ಪ್ರತಿಭಾನ್ವೇಷಣೆಲೇಖನ ಸಂಗಮ
Trending

ಕಲೆಗಾರಿಕೆ : ಅಲಂಕಾರಿಕ ಹೂತೋಟ ಶ್ರೀ ಶಂಕರ ತೋಟ……

Share news

ನಮ್ಮ ಪೂರ್ವಜರಾದ ಅಣ್ಣಮರಿ ಶ್ರೀ ಗೋವಿಂದ ಹೆಗಡೆಯವರು ಹಲವು ಶತಮಾನಗಳ ಹಿಂದೆಯೇ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡಕ್ಕೆ ಬಂದು ನೆಲೆಸಿ ,ಇವರ ವಂಶಾವಳಿಯ ಪೀಳಿಗೆಯು ಹಾಸ್ನಡ್ಕ ,ಶಂಕರತೋಟ, ಅಜ್ಜನಗದ್ದೆ, ಪೋನಡ್ಕ,ಕಂಜರ್ಪಣೆ ಹೀಗೆ 4 ಶಾಖೆಗಳಾಗಿದ್ದು ಇವುಗಳಲ್ಲಿ ಹಲವಾರು ಜನರು ಕೃಷಿ ವೃತ್ತಿಯಲ್ಲಿ ಜೊತೆಗೆ ಆಸಕ್ತಿ ಹವ್ಯಾಸಗಳಿಂದ ,ಸಾಧನೆಯ ಮೂಲಕ ಸಾರ್ಥಕತೆಯನ್ನು ಕಂಡವರಿದ್ದಾರೆ..

ಶ್ರೀ ರಾಮಚಂದ್ರಯ್ಯ ಶಂಕರತೋಟ ಹಾಗೂ ಶ್ರೀಮತಿ ಸರಸ್ವತಿ ಶಂಕರತೋಟ ದಂಪತಿಗಳು ದಿವಂಗತರಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಲ್ಲಿ ಮೊದಲನೆಯವರು ಶಂಕರನಾರಾಯಣ ಯ್ಯನವರು 6 ವರ್ಷಗಳ ಹಿಂದೆಯೇ ನಿಧನರಾಗಿದ್ದು, ಎರಡನೆಯವರು ಶ್ರೀ ವೆಂಕಟ್ರಮಣಯ್ಯ ಶಂಕರತೋಟ..ಶ್ರೀ ವೆಂಕಟ್ರಮಣಯ್ಯನವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಸರಕಾರಿ ಶಿಕ್ಷಕರ ತರಬೇತಿ ವಿದ್ಯಾಲಯ ಮಂಗಳೂರು ಇಲ್ಲಿ ಎರಡು ವರ್ಷ ಶಿಕ್ಷಕ ತರಬೇತಿ ಹೊಂದಿ 1959 ರಲ್ಲಿ ಬೆಳ್ಳಾರೆ,ಪೆರ್ವಾಜೆಯ ಏಕೋಪಾಧ್ಯಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ ನೇಮಕಗೊಂಡು ಶಿಕ್ಷಕ ವೃತ್ತಿಯನ್ನು ಆರಂಭಿಸಿದರು.

ಸುಳ್ಯ ತಾಲೂಕಿನ ಹಲವು ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ 1996 ನೇ ಇಸವಿ ಜುಲೈ31ರಂದು ಸುಳ್ಯ ಗಾಂಧಿನಗರ ಸರಕಾರಿ ಪ್ರೌಢ ಶಾಲೆಯಲ್ಲಿ ನಿವೃತ್ತಿ ಹೊಂದಿದರು. ತಮ್ಮ 37 ವರ್ಷಗಳ ಶಿಕ್ಷಕ ವೃತ್ತಿಯನ್ನು ಮುಗಿಸಿದರು. ಇವರು ಪ್ರವೃತ್ತಿಯ ಲ್ಲಿ ಉತ್ತಮ ಕಲೆಗಾರರಾಗಿದ್ದಾರೆ. ತಮ್ಮ ಚಿಕ್ಕಪ್ಪರಾದ ಅಜ್ಜನಗದ್ದೆ ಶ್ರೀ ಜಯರಾಮ ರ ಕಲೆಗಾರಿಕೆಯನ್ನು ನೋಡಿ ಸ್ಫೂರ್ತಿಗೊಂಡು, ತಾವೂ ಅದೇ ದಾರಿಯಲ್ಲಿ ನಡೆದು ಸಫಲತೆಯನ್ನು ಕಂಡಿದ್ದಾರೆ. ಅರ,ಚೂರಿ, ಎಕ್ಸಾ ಬ್ಲೇಡ್ ಗಳ ಮೂಲಕ ತೆಂಗಿನ ಚಿಪ್ಪಿನಲ್ಲಿ (ಕರಟ) ಹೂದಾನಿ, ಕಾಲುದೀಪ ಮುಂತಾದವು ಅರಳಿವೆ. ಸಿಮೆಂಟ್ ನಿಂದ ಚಟ್ಟಿ, ಆಮೆ ,ಬಾತುಕೋಳಿ ಮೊದಲಾದವುಗಳು ರೂಪುಗೊಂಡಿದೆ. ಮರಗಳ ತಿರುಳುಗಳಿಂದ ಚಮಚ, ಸೌಟು,ಜೈ ಗಂಟೆ ಕೋಲು ಇತ್ಯಾದಿಗಳನ್ನು ಕೆತ್ತಿದ್ದು ,ಕಾಷ್ಠ ಶಿಲ್ಪ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಜೊತೆಗೆ ಸೀಮೆ ಸುಣ್ಣದಲ್ಲಿ ಚಿಕ್ಕ ಚಿಕ್ಕದಾದ ರಂಗೋಲಿಗಳನ್ನು ಬಿಡಿಸುತ್ತಾರೆ.

ಹಳೆಯ ಕಾಲದ ವಸ್ತು,ಪಾತ್ರೆಗಳು ಇವರ ಸಂಗ್ರಹದಲ್ಲಿ ವೆ. 1959 ನೇ ಇಸವಿಯಿಂದ ಅಲಂಕಾರಿಕ ಹೂತೋಟ ನಿರ್ಮಾಣದ ಜೊತೆಗೆ ವಿವಿಧ ಆಕಾರದ ಕಲ್ಲುಗಳ ಸಂಗ್ರಹ ಇವರ ಹವ್ಯಾಸಗಳಲ್ಲಿ ಸೇರ್ಪಡೆಗೊಂಡಿದೆ. ಇದಲ್ಲದೆ ನೋವು, ಸರ್ಪ ಸುತ್ತು, ಸಿಬ್ಬ ಮೊದಲಾದವುಗಳಿಗೆ ವನಸ್ಪತಿ ಎಣ್ಣೆ ಔಷಧಿಗಳನ್ನು ತಯಾರಿಸಿಕೊಡುವುದು ಪರಂಪರೆಯಿಂದ ಬಂದಿದೆ. ಸುಳ್ಯದ ಹಳೇ ಗೇಟಿನ ಒಳಭಾಗದಲ್ಲಿರುವ “ಸ್ವರ್ಣಗಿರಿ” ಮನೆಯಲ್ಲಿ ಕಳೆದ 37 ವರ್ಷಗಳಿಂದ ವಾಸವಾಗಿರುವ 84 ನೇ ವಯಸ್ಸಿನ ಶ್ರೀ ವೆಂಕಟ್ರಮಣಯ್ಯ ಶಂಕರತೋಟ, ಪತ್ನಿ 74 ನೇ ವಯಸ್ಸಿನ ಶ್ರೀಮತಿ ಅಂಬಿಕಾ ಲಕ್ಷ್ಮಿ ದಂಪತಿಗಳ ಮಗ ಶ್ರೀ ರಾಮಚಂದ್ರ ಪ್ರಸಾದ್ ಬಳ್ಳಾರಿಯಲ್ಲಿ ನೌಕರಿ ಹೊಂದಿದ್ದು, ಮಗಳಾದ ಶ್ರೀಮತಿ ಆಶಾಭಾರತಿ ಬೆಂಗಳೂರಿನಲ್ಲಿ ನೌಕರಿ ಹೊಂದಿದ್ದಾರೆ..

ಈ ಸ್ವರ್ಣಗಿರಿ ಮನೆಗೆ ಪ್ರತಿ ದಿವಸ ಮಧ್ಯಾಹ್ನ 2.15 ಕ್ಕೆ ಆರಂಭದಲ್ಲಿ 2-3 ಪಾರಿವಾಳಗಳು ಬಂದು ,ನಂತರ ಸುಮಾರು 50 ರ ಸಂಖ್ಯೆಯಲ್ಲಿ ಗುಂಪುಗಳಾಗಿ ಶ್ರೀಮತಿ ಗಂಗಾ ಲಕ್ಷ್ಮೀ ಚೆಲ್ಲುವ ಗೋಧಿ ಕಾಳುಗಳನ್ನು ತಿಂದು ನಂತರ ಹಾರಿಹೋಗುತ್ತಿರುವುದು ಇಲ್ಲಿನ ವಿಶೇಷವಾಗಿದ್ದು, ನೋಡುವುದಕ್ಕೆ ತುಂಬಾ ಖುಷಿಕೊಡುತ್ತದೆ…

ಅಲಂಕಾರಿಕ ಹೂ ತೋಟ , ಕೆತ್ತನೆಗಳ ಆಗರ..
ಶ್ರೀ ಶಂಕರ ತೋಟ ಎನ್ನುವ ವಸ್ತು ಸಂಗ್ರಹದ ಆಲಯ

ಫೋಟೋ& ಬರಹ: ಬಾಲು ದೇರಾಜೆ ಸುಳ್ಯ


Share news

Related Articles

Leave a Reply

Your email address will not be published. Required fields are marked *

Back to top button