ಲೇಖನ ಸಂಗಮಹಿಂದೂ ಆಚಾರ-ವಿಚಾರ

ವರಮಹಾಲಕ್ಷ್ಮಿ ವ್ರತದ ಮಹತ್ವ

Share news

ಶ್ರಾವಣ ಮಾಸದ ಪ್ರಸಿದ್ಧ ಪರ್ವಗಳಲ್ಲಿ ಒಂದು ವರಮಹಾಲಕ್ಷ್ಮಿ ವ್ರತ. ಜಗನ್ಮಾತೆಯನ್ನು ಪ್ರಸನ್ನ ಗೊಳಿಸುವುದಕ್ಕೋಸ್ಕರ ಭಾರತದಲ್ಲಿ ಈ ಪರ್ವವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ಈ ವ್ರತವನ್ನು ಆಚರಿಸುವರು.

ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾನ್ತ್ಯ ಭಾರ್ಗವೇ।
ವರಲಕ್ಷ್ಮ್ಯಾ ವ್ರತಂ ಕಾರ್ಯಂ। ಸರ್ವ ಸಿದ್ದಿ ಪ್ರದಾಯಕಂ।।

ಶ್ರಾವಣ ಶುಕ್ಲ ಪಕ್ಷದ ಎರಡನೇ ಶುಕ್ರವಾರದಲ್ಲಿ ವ್ರತದ ಆಚರಣೆ ಎಂಬ ಅಭಿಪ್ರಾಯವೂ ಇದೆ. ವರಮಹಾಲಕ್ಷ್ಮಿ ವರಾ ಚ ಲಕ್ಷ್ಮೀಶ್ಚ ಎಂಬಂತೆ ವರವನ್ನು ನೀಡುವವಳು ಸರ್ವ ಮಂಗಳ ಗಳನ್ನು ದಯಪಾಲಿಸುವವಳು ಶ್ರೀ ಲಕ್ಷ್ಮಿ ಆಗಿದ್ದಾಳೆ. ನನಗೆ ಹಣ ಬೇಕು, ಜನ ಸಹಾಯ ಬೇಕು, ಕಾರ್ಯಸಿದ್ಧಿ ಬೇಕು, ಲೋಕಹಿತ ಬೇಕು, ಮುಕ್ತಿ ಬೇಕು ಎಂದು ಅನೇಕರು ಹೇಳುತ್ತಾರೆ ಅವರು ಅಪೇಕ್ಷಿಸುವ ಎಲ್ಲಾ ಸಂಪತ್ತನ್ನು ಶ್ರೇಯಸ್ಸನ್ನು ನೀಡುವುದು ಲಕ್ಷ್ಮಿ ಸ್ವರೂಪವೇ ಆಗಿದೆ. ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನ ಲಕ್ಷ್ಮಿ, ವಿದ್ಯಾಲಕ್ಷ್ಮಿ, ಶೌರ್ಯ ಲಕ್ಷ್ಮಿ, ಕೀರ್ತಿ ಲಕ್ಷ್ಮಿ, ಸೌಮ್ಯ ಲಕ್ಷ್ಮಿ ಮತ್ತು ವಿಜಯಲಕ್ಷ್ಮಿ ಎಂಬ ಅಷ್ಟ ಸ್ವರೂಪಗಳಿಂದ ಈ ದಿನ ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಶ್ರೀ ಎಂದರೆ ಸಂಪತ್ತು ಅಂದರೆ ಶ್ರೀ ಎಂಬ ಪದವು ಲಕ್ಷ್ಮಿಯ ಸ್ವರೂಪವನ್ನು ಸಾರುತ್ತದೆ. ಸಮುದ್ರ ಮಥನದ ಸಂದರ್ಭದಲ್ಲಿ ಹುಟ್ಟಿದಂತವಳು ಲಕ್ಷ್ಮಿಯು ಅಂತಹ ಸಮುದ್ರದಲ್ಲಿ ಜನಿಸಿದ ಆಕೆಯನ್ನು ಮಹಾಲಕ್ಷ್ಮಿ ಪರದೇವತೆ ಪರಮಪುರುಷನಾದ ನಾರಾಯಣನ ಪತ್ನಿ ಅಖಿಲ ಜಗನ್ಮಾತೆ ಅನಾದಿಸಿದ್ದೆ ಸರ್ವಶಕ್ತಿ ಸ್ವರೂಪಿಣಿ ಸರ್ವ ಪುರುಷಾರ್ಥಗಳನ್ನು ಅನುಗ್ರಹಿಸುವವಳು ಸರ್ವೇಶ್ವರೀ ಎಂದು ಭಕ್ತರು ಆರಾಧಿಸುತ್ತಾರೆ.

ವರಮಹಾಲಕ್ಷ್ಮಿ ವ್ರತ ಕಥೆಯಲ್ಲಿ ಚಾರುಮತಿ ಎಂಬ ಬಡ ಬ್ರಾಹ್ಮಣ ಹೆಂಗಸು ಕನಸಿನಲ್ಲಿ ಈ ವ್ರತದ ಮಹತ್ವವನ್ನು ಸಾಕ್ಷಾತ್ ದೇವಿಯಿಂದಲೇ ತಿಳಿದು ಅದರ ಆಚರಣೆಯನ್ನು ಮಾಡಿ ಸಕಲ ಸಂಪತ್ತನ್ನು ಹೊಂದಿದಳು ಎಂಬಂತಹ ಪ್ರತೀತಿ ಇದೆ. ಯಾ ದೇವಿ ಸರ್ವಭೂತೇಶು ಲಕ್ಷ್ಮಿ ರೂಪೇಣ ಸಂಸ್ಥಿತಾ ಎನ್ನುವಂತೆ ಲೋಕದ ಸಕಲ ಚೈತನ್ಯಗಳಲ್ಲಿಯೂ ಸರ್ವ ಸಂಪತ್ಪ್ರದಾಯಿಕೆಯಾಗಿ ಆರಾಧಿಸುವಂತಹ ಲಕ್ಷ್ಮಿ ಅಂತಹ ರಥವನ್ನು ವರಮಹಾಲಕ್ಷ್ಮಿ ವ್ರತ ಎನ್ನುವರು.

ವ್ರತ ನಿಷ್ಠೆ ಉಳ್ಳವರು ಸಂಕಲ್ಪ ಸಮೇತವಾಗಿ ದೇವಿಯನ್ನು ಕಲಶ ವಿಗ್ರಹಾದಿಗಳಲ್ಲಿ ಪೂಜೆ ಮಾಡುತ್ತಾರೆ. ವರಮಹಾಲಕ್ಷ್ಮಿ ವ್ರತದ ಆಚರಣೆಯಲ್ಲಿ ತಂತು ಪೂಜೆಯು ಅತ್ಯಂತ ಪ್ರಧಾನವಾದದ್ದು ಹೀಗೆ ಪೂಜಿಸಿದಂತಹ ದಾರವನ್ನು ಸ್ತ್ರೀಯರು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ, ಇದರಿಂದ ಮನೆಯಲ್ಲಿ ಸಕಲ ಸಂಪತ್ತು ದೊರಕುತ್ತದೆ ಎಂಬ ನಂಬಿಕೆ ಇದೆ.

ಲಕ್ಷ್ಮೀನಾರಾಯಣ ವಂದೇ ಜಗತಾಮ್ ಆದಿ ದಂಪತಿ।
ಸರ್ವ ಕಲ್ಯಾಣ ಸಿದ್ಯರ್ಥಂ ಹೃದಯೈಕ್ಯಂ ಸದಾಶ್ರಿತವೌ।।
ಈ ವರಮಹಾಲಕ್ಷ್ಮಿ ಆಚರಣೆಯಿಂದಾಗಿ ಜಗತ್ತಿನ ಮೊದಲ ದಂಪತಿಗಳನ್ನುಸಿದ ಲಕ್ಷ್ಮೀನಾರಾಯಣರು ಜಗತ್ತಿಗೆ ಸನ್ಮಂಗಳವನ್ನು ಉಂಟು ಮಾಡಲಿ.Share news

Related Articles

Leave a Reply

Your email address will not be published. Required fields are marked *

Back to top button