ಪ್ರೇರಣೆಲೇಖನ ಸಂಗಮ

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

Share news

ದ.ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಗೂ ಪವಿತ್ರ ಕ್ಷೇತ್ರಗಳಲ್ಲೊಂದಾದ ಇತಿಹಾಸವುಳ್ಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ. ಇಲ್ಲಿಂದ ಪೂರ್ವ ಭಾಗಕ್ಕೆ ಕುಮಾರ ಪರ್ವತದ ತಪ್ಪಲಿನಲ್ಲಿರುವ ಕೂಪಿನ ಗುಡ್ಡ, ಲೆಂಕಿರಿ ಗುಡ್ಡ, ಬಿದಿರು ಗುಡ್ಡ, ಭೀಮನ ಗುಡ್ಡಗಳನ್ನೇರಿ ಸಾಗುತ್ತಾ 5 ಕಿ.ಮಿ. ದೂರದಲ್ಲಿರುವ ” ಗಿರಿ ಗದ್ದೆ” ಯನ್ನು ತಲಪಬಹುದು. ಈ ಗಿರಿ ಯಲ್ಲಿ ಗದ್ದೆಗಳಿರುವ ಕಾರಣದಿಂದ ಇಲ್ಲಿಗೆ ಈ ಹೆಸರು ಅನ್ವರ್ಥನಾಮ ವಾಗಿ ಉಳಿದು ಕೊಂಡಿದೆ.

1970 ನೇ ಇಸವಿಯಲ್ಲಿ ಸುಬ್ರಹ್ಮಣ್ಯ ದಿಂದ ಗಿರಿ ಗದ್ದೆಗೆ ಬಂದು ನೆಲಸಿದ ಶ್ರೀ ಪರಮೇಶ್ವರ ಭಟ್ಟ ಹಾಗೂ ಶ್ರೀಮತಿ ಸರಸ್ವತಿ ದಂಪತಿಗಳಿಗೆ 5 ಗಂಡು ಹಾಗೂ 2 ಹೆಣ್ಣು ಮಕ್ಕಳು. ಪರಿಸರ ಪ್ರೇಮಿ ಯಾದ ಶ್ರೀ ಯುತರು ಇಲ್ಲಿ ಗದ್ದೆ ಬೇಸಾಯ ಮಾಡಿ ಕೊಳ್ಳುದರ ಜೊತೆಗೆ ದನಸಾಕಾಣೆಯಲ್ಲಿ ತೊಡಗಿದ್ದರು. ಈ ದಂಪತಿಗಳ 2 ನೆಯ ಮಗನಾದ ಶ್ರೀ ಮಹಾಲಿಂಗೇಶ್ವರ ಭಟ್ ವಿದ್ಯಾಭ್ಯಾಸ ದ ನಂತರ ಕೃಷಿಕರಾಗಿ, ಪತ್ನಿ ಶ್ರೀಮತಿ ಧನಲಕ್ಷ್ಮಿ ಹಾಗೂ ಏಕೈಕ ಮಗ ಶ್ರೀ ಪ್ರಸಾದ ರು ಮಂಗಳೂರಲ್ಲಿ ನೌಕರಿ ಹೊಂದಿದ್ದು, 3 ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು,
ನಂತರ ದಿನಗಳಲ್ಲಿ ಶ್ರೀಮತಿ ಧನಲಕ್ಷ್ಮಿ ಯವರು ದಿವಂಗತರಾಗಿರುತ್ತಾರೆ.

65 ನೇ ವಯಸ್ಸಿನ ಮಹಾಲಿಂಗೇಶ್ವರ ಭಟ್ ರ ಜೊತೆಯಲ್ಲಿ ತಮ್ಮನಾದ ಶ್ರೀ ನಾರಾಯಣ ಭಟ್ ಇಲ್ಲಿನ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸುಮಾರು 35 ಕ್ಕೂಮಿಕ್ಕಿ ದೇಸೀ ತಳಿಗಳ ದನ ಸಾಕಾಣೆಯಲ್ಲಿ ತೊಡಗಿದ್ದಾರೆ. ಇಲ್ಲಿ ಸುಮಾರು 5-6 ಜನ ಕೂಲಿ ಕಾರ್ಮಿಕರು ಹೆಚ್ಚಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶ್ರೀ ಭಟ್ಟರ ತೋಟಗಾರಿಕಾ ಬೆಳೆಯಾದ ಅಡಿಕೆ, ತೆಂಗು, ಬಾಳೆ ಮುಂತಾದ ಕೃಷಿ ಕಾರ್ಯಗಳಿಗೆ ಸಹಕರಿಸುತ್ತಾರೆ.

ಗಿರಿ ಗದ್ದೆ ಯಲ್ಲಿ ವರ್ಷ ಗಳಲ್ಲಿ ನವರಾತ್ರಿ, ದೀಪಾವಳಿ, ಚೌತಿ ಮುಂತಾದ ಹಬ್ಬಗಳ ಆಚರಣೆಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ ಇಲ್ಲಿಗೆ ದೆಹಲಿ, ಬೊಂಬಾಯಿ, ಕಲ್ಕತ್ತಾ, ಬೆಂಗಳೂರು, ಮೈಸೂರು, ಅಮೆರಿಕಾ, ಕೆನಡಾ,ಜಪಾನ್,ಇಟೆಲಿ ಮುಂತಾದ ಕಡೆಗಳಿಂದ ಅದ್ಯಯನ ಕ್ಕಾಗಿ ವಿದ್ಯಾರ್ಥಿಗಳಲ್ಲದೆ ಚಾರಣಿಗರು ಬರುತ್ತಿರುತ್ತಾರೆ. ಇಲ್ಲಿ ಶ್ರೀ ಭಟ್ಟರ ರುಚಿಕರವಾದ ಊಟ-ತಿಂಡಿಗಳ ವ್ಯವಸ್ಥೆಯಿದ್ದು, ಉಳಕೊಳ್ಳಲು ಟೆಂಟಿನ ಸೌಲಭ್ಯ ಗಳೂ ಇವೆ. ಗಿರಿಗದ್ದೆಯ ಶ್ರೀ ಮಹಾಲಿಂಗೇಶ್ವರ ಭಟ್ಟರು ಉತ್ತಮ ವಾಗ್ಮಿ, ಸಹೃದಯಿ ಯಾಗಿದ್ದು, ಬರುವ ಚಾರಣಿ ಗರನ್ನು ನಗು ಮುಖ ದಿಂದಲೇಸ್ವಾಗತಿಸುತ್ತಾ, ಬೇಕಾದವರಿಗೆ ಬೇಕಾದ ಹಾಗೆ ಊಟೋಪಚಾರದಲ್ಲಿ ತೊಡಗಿರುದಲ್ಲದೆ, ಇವರಿಗೆ 2017 ನೇ ಇಸವಿಯಲ್ಲಿ ಎಜುಕೇಶನ್ ಟ್ರಸ್ಟ್ (ರಿ) ಸುಬ್ರಹ್ಮಣ್ಯ ದ ವತಿಯಿಂದ ” ಬೆಟ್ಟದ ಜೀವ ” ಬಿರುದನ್ನಿತ್ತು ಗೌರವಿಸುದರೊಂದಿಗೆ, ಸುಳ್ಯ, ಪುತ್ತೂರು, ಮುಂತಾದ ಕಡೆಗಳಲ್ಲಿ ಗೌರವಿಸಿ, ಸನ್ಮಾನಿಸಿರುತ್ತಾರೆ.

ಗಿರಿಗದ್ದೆ ಯ ಪ್ರದೇಶವು ಕರ್ನಾಟಕ ಅರಣ್ಯ ಇಲಾಖೆ ಗಳೊಪಟ್ಟಿದ್ದು, ಇಲ್ಲಿ ಬೇಂಗ, ಮರುವ, ಕಿರಾಲು ಬೋಗಿ, ಬೀಟಿ ಮುಂತಾದ ಮರಗಳಿಂದ ಕೂಡಿದ್ದು, ಹುಲಿ, ಚಿರತೆ, ಕಾಡುಕೋಣ ಕಾಡುನಾಯಿ ಮುಂತಾದ ಪ್ರಾಣಿಗಳ ವಾಸ ತಾಣವಾಗಿದ್ದು, ದ.ಕ ಮತ್ತು ಕೊಡಗು ಜೊತೆ ಯಾಗಿದೆ. ನಿಸರ್ಗ ರಮಣೀಯ ಪರಿಸರವಾದ ಗಿರಿ ಯ ಮಡಿಲಲ್ಲಿರುವ ಗಿರಿ ಗದ್ದೆಯು ” ಅನ್ನ ದೇಗುಲವಿದು ಕೈ ಮುಗಿದು ಒಳಗೆ ಬಾ “ಎಂದು ಸದಾ ಕರೆಯುತ್ತಿದೆ.


Share news

Related Articles

Leave a Reply

Your email address will not be published. Required fields are marked *

Back to top button