ಲೇಖನ ಸಂಗಮಹಿಂದೂ ಆಚಾರ-ವಿಚಾರ

ಇಂಡೋನೇಷ್ಯಾದ ನೆಲದಲ್ಲಿ ಹಿಂದೂ ಧರ್ಮ

Share news

ದೂರದ ಇಂಡೋನೇಷ್ಯಾವನ್ನು ಒಮ್ಮೆ ನೋಡಿದಾಗ ಹಿಂದೂ ಸಂಸ್ಕೃತಿ, ಪರಂಪರೆಯ ಅನೇಕ ಕುರುಹುಗಳು ಇಂದಿಗೂ ಕಂಡುಬರುತ್ತದೆ. ಇಂಡೋನೇಷ್ಯಾದಲ್ಲಿ 15 ಕ್ಕೂ ಮಿಕ್ಕಿ ಗಣೇಶನ ವಿಗ್ರಹವನ್ನು ನೋಡಬಹುದು. ಕೆಲವು ಕಡೆ ವಿಗ್ರಹಗಳ ಅವಶೇಷಗಳು ಮಾತ್ರ ಮ್ಯೂಸಿಯಂನಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲ ಅಲ್ಲಿಯ ಅನೇಕ ಬೌದ್ಧ ದೇವಾಲಯದಲ್ಲೂ ವಿಷ್ಣುವಿನ ವಾಹನ ಗರುಡನನ್ನು ಕಾಣಬಹುದು.

ಇಂಡೋನೇಷ್ಯಾದಲ್ಲಿ ಸಂಸ್ಕೃತ ಭಾಷೆಯು ಸಮೃದ್ಧವಾಗಿ ಅಲ್ಲಿನ ಭಾಷೆಯಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಸಂಸ್ಕೃತ ಮತ್ತು ಇಂಡೋನೇಷಿಯನ್ ಎರಡರಲ್ಲೂ ಗಜ ಮತ್ತು ಗಜ ಎರಡೂ ಆನೆ ಎಂದರ್ಥ. ಇಂಡೋನೇಷ್ಯಾದಲ್ಲಿ ಜೆಂಟಾ ಮತ್ತು ಸಂಸ್ಕೃತದಲ್ಲಿ ಘಂಟಾ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಗ್ರೆಹಣ ಎಂದು ಇಂಡೋನೇಷಿಯನ್ ಮತ್ತು ಗ್ರಹಣ ಸಂಸ್ಕೃತದಲ್ಲಿ ಹೇಳುತ್ತಾರೆ. ಮತ್ತು ಇಂಡೋನೇಷ್ಯಾ ಮತ್ತು ಸಂಸ್ಕೃತ ಎರಡರಲ್ಲೂ ಗ್ರಹ – ಮನೆ ಅಥವಾ ಮಹಲು, ಎರಡೂ ಭಾಷೆಗಳಲ್ಲಿ ಜಗತ್ ಎಂದರೆ ಜಗತ್ತು ಮತ್ತು ಎರಡರಲ್ಲೂ ಕಲಾ ಎಂದರೆ ಸಮಯ. ಆಧುನಿಕ ಇಂಡೋನೇಷಿಯನ್ನರು ಇಲ್ಲಿಯವರೆಗೆ ಹೊಂದಿರುವ ಸಂಸ್ಕೃತ ಭಾಷೆ ,ಮೌಲ್ಯಗಳು ನಮ್ಮ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಕ್ಷಿಯಾಗಿದೆ.

ಇವುಗಳ ಮಧ್ಯೆ ನೆನಪಿಸಿಕೊಳ್ಳಬೇಕಾದ ವಿಷಯ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಭಗವದ್ಗೀತೆಯ 5151 ನೇ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ತನಾಹ್ ಲಾಟ್ ದೇವಸ್ಥಾನದಲ್ಲಿ ದಾಖಲೆಯ ಘಟನೆ ನಡೆದಿದೆ. ಎಲ್ಲಾ ಹಿಂದುಗಳಿಗೆ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು ಜಗತ್ತಿಗೆ ನೀಡಿದ ಹೆಮ್ಮೆಯು ಭಾರತೀಯರದ್ದು ಹೌದು.

8,000 ಕ್ಕೂ ಹೆಚ್ಚು ಬಲಿನೀಸ್ ಮೂಲಕ ಯುವತಿಯರು ಭಗವದ್ಗೀತೆಯನ್ನು ಸಂಪೂರ್ಣವಾಗಿ ಜಪಿಸಲು ಒಟ್ಟುಗೂಡಿದರು. ಪವಿತ್ರ ಗ್ರಂಥದ ಎಲ್ಲಾ 18 ಅಧ್ಯಾಯಗಳನ್ನು ಜಪಿಸಲು ಪೂರ್ಣ 3 ಗಂಟೆಗಳ ಕಾಲ ಕುಳಿತುಕೊಂಡರು, ಮುಗಿಯುವವರೆಗೂ ಎದ್ದೇಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಸಾಧಿಸಿದರು ಇದು ಇಡೀ ವಿಶ್ವಕ್ಕೆ ಅನುಕರಣೀಯವೇ ಸರಿ.

ಪಠಣ ಪೂರ್ಣಗೊಂಡ ನಂತರ, ಮಹಾಕಾವ್ಯದಲ್ಲಿ ಕೃಷ್ಣ ಮತ್ತು ಅರ್ಜುನರ ಸಂವಾದಗಳಿಗೆ ಸಂಬಂಧಿಸಿದ ಹಲವಾರು ನೃತ್ಯಗಳು ಮತ್ತು ಪ್ರದರ್ಶನಗಳು ನಡೆಯಿತು. ಬಹುಶಃ ಇದು ಇನ್ನಷ್ಟು ಭಗವದ್ಗೀತೆ ಅಧ್ಯಯನದತ್ತ ಕರೆದೊಯ್ಯುವ ಉತ್ತಮ ಮಾರ್ಗವಾಗಿದೆ ಹಾಗೂ ಭಗವದ್ಗೀತೆ ಬರೀ ಹಿಂದೂ ಧರ್ಮಕ್ಕೆ ಸೀಮಿತವಾಗಿಲ್ಲ, ಇಡೀ ವಿಶ್ವಕ್ಕೆ ಜೀವನ ಕರ್ಮ ತಿಳಿಸುವ ಅಪರೂಪದ ಗ್ರಂಥ ಎಂಬುದು ಮರೆಯುವಂತಿಲ್ಲ.

ಬಲಿನೀಸ್‌ನ ದಯೆ, ಮುಗ್ಧತೆ, ಸ್ವಭಾವ, ಅವರ ದೃಢ ನಂಬಿಕೆ ಮತ್ತು ಭಕ್ತಿ, ಹಾಗೆಯೇ ಅವರ ಸಂಸ್ಕೃತಿಯ ಸಂರಕ್ಷಣೆ ಗಮನಾರ್ಹವಾದುದು ಮತ್ತು ಹೆಮ್ಮೆ ಪಡುವಂತ ಅನುಕರಣೀಯ ವಿಷಯ.

ಈ ರೀತಿ ವಿದೇಶದ ನೆಲದಲ್ಲಿ ಭಾರತದ ಸಂಸ್ಕೃತಿಯು ವಿಶ್ವವ್ಯಾಪಿಯಾಗಿ ಸದಾ ವಿಸ್ತಾರವಾಗುತ್ತಲೇ ಇದೆ. ಹಾಗಾಗೇ ಹಿಂದೂ ಧರ್ಮದ ಚಿಂತನೆಗಳಿಗೆ ಅಂತ್ಯ ಎಂಬುವುದೇ ಇಲ್ಲ, ಏಕೆಂದರೆ ಆಲದ ಮರದ ಬೇರುಗಳಂತೆ ನೂರಾರು ಕಡೆ ತನ್ನ ಬೇರುಗಳನ್ನು ಹಬ್ಬಿ ಗಟ್ಟಿಯಾಗಿ ಮಣ್ಣಿನೊಂದಿಗೆ ಬೆರೆತು ಎಂದು ನಾಶವಾಗದಂತೆ ನಿಂತು ಬಿಟ್ಟಿದೆ.


Share news

Related Articles

Leave a Reply

Your email address will not be published. Required fields are marked *

Back to top button