ಪ್ರತಿಭಾನ್ವೇಷಣೆಲೇಖನ ಸಂಗಮ

ಜನರು ಧನ್ಯ ಪಾತ್ರದ ಮೂಲಕ ಗುರುತಿಸುವಾಗ ಸಂತಸವಾಗುತ್ತದೆ: ದೀಪಿಕಾ

Share news

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ “ಸೇವಂತಿ” ಯಲ್ಲಿ ನಾಯಕಿ ಸೇವಂತಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನಗೆದ್ದ ಚೆಂದುಳ್ಳಿ ಚೆಲುವೆಯ ಹೆಸರು ದೀಪಿಕಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಕುಲವಧು” ಧಾರಾವಾಹಿಯ ಧನ್ಯಾಳಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ದೀಪಿಕಾಗೆ ಎಂದೂ ನಟಿಯಾಗುವ ಕನಸಿರಲಿಲ್ಲ! ಬದಲಿಗೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ಇಂದು ಆಕೆ ನಟನಾ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳುವಂತಾಯಿತು.

ಕನ್ನಡದ ಜೊತೆಗೆ ತೆಲುಗು ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ದೀಪಿಕಾ ಇಂದು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅವರ ಸ್ನೇಹಿತೆಯೇ ಕಾರಣ. ಹೌದು, ಸ್ನೇಹಿತೆಯ ಒತ್ತಾಯಕ್ಕೆ ಮಣಿದು ಕುಲವಧು ಧಾರಾವಾಹಿಯ ಆಡಿಶನ್ ಗೆ ಹೋದ ದೀಪಿಕಾ ಆಶ್ಚರ್ಯ ಎಂಬಂತೆ ಆಯ್ಕೆಯೂ ಆಗಿದ್ದರು.

ಮೊದಲ ಧಾರಾವಾಹಿಯಲ್ಲಿಯೇ ನಾಯಕಿ ಆಗಿ ನಟಿಸುವ ಅವಕಾಶ ಪಡೆದುಕೊಂಡ ದೀಪಿಕಾ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಆರತಿಗೊಬ್ಬ, ಕೀರ್ತಿಗೊಬ್ಬ” ಧಾರಾವಾಹಿಯ ಆರತಿ ಆಗಿ ಬದಲಾದ ದೀಪಿಕಾ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ಕಾರಣಾಂತರಗಳಿಂದ ಆ ಧಾರಾವಾಹಿ ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು.

ಇನ್ನೂ ಓದಿ.. “ಸಿಡಿಲಮರಿ – ರಂಗಪಾದರಸ ತೀರ್ಥಹಳ್ಳಿ ಗೋಪಾಲ ಆಚಾರ್ಯ “

ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಸೇವಂತಿ” ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ಅಭಿನಯಿಸುತ್ತಿರುವ ದೀಪಿಕಾ ತೆಲುಗಿನ ಸ್ಟಾರ್ ಮಾ ವಾಹಿನಿತ ಪ್ರಸಾರವಾಗುತ್ತಿರುವ “ಇಂಟಿಕಿ ದೀಪಂ ಇಲ್ಲಾಲು” ಎನ್ನುವ ಧಾರಾವಾಹಿಯಲ್ಲಿ ನಾಯಕಿ ಕೃಷ್ಣಪ್ರಿಯಾಳಾಗಿ ಮೋಡಿ ಮಾಡಿದ್ದಾರೆ.

ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ದೀಪಿಕಾ ‘ಚಿಟ್ಟೆ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು. ‘ನನ್ ಮಗಳೇ ಹೀರೋಯಿನ್’ ಎನ್ನುವ ಸಿನಿಮಾದಲ್ಲಿಯೂ ಅಭಿನಯಿಸಿರುವ ಈಕೆ ತೆಲುಗಿನ “ಇಟ್ಲು” ಸಿನಿಮಾದಲ್ಲಿಯೂ
ಬಣ್ಣ ಹೆಚ್ಚಿದ್ದಾರೆ.

ಇನ್ನೂ ಓದಿ.. ಕೈಲಾಸದ ಒಡೆಯನಿಗೆ ಪ್ರಿಯ ಈ ನಾಗಲಿಂಗ ಪುಷ್ಪ

ನಟನಾ ಜಗತ್ತಿಗೆ ನಾನು ಕಾಲಿಟ್ಟಿದ್ದು ಧನ್ಯಾಳಾಗಿ. ಕುಲವಧು ಧಾರಾವಾಹಿಯ ಧನ್ಯಾ ಪಾತ್ರ ನನಗೆ ಅದೆಷ್ಟು ಜನಪ್ರಿಯತೆ ತಂದುಕೊಟ್ಟಿದೆ ಎಂದರೆ ಇಂದಿಗೂ ತುಂಬಾ ಜನ ನನ್ನನ್ನು ಅದೇ ಪಾತ್ರದ ಮೂಲಕ ಗುರುತಿಸುತ್ತಾರೆ. ಕುಲವಧು ಧಾರಾವಾಹಿಯ ನಂತರ ನಾನು ಮೂರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರೂ ಧನ್ಯಾ ಪಾತ್ರ ನೀಡಿದಷ್ಟೂ ಜನಪ್ರಿಯತೆ ಬೇರೆ ಯಾವ ಪಾತ್ರದಿಂದ ದೊರಕಿಲ್ಲ. ಸಂತಸವಾಗುತ್ತದೆ ಎಂದು ಹೇಳುತ್ತಾರೆ ದೀಪಿಕಾ.

‘ಕುಲವಧು ಧಾರಾವಾಹಿಯ ಧನ್ಯಾ ಪಾತ್ರದ ಮೂಲಕ ನನ್ನ ಕಿರುತೆರೆ ಪಯಣ ಶುರುವಾಯಿತು. ಮುಂದೆ ಆರತಿಗೊಬ್ಬ ಕೀರ್ತಿಗೊಬ್ಬ, ಸೇವಂತಿ ಧಾರಾವಾಹಿಗಳಲ್ಲಿ ನಾನು ಅಭಿನಯಿಸಿದ್ದರೂ ಜನ ನನ್ನನ್ನು ಗುರುತಿಸುವುದು ಧನ್ಯಾ ಆಗಿ. ನಾನು ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಲು ಕೂಡಾ ಅದೇ ಪಾತ್ರ ಕಾರಣ’ ಎಂದು ಹೇಳುತ್ತಾರೆ ದೀಪಿಕಾ.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಥೈಲ್ಯಾಂಡ್ ನಲ್ಲಿ ಹಿಂದೂ ಧರ್ಮದ ಸಂಕೇತವಾದ ಸೃಷ್ಟಿಕರ್ತ ಬ್ರಹ್ಮ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಮುಖ್ಯವಲ್ಲ, ದೃಢ ಮನಸ್ಸು ಬೇಕು ಎಂದ ಪೂರ್ಣಿಮಾ

ಯಕ್ಷಗಾನ ಕಲಾ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ

BHARATHAVANI YOUTUBE

ಹಿರೇಮಗಳೂರು ಕಣ್ಣನ್ ಮಾಮನ ಕನ್ನಡ ದೇಗುಲ

ಸಾಣಿಕಟ್ಟಾ ಉಪ್ಪು ತಯಾರಿಕೆ

ಪುರಾತನ ವೇದ ಪಾಠಶಾಲೆ | ಶ್ರೀ ಹರಿಹರೇಶ್ವರ ವೇದವಿದ್ಯಾಪೀಠ || ಗೋಕರ್ಣ

ವಾಹನಗಳ ಸೃಷ್ಟಿಕರ್ತ | ಕಲಾವಿದ ಕಾರ್ತಿಕ್ ಗಾಣಿಗ


Share news

Related Articles

Leave a Reply

Your email address will not be published. Required fields are marked *

Back to top button