ಪ್ರತಿಭಾನ್ವೇಷಣೆಲೇಖನ ಸಂಗಮ

ನವೀನ ಮಾದರಿ-ಪ್ರಗತಿಪರ ಕೃಷಿಕ : ಶ್ರೀ ನವೀನ ಚಂದ್ರ ಚಾತುಬಾಯಿ

Share news

ದ.ಕನ್ನಡ ಜಿಲ್ಲೆ – ಸುಳ್ಯ ತಾಲೂಕು – ಗ್ರಾಮ ಐವರ್ನಾಡಿನ ಚಾತುಬಾಯಿ ಯಲ್ಲಿ ನೆಲೆಸಿದ್ದ ದಿ | ಶ್ರೀ ಸಿ.ಕೂಸಪ್ಪ ಗೌಡರು ಹಾಗೂ ದಿ | ಶ್ರೀಮತಿ ಜಲಜಾಕ್ಷಿ ದಂಪತಿಗಳು. ಶ್ರೀ ಕೂಸಪ್ಪ ಗೌಡರು ಕೃಷಿಕರು, ಊರಗೌಡ ರಾಗಿದ್ದುದಲ್ಲದೆ ಐವರ್ನಾಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಗಿದ್ದರು. ದಿ| ಸತ್ಯ ಮೂರ್ತಿದೇರಾಜೆಯವರ ಸ್ನೇಹ ಒಡನಾಟ ದಲ್ಲಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಚೊಕ್ಕಾಡಿ ಶ್ರೀ ರಾಮ ದೇವಾಲಯಕ್ಕೂ ದೇಣಿಗೆ ಕೊಟ್ಟವರು. ಇವರಿಗೆ 3 ಹೆಣ್ಣು ಮಕ್ಕಳು ಮತ್ತು ಏಕೈಕ ಮಗ ಶ್ರೀ ಸಿ. ಕೆ. ನವೀನ ಚಂದ್ರ ಚಾತುಬಾಯಿ.

ಇವರು ಕಿರಿಯ – ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ದೇರಾಜೆ, ಐವರ್ನಾಡು ಶಾಲೆಗಳಲ್ಲಿ ಮಾಡಿದ್ದು, ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಅಳಿಕೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ನಂತರ ಸುಳ್ಯದ N.M.C.(ನೆಹರು ಮೆಮೋರಿಯಲ್ ಕಾಲೇಜು) ಯಲ್ಲಿ B.A. ಪದವಿಯನ್ನುಗಳಿಸುದರ ಜೊತೆಗೆ ಇಲ್ಲಿಯೇ K.V.G.(ಕುರುಂಜಿ ವೆಂಕಟ್ರಮಣ ಗೌಡ) ತಾಂತ್ರಿಕ ವಿದ್ಯಾಲಯದಲ್ಲಿ I.T.I.ಯನ್ನು ಮಾಡಿ, ಮೈಸೂರು ಯೂನಿವರ್ಸಿಟಿ ಯಲ್ಲಿ ಕನ್ನಡ
M.A. ಗಳಿಸಿ, ಬೆಂಗಳೂರಲ್ಲಿ 4 ವರ್ಷ ನೌಕರಿಯಲ್ಲಿದ್ದು, ಬಳಿಕ 6 ತಿಂಗಳು ಸಿಂಗಾಪುರದ ಹಡಗಿನ ಆಫೀಸಲ್ಲಿ ನೌಕರಿಮಾಡಿ, ಕ್ರಮೇಣ ಮನೆಯನ್ನು ಸೇರಿಕೊಂಡು ಕೃಷಿಕರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಗ್ರಾಮಪಂಚಾಯತ್ ಸದಸ್ಯರಾದರು.

1921ನೇ ಇಸವಿಯಿಂದ ಶ್ರೀ ನವೀನರು ಆಗ ಸಚಿವರಾಗಿದ್ದ ಎಸ್.ಅಂಗಾರರಿಂದ ಸ್ಪೂರ್ತಿ ಪಡೆದು ಸಿಹಿನೀರಿನ ಮುತ್ತು ಕೃಷಿಯನ್ನು ಪ್ರಾರಂಭಿಸಿದರು. ಮೊಲ, ನಾಟಿಕೋಳಿ, ಅಲಂಕಾರಿಕ ಮೀನುಗಳ ಸಾಕಾಣೆಯಲ್ಲಿ ತೊಡಗಿಕೊಂಡು, ರಾಂಬುಟನ್, ಮ್ಯಾಂಗೋಸ್ಟಿನ್,ವಿಯೆಟ್ನಾಮಾರ್ಲಿ,ಡ್ರೇಗನ್ ಫ್ರುಟ್,ವಾಟರ್ ಏಪಲ್,ಅಮೃತ್ ನೋನಿ,ಲಕ್ಷಣಫಲ,ಸೀತಾಫಲ ಮುಂತಾದ ಗಿಡಗಳ ಜೊತೆಗೆ ಅಲಂಕಾರಿಕ ಸಸ್ಯಗಳು, ಸಾಗುವಾನಿ – ಮಾಗು
ವಾನಿ ಗಿಡಗಳನ್ನು ಬೆಳೆಸಿದರು. ಇನ್ನು ಮುಂದೆಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಪ್ರಕೃತಿಯತ್ತ ಮುಖ ಮಾಡಿದ್ದಾರೆ.

ನವೀನ ಚಾತುಬಾಯಿ ಯವರು ಐವರ್ನಾಡು ವಿಶ್ವ ಹಿಂದು ಪರಿಷತ್ ಅಧ್ಯಕ್ಷ , ರೈತಸಂಘದ ಕಾರ್ಯಾಧ್ಯಕ್ಷ , ಸುಳ್ಯ ಮಹಶೀರ್ ರೈತ ಉತ್ಪಾದನಾ ಸಂಸ್ಥೆಯ ನಿರ್ದೇಶಕರಾಗಿದ್ದು, ಕೃಷಿ ಇಲಾಖೆಯ ರಾಜ್ಯಮಟ್ಟದ ರೈತರ ಸಮಿತಿಗೆ ದ.ಕ.ಜಿಲ್ಲಾ ಪ್ರತಿನಿಧಿ ಆಯ್ಕೆಯಾಗಿರುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ, ಹೈದರಾಬಾದ್, ಗೋವ, ಮಹಾರಾಷ್ಟ್ರ, ಆಗ್ರ,ದೆಹಲಿ, ಸಿಂಗಪುರ್, ಮಲೇಷ್ಯಾ, ಥ್ಯೆಲ್ಯಾಂಡ್, ಶ್ರೀಲಂಕಾ, ದುಬೈ ಕಡೆಗಳಿಗೆ ಪ್ರವಾಸ ಕೈಗೊಂಡು ಅನುಭವಗಳನ್ನು ಪಡೆದಿದ್ದುದಲ್ಲದೆ ಕಾರವಾರ, ಶಿರಸಿ, ದಾವಣಗೆರೆ, ಬೆಂಗಳೂರು, ಮಂಡ್ಯ, ಮಡಿಕೇರಿ,ಮಂಗಳೂರು, ಬಿ.ಸಿ.ರೋಡು, ಉಜಿರೆ, ಬೆಳ್ಳಾರೆ, ಸುಳ್ಯದ N.M.C.ಯ ನೇಚರ್ ಕ್ಲಬ್ ನ ವಿದ್ಯಾರ್ಥಿಗಳೂ ಇಲ್ಲಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ.ಮತ್ತು ಇತ್ತೀಚೆಗೆ ಇಲ್ಲಿನವರಾದ ಶ್ರೀ ತುಷಾರ್ ಕರಂಗ್ಲಡ್ಕರು ತಮ್ಮ ವಾಹಿನಿಗಾಗಿ ನವೀನ ರನ್ನು ಸಂದರ್ಶನ ಮಾಡಿದಾಗ ತಮ್ಮ ಅನುಭವಗಳನ್ನು,
ಮಾಹಿತಿಗಳನ್ನು ಸವಿಸ್ತಾರವಾಗಿ ಹಂಚಿಕೊಂಡಿದ್ದರು.

ಶ್ರೀ ನವಿನ ಚಾತುಬಾಯಿ ಯವರು ತಮ್ಮ ತಂದೆಯವರ ಸ್ಮರಣಾರ್ಥ ಐವರ್ನಾಡಿನ ನಡುವಿನ ಪೇಟೆಯಲ್ಲಿ ಪ್ರಯಾಣಿಕ ರ ತಂಗುದಾಣವನ್ನು ನಿರ್ಮಾಣಮಾಡಿದ್ದು,ನಾನೂ ಸೇರಿದಂತೆ ನಮ್ಮೂರಿನ ಜನತೆ ಇದರ ಸದುಪಯೋಗ ಪಡಿಸಿಕೊಂಡಿದ್ದು, ಈ ಸದಾ…ಉಪಯೋಗದಲ್ಲಿ ನಮಗಾಗಿರುವ ಜಾಗವನ್ನು ನಾವು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ . ಈ ನಿರ್ಮಾಣ ಕಾರ್ಯಕ್ಕಾಗಿ ಗ್ರಾಮ ಪಂಚಾಯತ್ ನವೀನರನ್ನು ಗೌರವಿಸಿದ್ದು, ಅಲ್ಲದೆ ಇವರು ಸುಳ್ಯ K.V.G.ಯಲ್ಲಿ I. T. I ನಲ್ಲಿ ಗಳಿಸಿದ ರಾಜ್ಯಮಟ್ಟದ Rank ಗೆ ಸ್ವತಃ ದಿ | ಶ್ರೀ ಕುರುಂಜಿ ವೆಂಕಟ್ರಮಣ ಗೌಡರು ಚಿನ್ನದಪದಕ ನೀಡಿ ಗೌರವಿಸಿದ್ದಾರೆ. ಇತ್ತೀಚೆಗೆ ಜಿಲ್ಲಾಮಟ್ಟದ “ಶ್ರೇಷ್ಠ “ಕೃಷಿ ಪ್ರಶಸ್ತಿ” ಇವರಿಗೆ ಬಂದಿದ್ದು, ಸುಳ್ಯ ಸಾಹಿತ್ಯ ವೇದಿಕೆ ಚಂದನ ವತಿಯಿಂದ “ಆದರ್ಶಕೃಷಿ ರತ್ನ” ಪ್ರಶಸ್ತಿ, ಸುಳ್ಯದ ಗೌಡ ಯುವ ಸೇವಾ ಸಮಿತಿ, JC, ಮತ್ತು ರೋಟರಿ ಸಂಸ್ಥೆ, ಊರ ಗೌಡರಾಗಿ ಕಾರ್ಯನಿರ್ವಹಣೆ ಗೆ ಗೌಡ ಸಂಘ ಸೇರಿದಂತೆ ಹಲವು ಸಂಘಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿ ಜನರ ಮೆಚ್ಚುಗೆಯನ್ನೂಗಳಿಸಿದ್ದಾರೆ.

ಐವರ್ನಾಡಿನ ದೇರಾಜೆ ಯ ಸನಿಹದಲ್ಲಿರುವುದು ಚಾತುಬಾಯಿ. ಇವರ ಮನೆಯ ಪಕ್ಕದಲ್ಲೇ ಕುಟುಂಬಕ್ಕೆ ಸಂಬಂಧ ಪಟ್ಟಂತೆ ಧರ್ಮದೈವದ ಗುಡಿಯು ಇದ್ದು, ವರ್ಷದ ತಂಬಿಲ ಇತ್ಯಾದಿ ಸೇವಾಕಾರ್ಯದ ಜೊತೆಗೆ 5 ವರ್ಷಕ್ಕೊಮ್ಮೆ ಭೂತಾರಾಧನೆಯು ನಡೆಯುತ್ತಿದ್ದು, ಪತ್ನಿ ನಮಿತ ಹಾಗೂ ಚಿಕ್ಕ ಮಕ್ಕಳಾದ ಮಗ ನವಾಂಶು N.C.C.ಯಲ್ಲಿ ಭಾಗಿಯಾಗಿದ್ದು, ಮಗಳು ನಿಹಾರಿ ಜೊತೆ ಚಿಕ್ಕ ಸಂಸಾರದಲ್ಲಿ ಪರೋಪಕಾರಿ – ಪ್ರಗತಿಪರ ಕೃಷಿಕ ರಾಗಿ ವಾಸಿಸುತ್ತಿರುವವರು ಶ್ರೀ ಸಿ.ಕೆ. ನವೀನಚಂದ್ರ ಚಾತುಬಾಯಿ.

ಫೋಟೋ & ಬರಹ : ಬಾಲು ದೇರಾಜೆ, ಸುಳ್ಯ.


Share news

Related Articles

Leave a Reply

Your email address will not be published. Required fields are marked *

Back to top button