಬೇಕೆಂದಿಲ್ಲ, Atleast ಹಾದು ಹೋಗಬೇಕು ಮತ್ತು ಒಳ್ಳೆಯ ಸ್ಥಾನಮಾನಗಳನ್ನು ಗಳಿಸುವಂತೆ ಆಗಬೇಕು ಅಷ್ಟೇ. ಅಲ್ವಾ…?

ನವು ಬಾಲ್ಯದಲ್ಲಿ ಮಾಡಿದ ಸಣ್ಣ ಪುಟ್ಟ ಸಾಧನೆಗಳಿಂದ ಇತರರು ನಮ್ಮ ಮೇಲೆ ಭರವಸೆ ಇಟ್ಟಿರಬಹುದು. ಅದಕ್ಕೆಲ್ಲ ತಲೆ ಕೆಡಿಸಬೇಕೆಂದಿಲ್ಲ… ಯಾಕೆಂದರೆ ‘ನಮ್ಮ ಕೊನೆ’ ಅದು ನಮ್ಮವರೆನಿಸುವ ನಮ್ಮ ಕುಟುಂಬದವರ ಮುಂದೆ ಮಾತ್ರ.

ವಾಸ್ತವಿಕತೆಗೆ ಬಂದರೆ, ವೃತ್ತಿ ಆಧಾರಿತ ಶಿಕ್ಷಣ ಕ್ರಮ ಅಂತ ಶಿಕ್ಷಣ ಪದ್ಧತಿಯನ್ನು ತಿದ್ದುಪಡಿ ಸುಮಾರು ಮಾಡಿದ್ದಾಯಿತು. ವ್ಯವಸ್ಥೆಯನ್ನು ದೂಷಿಸುವುದು ತಪ್ಪಲ್ಲ ಆದರೆ ವ್ಯವಸ್ಥೆಯ ತಿದ್ದುಪಡಿ ಅಷ್ಟೊಂದು ಸುಲಭವಲ್ಲ ಎಂಬುದನ್ನ ಒಪ್ಪಿಕೊಳ್ಳಬೇಕು ಅಷ್ಟೇ. ವಿದ್ಯಾರ್ಥಿಯ ಅರ್ಥ ಮಾಡಿಕೊಳ್ಳುವ ಅಥವಾ ಮನವರಿಕೆ ಮಾಡಿಕೊಂಡು ಅವಶ್ಯಕತೆಗೆ ಅನುಸಾರ ಬಳಸುವ ಸಾಮರ್ಥ್ಯವನ್ನು, ಅಳೆಯುವ ಮಾಪಕವಾಗಿ ಮಾತ್ರ ‘ವಿದ್ಯಾರ್ಹತೆ’ ಉಪಯೋಗವಾಗುತ್ತದೆ. ವೃತ್ತಿಗೂ ಶಿಕ್ಷಣಕ್ಕೂ ನೇರ ಸಂಬಂಧ ಖಂಡಿತ ಇಲ್ಲ. ನಿನ್ನ ವಿದ್ಯಾರ್ಹತೆಯು ಹೆಸರಿನೊಂದಿಗೆ ಬರೆಯಲು ಸಿಗುವ ಘನತೆಯ ವಿಷಯ ಅಂತ ಬಿಟ್ರೆ ಬೇರೇನೂ ಇಲ್ಲ. Engineering ಮಾಡಿ Accountant ಕೆಲಸ ಬೇಕಾದರೂ ಮಾಡಬಹುದು. ಕುಳಿತು ಕನಸು ಕಾಣುವುದನ್ನು ಬಿಟ್ಟು ಎದ್ದು ಹೊರ ನಡೆಯಬೇಕು. ಜಗತ್ತಿನ ಆಗುಹೋಗುಗಳಿಗೆ ಭಿನ್ನತೆಗೆ ಸಾಕ್ಷಿಯಾಗಬೇಕು. ಇನ್ನು ತುಂಬಾ ಜಾಗರೂಕರಾಗಿ ಮನಸ್ಸಿನಲ್ಲಿ ಇಡಬೇಕಾದ ವಿಷಯ ಏನೆಂದರೆ, ಕ್ಷಣಿಕ ಸುಖಕ್ಕೆ ವ್ಯಸನಿಯಾಗಬಾರದು. ಬಹುಶಃ ಇದರ ಬಗ್ಗೆ ವಿವರಣೆ ಅಗತ್ಯ ಇಲ್ಲ. ಹೊರ ಜಗತ್ತಿಗೆ ನಮ್ಮನ್ನು ನಾವು ಪರಿಚಯಿಸಿಕೊಂಡರೆ ಸಾಕು ಕೆಲಸ ಬೇಡ ಅಂದ್ರು ಸಿಗ್ತದೆ. First Job, First Salary ಅಂತ Status ಹಾಕ್ಲಿಕ್ಕೆ ಆಗುವ ಕೆಲಸ ಎಲ್ಲರಿಗೂ ಸಿಗಬೇಕೆಂದಿಲ್ಲ ಆದರೆ ಯಾವುದಾದರೂ ಒಂದು ಕೆಲಸ ಪಕ್ಕ. ಸರಕಾರಿ ನೌಕರಿಗಳನ್ನು ಪಡೆಯಬೇಕಾದರೆ, ಅದರ ಹಿಂದೆ ಅಲೆದಾಟ ಅಗತ್ಯ. ಆದರೆ ‘ಸಿಗುವುದಿದ್ದರೆ ಸಿಗಲಿ’ ಅಂತ ಹೋಗಬೇಕಷ್ಟೇ ವಿನಃ, ‘ಬೇಕೇ ಬೇಕು’ ಅಂತ ಹೋದರೆ ಹೃದಯವಿದ್ರಾವಕ ಅನುಭವಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. PHD NET SET Masters ಎಲ್ಲಾ ವಿದ್ಯಾರ್ಥಿ ಪಡೆದುಕೊಂಡು ಹೋದರು Influence ಅಲ್ಲಿ ಇನ್ಯಾರಿಗೋ Lecture ಕೆಲಸ ಸಿಕ್ಕಿಬಿಡುತ್ತದೆ. ಭರವಸೆ ಇರಲಿ ನಂಬಿಕೆ ಬೇಡ. ಯಾವುದರಲ್ಲೂ… ಯಾರಲ್ಲೂ….

“ಈ ಲೇಖನದಿಂದ ಏನು ಸಿಕ್ಕಿತು? ಕೆಲಸ?”
ಖಂಡಿತ ಇಲ್ಲ.
“ನಿರುದ್ಯೋಗದ ನಿರ್ವಚನ ಮತ್ತು ಶಾಶ್ವತ ಪರಿಹಾರ ಮಾರ್ಗ?”
ಅಲ್ಲವೇ ಅಲ್ಲ.
“ಮತ್ತಿನ್ನೇನು”
ಏನೋ…. ಅಮ್ಮ ತಬ್ಬಿಕೊಂಡ ಹಾಗೆ ಮಾವ ಪ್ರೀತಿಯಿಂದ ತಲೆ ಸವರಿದ ಹಾಗೆ….

ಲೇಖನ : ಅಭಿಷೇಕ್ ಮೇರ್ಟ ಅಡೂರು


Share news

Related Articles

Leave a Reply

Your email address will not be published. Required fields are marked *

Back to top button