ಸಿನಿ ವಿಹಾರ

ನೋಡಲೇಬೇಕಾದ ಸಾಕ್ಷ್ಯಚಿತ್ರ…‘ದಿ ಎಲಿಫೆಂಟ್ ವಿಸ್ಪರರ್ಸ್’

Share news

ನೋಡಲೇಬೇಕಾದ ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರತಿಯೊಂದು ದೃಶ್ಯವೂ ಕಥೆಯನ್ನು ಹೇಳುತ್ತವೆ.. ತಮಿಳುನಾಡಿನ ಮುದುಮಲೈ ಕಾಡಿನಲ್ಲಿ ಅನಾಥ ಪುಟ್ಟ ಆನೆ ಮರಿಯ ಆರೈಕೆಗಾಗಿ ತಮ್ಮ ಇಡೀಯ ಜೀವನವನ್ನೇ ಮುಡಿಪಾಗಿಟ್ಟ ದಂಪತಿಗಳ ಕಥೆ ನಿಜಕ್ಕೂ ಮನಮುಟ್ಟುತ್ತದೆ.. ಮಳೆಯಲ್ಲೂ ಆನೆಗೆ ಕೊಡೆ ಹಿಡಿದು ಕರೆದುಕೊಂಡು ಬರುವ ದೃಶ್ಯ ಕಣ್ಣಿಗೆ ಕಟ್ಟುತ್ತದೆ..

ಆ ದಂಪತಿಗಳ ಪ್ರೀತಿ ತಮ್ಮದೇ ಮಕ್ಕಳಂತೆ ಸಾಕುವ ರೀತಿ ನೋಡುವುದೇ ಸೊಗಸು. ಅವರ ಸಾಹಸವನ್ನು ಮೆಚ್ಚಲೇ ಬೇಕು ಮಾತ್ರವಲ್ಲದೇ ಪುಟ್ಟ ಆನೆ ಮರಿಯ ಜೊತೆ ಆಡುವುದು, ತಾವೇ ಕೈತುತ್ತು ತಿನ್ನಿಸುವುದು, ಸದಾ ಅದರೊಂದಿಗೆ ತಮ್ಮ ದಿನವನ್ನು ಕಳೆಯುವ ದಂಪತಿಗಳ ಕಾಳಜಿ ಅನಾಥ ಆನೆ ಮೇಲಿನ ಪ್ರೀತಿ ಅಧ್ಬುತ…ಆ ಆನೆಗೂ ಇವರೇ ತಂದೆ ತಾಯಿ ಮಗುವಿನಂತೆ ಆಡುವುದೇ ಚೆಂದ.. ಪ್ರಕೃತಿಯೊಂದಿಗೆ ಕಾಡಿನ ಪರಿಸರದ ಜೊತೆ ಬೆರೆತು ಆನೆಯೊಂದಿಗೆ ಬದುಕುವ ದಂಪತಿಗಳ ಪ್ರೀತಿ, ಭಾವಾನಾತ್ಮಕ ಸಂಬಂಧ ನಿಜಕ್ಕೂ ಶ್ಲಾಘನೀಯ…

ಕಾರ್ತಿಕಿ ಗೊನ್ಸಾಲ್ವೆಸ್ ಅವರ ನಿರ್ದೇಶನದ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ…. ಪ್ರಶಸ್ತಿಗೆ ಮಾತ್ರ ಚಿತ್ರ ಮೀಸಲಾಗದೆ ಪ್ರಾಣಿಗಳ ಮಾನವನ ಬಾಂಧವ್ಯ ಬೆಸೆಯುವ ಭಾವಾನಾತ್ಮಕ ಸಾಕ್ಷ್ಯಚಿತ್ರವಾಗಿ ಪ್ರೇರಣೆ ನೀಡುತ್ತದೆ.. ನೆಟ್ ಫ್ಲೀಕ್ಸ್ ಮೂಲಕ ವೀಕ್ಷಿಸಬಹುದು.. ನೋಡಲೇಬೇಕಾದ ಸಾಕ್ಷ್ಯಚಿತ್ರ…


Share news

Related Articles

Leave a Reply

Your email address will not be published. Required fields are marked *

Back to top button