ಆರೋಗ್ಯಲೇಖನ ಸಂಗಮ

ಅಡುಗೆಯ ರುಚಿ ಹೆಚ್ಚಿಸುವ ಕರಿಬೇವು ಆರೋಗ್ಯವರ್ಧಕವೂ ಹೌದು

Share news

ಸಾರು, ಸಾಂಬಾರು, ಪಲ್ಯ ಅಡುಗೆ ಯಾವುದೇ ಆಗಿರಲಿ ಕೊನೆಯಲ್ಲಿ ಒಗ್ಗರಣೆ ಬಿದ್ದರೇನೇ ಮಾಡಿದ ಅಡುಗೆ ಪರಿಪೂರ್ಣ ಆದಂತೆ! ಅದರಲ್ಲೂ ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ರುಚಿಯನ್ನು ಹೆಚ್ಚು ಮಾಡುವುದಲ್ಲದೇ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿ.

ನಾವು ಊಟ ಮಾಡುವಾಗ ಸಾರು, ಸಾಂಬಾರು, ಪಲ್ಯದಲ್ಲಿ ದೊರೆಯುವ ಕರಿಬೇವು ತೆಗೆದು ತಿನ್ನುವ ಬದಲು ಬದಿಗೆ ತೆಗೆದು ಇಡುತ್ತೇವೆ. ಆದರೆ ನಾವು ಬದಿಯಲ್ಲಿ ತೆಗೆದಿಡುವ ಕರಿಬೇವು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಸುಗಂಧಭರಿತವಾಗಿರುವ ಕರಿಬೇವನ್ನು ಸಂಸ್ಕೃತದಲ್ಲಿ ಕಾಲಾಶಕ ಎಂದು ಕರೆಯುತ್ತೇವೆ.

ಜೀರ್ಣಕ್ರಿಯೆಯನ್ನು ಸರಾಗವಾಗಿ ಸಾಗುವಂತೆ ಮಾಡುವ ಕರಿಬೇವಿಗೆ ನಮ್ಮ ದೇಹದಲ್ಲಿರುವ ಟಾಕ್ಸಿಕ್ ಅಂಶವನ್ನು ಹೊರಹಾಕುವ ಶಕ್ತಿಯಿದೆ. ಹೊಟ್ಟೆಗೆ ಸಂಬಂಧಿಸಿದ ಇತರ ಖಾಯಿಲೆಗಳ ಜೊತೆಗೆ ಕಫ, ಫಿತ್ತ, ಮಧುಮೇಹ, ಮಲಬದ್ಧತೆ, ರಕ್ತದೊತ್ತಡ ಇವುಗಳೆಲ್ಲವಿಗೂ ಮದ್ದು ಈ ಕರಿಬೇವು.

ಅಡುಗೆಯ ರುಚಿ ಹೆಚ್ಚಿಸುವ ಕರಿಬೇವು ಆರೋಗ್ಯವರ್ಧಕವೂ ಹೌದು

ಸಿಡಿಲಮರಿ – ರಂಗಪಾದರಸ ತೀರ್ಥಹಳ್ಳಿ ಗೋಪಾಲ ಆಚಾರ್ಯ

ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸುತ್ತಿರುವ ಸುಕೃತಾಗೇ ಒಂದೇ ಪಾತ್ರಕ್ಕೆ ಬ್ರಾಂಡ್ ಆಗಲು ಇಷ್ಟವಿಲ್ಲ

ನಮ್ಮ ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸುವ ಕರಿಬೇವು ಎಸಿಡಿಟಿಯನ್ನು ಕೂಡಾ ದೂರ ಮಾಡುತ್ತದೆ. ಹೌದು, ಎಸಿಡಿಟಿಯಿಂದಾಗಿ ಹೊಟ್ಟೆ ಮತ್ತು ಎದೆಯ ಭಾಗಗಳಲ್ಲಿ ಕಾಣಿಸಿಕೊಳ್ಳುವ ಉರಿಯನ್ನು ಈ ಕರಿಬೇವು ಹೋಗಲಾಡಿಸುತ್ತದೆ.

ಬಹುಮುಖ್ಯವಾದ ವಿಚಾರವೆಂದರೆ ಮನೆಯಂಗಳದಲ್ಲಿ ಬೆಳೆಯಲ್ಪಡುವ ಕರಿಬೇವನ್ನು ಆರ್ಯುವೇದ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ವಿಷವನ್ನು ಹೊರಹಾಕುವ ಸಾಮರ್ಥ್ಯವಿರುವ ಕರಿಬೇವಿನಲ್ಲಿ ಇರುವ ಕಾರಣ ವಿಷ ಜಂತುಗಳು ಕಚ್ಚಿದಾಗ ಇದರಿಂದ ತಯಾರಿಸಿದ ಪೇಸ್ಟ್ ಹಚ್ಚುತ್ತಾರೆ.

ಕರಿಬೇವಿನ ಎಲೆಯು ನಮ್ಮ ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ತೆಂಗಿನ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಆ ಎಣ್ಣೆಯನ್ನು ವಾರಕ್ಕೊಮ್ಮೆ ತಲೆಗೆ ಹಾಕಿ ಮಸಾಜ್ ಮಾಡಿದರೆ ಸಾಕು, ತಲೆಕೂದಲು ಉದುರುವುದು ನಿಂತು ಹೋಗುತ್ತದೆ. ಮಾತ್ರವಲ್ಲ ಕೂದಲು ಕೂಡಾ ಸೊಂಪಾಗಿ ಬೆಳೆಯುತ್ತದೆ. ಜೊತೆಗೆ ತಲೆಹೊಟ್ಟನ್ನು ನಿವಾರಿಸುವ ಇದು ನಮ್ಮ ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ.


Share news

Related Articles

Leave a Reply

Your email address will not be published. Required fields are marked *

Back to top button