ಪ್ರೇರಣೆಲೇಖನ ಸಂಗಮ

ಭಾರತದ ಮೊದಲ ಮತ್ತು ಏಕೈಕ ಮಹಿಳಾ ಕಮ್ಯಾಂಡೊ ಟ್ರೈನರ್ ಡಾ. ಸೀಮಾ ರಾವ್

Share news

ತಂದೆ ಹೇಳುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದ ವಿಸ್ಮಯಕಾರಿ ಕತೆಗಳನ್ನು ಕೇಳುತ್ತ ಬೆಳೆದ ಸೀಮಾ ರಾವ್ ಕಳೆದೆರಡು ದಶಕದಿಂದ 15,000 ಕ್ಕೂ ಅಧಿಕ ಸೈನಿಕರಿಗೆ ಕಠಿಣ ತರಬೇತಿ ನೀಡಿರುವ ಕೀರ್ತಿ ಇವರದ್ದು.

Wonder Woman ಅಂತಲೇ ಗುರುತಿಸಲ್ಪಡುವ ಡಾ.ಸೀಮಾ ರಾವ್ ಕಳೆದ 20 ವರ್ಷಗಳಿಂದ ವಿಶೇಷ ಪಡೆಯನ್ನು ತರಬೇತುಗೊಳಿಸುತ್ತಿದ್ದಾರೆ. ಇವರು ಮಿಲಿಟರಿ ಮಾರ್ಷಿಯಲ್ ಆರ್ಟ್ಸ್‌ನಲ್ಲಿ 8th degree blackbelt ಅನ್ನು ಗಳಿಸಿದ್ದಾರೆ. ಎರಡೇ ಸೆಕೆಂಡುಗಳಲ್ಲಿ ಐದು ಗುರಿಯನ್ನು ಹೊಡೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ.ಫೋರ್ಬ್ಸ್ ನಡೆಸುವ ನಾರಿ ಶಕ್ತಿ ರ್ಯಾಂಕಿಂಗ್‌ನಲ್ಲಿ ಜಗತ್ತಿನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಬಾಲ್ಯದಿಂದಲೂ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತಿದ್ದ ಸೀಮಾ ರಾವ್ ಅವರು 16 ನೇ ವಯಸ್ಸಿನಲ್ಲಿ ಟೇಕ್ವಾಂಡೋವನ್ನು ಕಲಿಯಲು ನಿರ್ಧರಿಸಿದರು. ನಂತರ ತರಬೇತಿ ನಡೆಯುತ್ತಿದ್ದ ಹಾಗೇ ಅದರಲ್ಲಿ ಬಲವಾದ ಹಿಡಿತ ಸಾಧಿಸುತ್ತಾ ಸಾಗಿದರು. ಆದರೆ ಅದೇ ಸಮಯದಲ್ಲಿ ಜೀವನವು ತಿರುವು ಪಡೆದು ವೈದ್ಯೆಯಾದರು. ತಮ್ಮ ಕೆಲಸ ಮತ್ತು ಮದುವೆಯಲ್ಲೇ ನಿರತರಾಗಿದ್ದ ಅವರಿಗೆ ಏನೋ ಅಪೂರ್ಣವಾದ ಭಾವ.

ಮಹಾರಾಷ್ಟ್ರ ಪೊಲೀಸ್ ಡಿಜಿಪಿಯೊಂದಿಗಿನ ಆಕಸ್ಮಿಕ ಭೇಟಿ ಅವರ ಜೀವನವನ್ನೇ ಬದಲಾಯಿಸಿತು. ಪಡೆಯ ಮೇಲಿನ ಅವರ ಉತ್ಸಾಹದಿಂದ ಪ್ರಭಾವಿತರಾದ ಡಿಜಿಪಿ ತಮ್ಮ ತಂಡಕ್ಕೆ ನಿಶ್ಯಸ್ತ್ರ ಯುದ್ಧ ತರಬೇತಿ ಡೆಮೊ ನೀಡಲು ಸೀಮಾ ರಾವ್ ಅವರಲ್ಲಿ ಕೇಳಿದರು ನಂತರ ಕೌಶಲ್ಯಗಳನ್ನು ಗುರುತಿಸಿ, ಸೀಮಾ ರಾವ್ ಅವರನ್ನು 25 ನೇ ವಯಸ್ಸಿನಲ್ಲಿ ಪಡೆಗಳಿಗೆ ತರಬೇತಿ ನೀಡಲು ಅವಕಾಶ ನೀಡಲಾಯಿತು. ಸಂತೋಷ ಪಟ್ಟು ಮುಂದಿನ 5 ವರ್ಷಗಳಲ್ಲಿ ವಿವಿಧ ವಿಶೇಷ ಪಡೆಗಳೊಂದಿಗೆ ತರಬೇತಿ ಪಡೆದು ಯುದ್ಧ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರು ಮತ್ತು ಮಿಲಿಟರಿ ಮಾರ್ಷಲ್ ಆರ್ಟ್ಸ್‌ನಲ್ಲಿ 7 ನೇ ಪದವಿಯ ಕಪ್ಪು ಪಟ್ಟಿಯನ್ನು ಗಳಿಸಿದರು.

30 ನೇ ವಯಸ್ಸಿನಲ್ಲಿ, ಬ್ಲ್ಯಾಕ್ ಕ್ಯಾಟ್ ಕಮಾಂಡೋ ಪಡೆಗೆ ತರಬೇತಿ ನೀಡಿದರು ಮತ್ತು ವೃತ್ತಿಪರ ಶೂಟಿಂಗ್ ಬೋಧಕಿಯಾಗಿದ್ದರು. ಎಲ್ಲಾರೂ, ಕೇಳುವ ಪ್ರಶ್ನೆಯೆಂದರೆ, “ನೀವು ಪುರುಷ ಕಮಾಂಡೋಗಳನ್ನು ಮಹಿಳೆಯಾಗಿ ಹೇಗೆ ತರಬೇತಿ ನೀಡಬಹುದು?” ಹಾಗಾಗಿ ಇದಕ್ಕೆ ದಿಟ್ಟ ಉತ್ತರ ನೀಡಲು ಯಾವುದೇ ಕೆಲಸವನ್ನು ಮಾಡಲು ತಧ್ವ ತರಬೇತಿದಾರರಿಗೆ ಆಜ್ಞಾಪಿಸುವ ಮೊದಲು, ಅದನ್ನು ತಾವು ಕರಗತ ಮಾಡಿಕೊಂಡಿದ್ದರ ಎಂದು ಖಚಿತಪಡಿಸಿಕೊಂಡು ನಂತರ ಹೇಳಿಕೊಡುತ್ತಿದ್ದರು.

ಭಾರತದ ಕೆಲವು ಗಣ್ಯ ವಿಶೇಷ ಪಡೆಗಳಿಗೆ ತರಬೇತಿ ನೀಡಿದ ಮೊದಲ ಮತ್ತು ಏಕೈಕ ಮಹಿಳೆ. ಇದು ಅವರಿಗೆ ಸಲ್ಲುವ ದೊಡ್ಡ ಗೌರವವಾಗಿದೆ, ಅವರು ಈ ಕೆಲಸವನ್ನು ರಾಷ್ಟ್ರದ ಸೇವೆಯೆಂದು ತಿಳಿದು ಅದಕ್ಕಾಗಿ ಒಂದು ಪೈಸೆಯನ್ನೂ ವಿಧಿಸಲಿಲ್ಲ.

25 ವರ್ಷಗಳ ಅಧಿಕಾರಾವಧಿಯಲ್ಲಿ ಅವರ ಪ್ರಯಾಣವು ಸಾಹಸಮಯವಾಗಿದೆ ಮತ್ತು ಸಾವನ್ನು ಹಲವಾರು ಬಾರಿ ಹತ್ತಿರದಿಂದ ನೋಡಿದ್ದರೆ, ಆದರೆ ಅದು ಅವರ ಧ್ಯೇಯವಾಕ್ಯ, “ಅಡೆತಡೆಗಳು ದೊಡ್ಡದಾದಾಗ, ನೀವು ಇನ್ನೂ ದೊಡ್ಡದಾಗಬೇಕು” ಎಂಬಂತೆ ಎಲ್ಲಾವನ್ನು ಛಲದಿಂದ ಎದುರಿಸಿ ಬದುಕಿದ ವೀರ ಮಹಿಳೆ. ಫೆಮಿನಾದಿಂದ ಜಗತ್ತಿನ 14 ಪ್ರಭಾವೀ ಮಹಿಳೆಯರಲ್ಲಿ ಈಕೆಯೂ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.2019ರಲ್ಲಿ ಭಾರತ ಸರ್ಕಾರ ಇವರಿಗೆ ನಾರಿಶಕ್ತಿ ಪುರಸ್ಕಾರ ನೀಡಿ ಗೌರವಿಸಿದ ಭಾರತದ ಹೆಮ್ಮೆಯ ವೀರ ನಾರಿ ಡಾ.ಸೀಮಾ ರಾವ್.


Share news

Related Articles

Leave a Reply

Your email address will not be published. Required fields are marked *

Back to top button