ಲೇಖನ ಸಂಗಮಹಿಂದೂ ಆಚಾರ-ವಿಚಾರ

ಸ್ವಾಮಿ ವಿವೇಕಾನಂದರ ದೃಷ್ಟಿಕೋನದಲ್ಲಿ ಹಿಂದೂ ಧರ್ಮ

Share news

ಅನೇಕರು ನಾನು ಹಿಂದೂ ಧರ್ಮಕ್ಕೆ ಸೇರಿದವನು ಇನ್ನೂ ಕೆಲವರು ನಾನು ಭಾರತೀಯ ಎಂದು ಹೇಳಲು ಹಿಂದೆ ಮುಂದೆ ನೋಡುತ್ತಿರುವಾಗ ಒಮ್ಮೆ ಸ್ವಾಮಿ ವಿವೇಕಾನಂದರು ವಿದೇಶದ ನೆಲದಲ್ಲಿ ನಿಂತು ಕ್ರಿಶ್ಚಿಯನ್ನರು ತುಂಬಿದ ಸಭೆಯಲ್ಲಿ ಆವರೆಗೂ ಹಿಂದೂ ಧರ್ಮವು ಮೂಢನಂಬಿಕೆಯ ಮೂಲ ಎಂದೆಲ್ಲಾ ಹೇಳುತ್ತಿದ್ದ ಸಮಯದಲ್ಲಿ ಧೈರ್ಯದಿಂದ ಹಿಂದೂ ಧರ್ಮಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿ ಇಡೀಯ ವಿಶ್ವಕ್ಕೆ ಹಿಂದೂ ಧರ್ಮವನ್ನು ವಿಶಿಷ್ಟ ರೀತಿಯಲ್ಲಿ ಪರಿಚಯ ಮಾಡಿದ ಸ್ವಾಮಿಜಿಯ ಮಾತೆ ಅಪರೂಪದ್ದು ಹೇಗಿತ್ತು ಗೊತ್ತೇ ಚಿಕಾಗೋ ಭಾಷಣದಲ್ಲಿ “ಧಾರ್ಮಿಕ ಸಹನೆಯನ್ನೂ ಎಲ್ಲ ಧರ್ಮಗಳು ಸ್ವೀಕಾರಯೋಗ್ಯ ಎಂಬುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆ ಉಂಟು.ಅಷ್ಟೇ ಅಲ್ಲ ಎಲ್ಲಾ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪಿದ್ದೇವೆ.

ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಎಲ್ಲಾ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೂ ಅವರಿಗೆಲ್ಲಾ ಆಶ್ರಯ ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು” ಇದು ಸ್ವಾಮಿಜಿಯು ಹಿಂದೂ ಧರ್ಮ ಹಾಗೂ ಭಾರತವನ್ನು ಪರಿಚಯಿಸಿದ ರೀತಿ ಇದನ್ನು ಕೇಳಿಯೇ ಅಲ್ಲಿದ್ದ ಎಲ್ಲರೂ ದಿಗ್ಭ್ರಮೆಯಿಂದ ನೋಡುತ್ತಿದ್ದರು ಮಾತ್ರವಲ್ಲದೆ ಕೆಲವರಿಗೆ ಹುಟ್ಟೆಉರಿ ಇದು ಸ್ವಾಮಿಜಿಯ ತಾಕತ್ತು. ಸ್ವಾಮೀಜಿ ಮುಂದುವರಿದು ವೇದಗಳ ಬಗ್ಗೆ ಸುಂದರವಾಗಿ ಹೇಳುತ್ತಾರೆ. “ಹಿಂದೂಗಳು ತಮ್ಮ ಧರ್ಮವನ್ನು ಪಡೆದದ್ದು ಶ್ರುತಿಯ, ಎಂದರೆ ವೇದಗಳ ಮೂಲಕ ವೇದಗಳಿಗೆ ಆದಿಯಲ್ಲಿ ಅಂತ್ಯವಾಗಲಿ ಇಲ್ಲ ಎಂಬುದು ಹಿಂದೂಗಳ ನಂಬಿಕೆ. ವೇದವೆಂಬುದು ಯಾವ ಪುಸ್ತಕಕ್ಕೂ ಅನ್ವಯಿಸುವುದಿಲ್ಲ. ಬೇರೆ ಬೇರೆ ವ್ಯಕ್ತಿಗಳು, ಬೇರೆ ಬೇರೆ ಕಾಲಗಳಲ್ಲಿ ಕಂಡುಹಿಡಿದ ಆಧ್ಯಾತ್ಮಿಕ ನಿಯಮಗಳ ಬಂಡಾರವೇ ವೇದ. ಗುರುತ್ವಾಕರ್ಷಣೆ ನಿಯಮ ಹೇಗೆ ಅದನ್ನು ಕಂಡುಹಿಡಿಯುವ ಮೊದಲು ಇದ್ದಿತೋ, ಮುಂದೆ ಮಾನವ ಮರೆತರು ಅದು ಇದ್ದೇ ಇರುತ್ತದೆಯೋ, ಹಾಗೆಯೇ ಆಧ್ಯಾತ್ಮಿಕ ಜಗತ್ತನ್ನು ಆಳುತ್ತಿರುವ ನಿಯಮಗಳು ಕೂಡ. ಜೀವ ಜೀವಗಳ , ಜೀವ ಮತ್ತು ಎಲ್ಲ ಜೀವಿಗಳ ತಂದೆಯಾದ ದೇವರ ನಡುವೆ ಇರುವ ನೈತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳು. ಅವುಗಳನ್ನು ಕಂಡುಹಿಡಿಯುವುದಕ್ಕೆ ಮುಂಚೆಯು ಇದ್ದವು ಅವುಗಳನ್ನು ನಾವು ಮರೆತರು ಅವು ಇರಬಲ್ಲವು”

ಈ ಎರಡು ವಾಕ್ಯಗಳು ಇಡೀಯ ಹಿಂದೂಧರ್ಮದ ಭಾರತೀಯರ ಶಕ್ತಿಯನ್ನು ಇನ್ನಷ್ಟು ವೃದ್ಧಿಸಿ ಇಡೀ ವಿಶ್ವಕ್ಕೆ ವೇದ ಹಾಗೂ ಹಿಂದೂ ಧರ್ಮವನ್ನು ಅಗಾಧವಾಗಿ ತಿಳಿಸಿದ ಅತ್ಯದ್ಭುತ ಸಾಲುಗಳು ನಾವು ಸದಾ ನೆನಪಿಡಬೇಕಾದ ವಾಕ್ಯಗಳು ಬಹುಶಃ ಇದೇ ರೀತಿ ಮುಂದೆ ಸ್ವಾಮಿಜಿಯವರು ತಮ್ಮ ವಿದೇಶದ ಭಾಷಣಗಳಲ್ಲಿ ಸದಾ ಹಿಂದೂಧರ್ಮ ಹಾಗೂ ಭಾರತದ ಮೇಲಿದ್ದ ಕೀಳು ಭಾವನೆಯನ್ನು ತೊಳೆದು ಪರಿಶುದ್ಧ ವಿನೂತನ ಭಾರತದ ಪರಿಕಲ್ಪನೆ ನೀಡಿದ್ದು. ನಿಜವಾಗಿಯೂ ಭಾರತ ತಿಳಿಯಬೇಕಾದರೆ ಮೊದಲು ಮಾಡಬೇಕಾದದ್ದು ವಿವೇಕಾನಂದರನ್ನು ಅಧ್ಯಯನ ಮಾಡುವುದು, ಅದರೊಳಗೆ ಭಾರತವು ಅಡಗಿದೆ ಎಂಬುದನ್ನು ಮರೆಯುವಂತಿಲ್ಲ.


Share news

Related Articles

Leave a Reply

Your email address will not be published. Required fields are marked *

Back to top button