ಪ್ರೇರಣೆಲೇಖನ ಸಂಗಮ

35,000 ಕ್ಕೂ ಅಧಿಕ ಜನರಿಗೆ ಉಚಿತ ಬಟ್ಟೆ ಚೀಲಗಳನ್ನು ಹೊಲಿದು ನೀಡಿದ 93 ವರ್ಷದ ಮಧುಕಾಂತ ಭಟ್

Share news

93 ವರ್ಷದ ಮಧುಕಾಂತ ಭಟ್ ಅವರು ಪರಿಸರ ಸಂರಕ್ಷಣೆಯ ಗುರಿಯೊಂದಿಗೆ ಕಳೆದ ಐದು ವರ್ಷಗಳಿಂದ ಹೈದರಾಬಾದಿನಲ್ಲಿ ಜವಳಿ ತ್ಯಾಜ್ಯಗಳಿಂದ ಪರಿಸರ ಸ್ನೇಹಿ ಚೀಲಗಳನ್ನು ಪ್ರತಿದಿನ ತಯಾರಿಸಿ ಈವರೆಗೆ ಸುಮಾರು 35,000 ಕ್ಕೂ ಜನರಿಗೆ ಉಚಿತವಾಗಿ ವಿತರಿಸುವ ಮೂಲಕ ಆ ವಯಸ್ಸಿನಲ್ಲೂ ಛಲದಿಂದ ಕೆಲಸ ಮಾಡುತ್ತಿದ್ದಾರೆ..

ಬೆಳಿಗ್ಗೆ 7:30 ಕ್ಕೆ ಎದ್ದು, ಸ್ನಾನ ಮಾಡಿ, ತನ್ನ ಪೂಜೆಯನ್ನು ಮುಗಿಸಿ ಉಪಹಾರವನ್ನು ಮಾಡಿದ ನಂತರ, ನೇರವಾಗಿ ತನ್ನ ಹೊಲಿಗೆ ಯಂತ್ರದತ್ತ ಹೋದರೆ ದಿನವಿಡಿ ಚೀಲಗಳನ್ನು ತಯಾರಿಸುತ್ತಾರೆ. ಮಧುಕಾಂತ ಅವರು 1930 ರಲ್ಲಿ ಗುಜರಾತ್‌ನ ಜಾಮ್‌ನಗರ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಪ್ರದೇಶದಲ್ಲಿ ಜನಿಸಿದರು ಪರಿಣಾಮವಾಗಿ, ಅವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ.

ಹೆತ್ತವರು ಅವರಿಗೆ ಮದುವೆ ಮಾಡಿದಾಗ 18 ವರ್ಷ ಅಷ್ಟೇ. ಮದುವೆಯ ನಂತರ ಪತಿಯೊಂದಿಗೆ ಹೈದರಾಬಾದ್‌ಗೆ ತೆರಳಿದರು. ತಮ್ಮ ಖರ್ಚುಗಳನ್ನು ಕಡಿಮೆ ಮಾಡುವ ಮೂಲಕ ಹಣವನ್ನು ಉಳಿಸುತ್ತಾ ಸ್ವಲ್ಪ ಸಮಯದ ನಂತರ ಅವರು ಉಷಾ ಹೊಲಿಗೆ ಯಂತ್ರವನ್ನು ಖರೀದಿಸಲು ಸಾಧ್ಯವಾಯಿತು, ಇದು 1955 ರಲ್ಲಿ 200 ರೂ ಆಗಿತ್ತು.

ಯಂತ್ರವನ್ನು ಪಡೆಯಲು ಶಕ್ತರಾಗಿದ್ದರೂ, ಮಧುಕಾಂತರಿಗೆ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ, ಔಪಚಾರಿಕ ತರಬೇತಿಯು ಸಾಧ್ಯವಾಗಲಿಲ್ಲ, ಆದ್ದರಿಂದ ಯಂತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಒಂದು ತಿಂಗಳ ಕಡಿಮೆ ಕೋರ್ಸ್ ತೆಗೆದುಕೊಂಡರು. ಹೊಲಿಗೆ ಭಾಗ , ಕತ್ತರಿಸುವುದು ಮತ್ತು ವಿನ್ಯಾಸವನ್ನು ನಾನು ವೀಕ್ಷಣೆಯಿಂದ ಕಲಿತರು.

ಕೆಲವೇ ತಿಂಗಳುಗಳಲ್ಲಿ ಮಧುಕಾಂತ ಯಂತ್ರವನ್ನು ಬಳಸುವಲ್ಲಿ ನುರಿತರಾದರು. ನಂತರ ಬೇರೆ ಬೇರೆ ಬಟ್ಟೆಗಳಿಂದ ಶುರುವಾಗಿ ಇಂದು ಉಳಿದ ಬಟ್ಟೆಗಳಿಂದ ಸಾವಿರಾರು ಚೀಲಗಳನ್ನು ಹೋಲಿದು ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ಸಂಗತಿ….

ಆಕೆಗೆ ನಿವೃತ್ತಿಯಾಗುವ ಯಾವುದೇ ಯೋಜನೆ ಇಲ್ಲ “ನನ್ನ ವಯಸ್ಸಿನ ಜನರು ನಿವೃತ್ತಿ ಮತ್ತು ವಿಶ್ರಾಂತಿ ಪಡೆಯಲು ಬಯಸುತ್ತಾರೆ, ಆದರೆ ನಾನು ಮುಂದುವರಿಯಲು ಬಯಸುತ್ತೇನೆ” ಎನ್ನುವ ಅವರ ಮಾತುಗಳು ನಮಗೆ ಸ್ಫೂರ್ತಿ..ಸಾಧನೆಗೆ..ಸಮಾಜ ಸೇವೆಗೆ ವಯಸ್ಸಿನ ಮಿತಿಯಿಲ್ಲ..ಛಲ ಇದ್ದರೆ ಸಾಕು..


Share news

Related Articles

Leave a Reply

Your email address will not be published. Required fields are marked *

Back to top button