ಆರೋಗ್ಯಲೇಖನ ಸಂಗಮ

ಪೋಷಕಾಂಶಗಳ ಆಗರವಾಗಿರುವ ಖರ್ಜೂರ ತಿನ್ನಲು ಮರೆಯದಿರಿ!

Share news

ವಿಟಮಿನ್ ಗಳು ಮತ್ತು ಖನಿಜಾಂಶಗಳ ಆಗರವಾಗಿರುವ ಖರ್ಜೂರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಫೈಬರ್ ಮತ್ತು ಪ್ರೋಟೀನ್ ಗಳ ಆಗರವಾಗಿರುವ ಖರ್ಜೂರದಲ್ಲಿ ವಿಟಮಿನ್ ಸಿ , ಬಿ1, ಬಿ2, ಬಿ3 ಮತ್ತು ಬಿ5, ಕ್ಯಾಲ್ಸಿಯಂ, ಕೊಬ್ಬಿನಾಂಶ, ರಂಜಕ, ತಾಮ್ರದ ಅಂಶಗಳಿದ್ದು ಅದು ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿ.
ಇದರ ಜೊತೆಗೆ ಇದರಲ್ಲಿ ನೈಸರ್ಗಿಕವಾಗಿರುವ ಶರ್ಕರ ಅಂಶಗಳದ ಗ್ಲುಕೋಸ್, ಸುಕ್ರೋಸ್ ಮತ್ತು ಫ್ರಕ್ಟೋಸ್ ಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಇನ್ನು ಮುಖ್ಯವಾದ ವಿಷಯವೆಂದರೆ ಎಲುಬಿನ ಆರೋಗ್ಯಕ್ಕೆ ಅಗತ್ಯವಿರುವ ಸಲೇನಿಯಂ, ಮ್ಯಾಂಗನೀಸ್, ತಾಮ್ರ ಮತ್ತು ಮ್ಯಾಗ್ನಿಶಿಯಂ ಅಂಶ ಇದರಲ್ಲಿ ಒಳಗೊಂಡಿದೆ. ಮಲಬದ್ಧತೆ ಸಮಸ್ಯೆ ಇರುವವರಿಗೆ ಖರ್ಜೂರ ಉತ್ತಮ ಮನೆ ಮದ್ದು. ರಾತ್ರಿ ನೆನೆಸಿಟ್ಟ ಖರ್ಜೂರವನ್ನು ಬೆಳಗ್ಗೆ ತಿನ್ನಬೇಕು. ಹೀಗೆ ತಿನ್ನುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಸಾಗುವಂತೆ ಆಗುತ್ತದೆ.

ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರಿಸುವ ಖರ್ಜೂರಕ್ಕೆ ರಕ್ತಹೀನತೆಯನ್ನು ತಡೆಗಟ್ಟುವ ಶಕ್ತಿಯಿದೆ. ಇದರ ಜೊತೆಗೆ ಹೃದಯದ ಸಮಸ್ಯೆ, ಎದೆಯುರಿ, ಆಸ್ಯಿಡಿಟಿಗೂ ಇದು ಉತ್ತಮ ಮದ್ದು. ನಿಯಮಿತವಾಗಿ ಖರ್ಜೂರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದ್ ಜೊತೆಗೆ ಕರುಳಿನ ಕಾರ್ಯ ಸರಾಗವಾಗಿ ಸಾಗುವಂತೆಯೂ ಈ ಖರ್ಜೂರ ಮಾಡುತ್ತದೆ.

ಚರ್ಮದ ಪುನಶ್ಚೇತನ ಶಕ್ತಿಯನ್ನು ಕಾಪಾಡಿಕೊಳ್ಳಲು ಕೂಡಾ ಈ ಖರ್ಜೂರ ಸಹಕಾರಿ. ಮಾತ್ರವಲ್ಲದೇ ನಿಯಮಿತವಾಗಿ ಖರ್ಜೂರವನ್ನು ಸೇವಿಸುತ್ತಿದ್ದರೆ ಚರ್ಮ ಮೃದುವಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಚರ್ಮದ ಸಮಸ್ಯೆಗಳು ಬಾರದಂತೆ ತಡೆಗಟ್ಟುವ ಸಾಮರ್ಥ್ಯ ಖರ್ಜೂರಕ್ಕಿದೆ.

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿದ್ದರೆ ಖರ್ಜೂರ ಸೇವಿಸಿದರೆ ಸಾಕು, ಇದರಿಂದ ದೇಹದಲ್ಲಿ ರಕ್ತ ಕಣಗಳು ಹೆಚ್ಚಾಗುತ್ತದೆ. ಗರ್ಭಿಣಿಯರು ಕೂಡಾ ಅಷ್ಟೇ, ಮರೆಯದೇ ಖರ್ಜೂರ ತಿಂದರೆ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ.‌ ಇದರ ಜೊತೆಗೆ ಭ್ರೂಣದ ಬೆಳವಣಿಗೆಗೂ ಕೂಡಾ ಇದು ಸಹಕಾರಿ. ಹೆರಿಗೆಯ ನಂತರವೂ ಖರ್ಜೂರ ಸೇವಿಸಿದರೆ ಎದೆಯಲ್ಲಿ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ.

ಖರ್ಜೂರದಲ್ಲಿ ಅಧಿಕ ಪ್ರಮಾಣದ ಫೋಲೇಟ್ ನ ಇದ್ದು ಇವು ಹೊಸ ಕೋಶಗಳ ರಚನೆಗೆ ಸಹಕಾರಿಯಾಗಿದೆ. ಜೊತೆಗೆ ಶಿಶುವಿನ ಬೆನ್ನುಹುರಿ ಮತ್ತು ಮಿದುಳಿನ ಆರೋಗ್ಯಕರ ಬೆಳವಣಿಗೆಗೆ ಇದು ಸಹಕಾರಿ. ರುಚಿರುಚಿಯಾದ ಖರ್ಜೂರ ಸೇವಿಸಿ, ಸದೃಢ ಆರೋಗ್ಯ ನಿಮ್ಮದಾಗಿಸಿ.

Join WhatsApp Group : https://chat.whatsapp.com/Da9eGexrq4ZB37XCxdQRie


Share news

Related Articles

Leave a Reply

Your email address will not be published. Required fields are marked *

Back to top button