ಪ್ರೇರಣೆಲೇಖನ ಸಂಗಮ

ಸಾವಿನ ಬೆಂಕಿಯಿಂದ ಎದ್ದು ಮುನ್ನುಗ್ಗಿದ ವೀರನ ಯಶೋಗಾಥೆ

Share news

ಕೆಲವೊಮ್ಮೆ ನೋವಿನ ಬಾಳಲ್ಲೂ ಬರೆದ ಸಾಧನೆ ಏರಿದ ಉತ್ತುಂಗ ನೋಡಿದಾಗ ಅಚ್ಚರಿ ಮೂಡಿಸುತ್ತದೆ. ಸಾವನ್ನೇ ಗೆದ್ದು ನೋವಿನಿಂದ ಮೇಲೆದ್ದು, ಛಲದೊಂದಿಗೆ ಸಾಗಿ ಸಾಧನೆಯ ಶಿಖರ ಏರಿದವರು ಸಾವಿರಾರು ಮಂದಿ. ಅವರಲ್ಲಿ ಈತ ಏರಿದ್ದು ಎವರೆಸ್ಟ್ ಶಿಖರ. ನಿಜವಾಗಿ ಈತನ ಸಾಹಸದ ಯಶೋಗಾಥೆ ನೋಡಿದರೆ ಮೈ ರೋಮಂಚನವಾಗುತ್ತದೆ.ಈತನ ಕಥೆ ಹೃದಯದ ಬಡಿತ ಹೆಚ್ಚಿಸುತ್ತದೆ.

ರೋಗಗಳೊಂದಿಗೆ ಆಟವಾಡಿ ಸಾವಿನೊಂದಿಗೆ ಹೋರಾಡಿ ಛಲ ಬಿಡದೆ ಎವರೆಸ್ಟ್ ಎರಿದ ಮಹಾನ್ ವ್ಯಕ್ತಿ ಅಲ್ಲ ಮಹಾನ್ ಶಕ್ತಿಯೇ ಹೌದು. ದೃಢ ನಿಶ್ಚಯವಿದ್ದರೆ ಆರೋಗ್ಯ ಕೂಡ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಪ ಬ್ರಿಟನ್ ಇಯಾಲ್ ಟೂಟ್ ಹಿಲ್ ನ ರೋಚಕ ಘಟನೆ.

2015ರಲ್ಲಿ ಟೂಟ್ ಹಿಲ್ ಅವರಲ್ಲಿ ಕರುಳು ಕ್ಯಾನ್ಸರ್ ಮಾರಕ ರೋಗ ಪತ್ತೆಯಾಯಿತು. 2016ರ ಆರಂಭದಲ್ಲಿ ಕಾಯಿಲೆ ಗುಣವಾಗಿದೆ ಎನ್ನಲಾಗಿತ್ತು ಆದರೆ ಕಾಯಿಲೆ ಮತ್ತೆ ಮರುಕಳಿಸಿ ಇನ್ನೂ ಕೆಲ ತಿಂಗಳಷ್ಟೇ ಬದುಕುವ ಸ್ಥಿತಿಗೆ ತಲುಪಿತು. ಮನಸ್ಸಿನಲ್ಲಿ ಮಾತ್ರ ಎವರೆಸ್ಟ್ ಏರುವ ಗುರಿ.ಆ ಗುರಿ ಮುಟ್ಟುಲು ಛಲದಿಂದ ಕ್ಯಾನ್ಸರಿಂದ ಬಳಲುತ್ತಿದ್ದರೂ ಲೆಕ್ಕಿಸದೆ ಎವರೆಸ್ಟ್ ಏರಿ ವಿಶ್ವದ ಅತಿ ಎತ್ತರದ ಪರ್ವತವೇರಿದ ಮೊದಲ ಕ್ಯಾನ್ಸರ್ ರೋಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈಗ ವಯಸ್ಸು 47 ಆದರೆ ಛಲದ ಹೋರಾಟ ಅಭಿಮನ್ಯುವಿನಂತೆ ಯುವತರುಣನಂತೆ ಸದಾ ನಡೆಯುತ್ತಲೇ ಇದೆ.

ಎವರೆಸ್ಟ್ ಶೃಂಗದ ಮೇಲೆ ಕೇವಲ ಒಬ್ಬ ಕ್ಯಾನ್ಸರ್ ಪೇಷಂಟ್ ಹಾಗೂ ಕೆಲ ನಿಮಿಷಗಳ ಕಾಲ ವಿಶ್ವದಲ್ಲೇ ಅತಿ ಎತ್ತರದಲ್ಲಿರುವ ಮನುಷ್ಯ ಛಲದಲ್ಲಿ ಶಿಖರ ಏರಿ ನಿಂತ ವೀರ ಟೂಟ್ ಹಿಲ್. ಅವರಿಗೆ ರೋಗವಿದೆ ಎಂಬುದೇ ನಂಬಲಾಗದಂತೆ ಅವರ ಸಾಹಸ ಮಾಡಿಬಿಟ್ಟಿತು. ಅವರ ಗುರಿ ಹಿಂದಿನ ಮಾತು ಕೇಳಿದರೆ ರೋಮಾಂಚನ ಉಂಟು ಮಾಡುತ್ತದೆ.

“ಕ್ಯಾನ್ಸರ್ ನಿಂದ ಪ್ರತಿದಿನ ನರಳುತ್ತಿರುವವರಿಗಾಗಿ ನಾನು ಪರ್ವತವೇರಿದ್ದೆನೆ. ಯಾರು ಕ್ಯಾನ್ಸರ್ ವಿರುದ್ಧ ಯುದ್ಧದಲ್ಲಿ ಶರಣಾಗಿ ನಿಂತಿರುವಿರೋ ನಿಮಗಾಗಿ ನಾನು ಪರ್ವತವೇರಿದ್ದೇನೆ. ಹಗಲು ರಾತ್ರಿ ನರಳಾಡುವವರೇ ಗಟ್ಟಿಯಾಗಿರಿ. ಎಲ್ಲದಕ್ಕೂ ಒಂದು ದಾರಿಯಿರುತ್ತದೆ. ನಿಮ್ಮ ಬಹುಕಾಲದ ಆಸೆಯನ್ನು ಈಡೇರಿಸಿಕೊಳ್ಳಲು ಮುನ್ನುಗ್ಗಿ” ಎಂದು ಟೂಟಿಲ್ ಹೇಳುವಾಗ ಯಾರೇ ಕ್ಯಾನ್ಸರ್ ರೋಗಿ ಇದ್ದರೂ ಎದ್ದು ಮುನ್ನುಗ್ಗುವ ಶಕ್ತಿ ನೀಡುತ್ತದೆ, ಇನ್ನೊಂದೆಡೆ ಕಣ್ಣಂಚಿನಲ್ಲಿ ನೀರು ಹನಿಯೊಡೆಯುತ್ತದೆ.

ಕ್ಯಾನ್ಸರ್ ರೋಗಿಗಳಿಗೆ ಮಾದರಿಯಾಗಿ ತಮ್ಮ ಸಾಹಸದಿಂದ ಶಕ್ತಿ ತುಂಬುತ್ತಿರುವ ಟೂಟಿಲ್ ಸಾಧನೆ ನಿಜಕ್ಕೂ ಎಂತವರನ್ನು ಬಡಿದೆಬ್ಬಿಸುವಂತದ್ದು. ಒಮ್ಮೆ ಯೋಚಿಸಿ ಅಂತಹವರೇ ಸಾವನ್ನು ಗೆದ್ದು ಸಾಧನೆ ಮಾಡುವಾಗ, ನಾವು ಸಾಧಿಸಲು ಅಸಾದ್ಯವಾದುದು ಯಾವುದೂ ಇಲ್ಲ ಛಲವಿದ್ದರೆ ಸಾಕು ಸಾಧಿಸಬಹುದು.


Share news

Related Articles

Leave a Reply

Your email address will not be published. Required fields are marked *

Back to top button