ಲೇಖನ ಸಂಗಮ

ಆದರ್ಶ ಗ್ರಾಮ ನಿರ್ಮಿಸಿದ ಗ್ರಾಮಸ್ಥರು

Share news

ದೇಶದ ಅನೇಕ ಗ್ರಾಮಗಳಲ್ಲಿ ಈಗಲೂ ಕುಡಿಯುವ ನೀರು, ವಿದ್ಯುತ್ ಹೀಗೆ ನೂರಾರು ಸಮಸ್ಯೆಗಳು ಕಂಡುಬರುತ್ತವೆ.ಆ ಗ್ರಾಮದ ಜನ ಸರ್ಕಾರ ಹಾಗೆ ಮಾಡಿಲ್ಲ ಹೀಗೆ ಮಾಡಿಲ್ಲ ಎಂದು ಸರ್ಕಾರವನ್ನು ದೂರುತ್ತಾ ಸರ್ಕಾರವೇ ಮಾಡಬೇಕು ಎಂದು ಕಾಯುತ್ತಿರುತ್ತಾರೆ ಸಮಸ್ಯೆಗಳು ದೊಡ್ಡದಾದಂತೆ ಹೋರಾಟಕ್ಕೆ ಮುಂದಾಗುತ್ತಾರೆ ಸಾವು-ನೋವು ಸಂಭವಿಸುತ್ತದೆ.ಇದೆಲ್ಲಾವನ್ನು ಮೀರಿ ಇಲ್ಲೊಂದು ಗ್ರಾಮ ಮಾದರಿಯಾಗಿ ಬೆಳೆದು ನಿಂತಿದೆ.

ರಾಯಚೂರಿನ ಸಿರವಾರ ತಾಲೂಕಿನ ಭಾಗ್ಯ ನಗರ ಈ ಗ್ರಾಮ ನೋಡಲಿಕ್ಕೆ ಹಳ್ಳಿಯಂತಿದೆ ಆದರೆ ಯಾವ ಮೂಲಭೂತ ಸೌಕರ್ಯದಿಂದಲೂ ಹಿಂದೆ ಉಳಿದಿಲ್ಲ.ಸರ್ಕಾರ ಮಾಡದಿದ್ದರೇನು ನಾವೇ ಕೈಲಾದಷ್ಟು  ಮಾಡುತ್ತೆವೆ ಎಂದು ಚಲದಿಂದ ಬದುಕುತ್ತಿದ್ದಾರೆ.

ಸ್ವಂತ ಖರ್ಚಿನಿಂದ ಒಂದು ಕೆರೆ ನಿರ್ಮಿಸಿ ಇಂದಿಗೂ ಅದೇ ಕೆರೆಯನೀರನ್ನ  ಕೃಷಿಗೆ,ಉಪಕಸುಬದ ಹೈನುಗಾರಿಕೆಗೆ, ಕುಡಿಯಲು ಹೀಗೆ ಇನ್ನಿತರ ಅಗತ್ಯಗಳಿಗೆ ಬಳಸುತ್ತಿದ್ದಾರೆ.

.ಆರು ಗುಂಟೆ ಜಾಗದಲ್ಲಿ  ತಾವೇ ಶಾಲೆಯೊಂದನ್ನು ನಿರ್ಮಿಸಿ  ಶಿಕ್ಷಕರನ್ನು ಕೂಡ ನೆಮಿಸಿದ್ದರೆ ಈಗ ಸರ್ಕಾರ ಆ ಶಾಲೆಯನ್ನು ತೆಗೆದುಕೊಂಡಿದೆ. L.P.G  ಗ್ಯಾಸ್ ಕನೆಕ್ಷನ್ ಇಲ್ಲವೆಂದು ಪ್ರತಿಯೊಂದು ಮನೆಯಲ್ಲೂ ಬಯೋಗ್ಯಾಸ್ ಬಳಸುವಂತೆ ಮಾಡಿದ್ದಾರೆ.ವಿದ್ಯುತ್ ಸಂಪರ್ಕದ ಸಂಪೂರ್ಣ ಕೆಲಸವನ್ನು  ಕೂಡ ಗ್ರಾಮಸ್ಥರೆ ನಿರ್ವಹಿಸುತ್ತಾರೆ.

.ಈ ಹಿಂದೆ ತಾವೇ ಮಣ್ಣಿನ ರಸ್ತೆ ನಿರ್ಮಿಸಿದ್ದು  ಈಗ ಅದಕ್ಕೆ ಕಾಂಕ್ರೀಟ್ ಹಾಕಲಾಗಿದೆ.ಈಗ ದೊಡ್ಡದಾದ ಕಲ್ಯಾಣ ಮಂಟಪ ಕಟ್ಟಲು ಮುಂದಾಗುತ್ತಿದ್ದಾರೆ.ಈ ರೀತಿ ಗ್ರಾಮಸ್ಥರು ತಮ್ಮ ಗ್ರಾಮಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿದು ಯಾವ ಹಳ್ಳಿಗೂ ಕಡಿಮೆ ಇಲ್ಲ ಎಂದು ಚಲದಿಂದ ತೊರಿಸಿ ಕೊಟ್ಟಿದ್ದಾರೆ.ಪ್ರತಿಯೊಂದು ಮನೆಗೆ ಇಂತಿಷ್ಟು ಎಂದು ಹಣ ಸಂಗ್ರಹಿಸಿ ತಮಗೆ ಬೇಕಾದ್ದನ್ನು ಮಾಡಿಕೊಳ್ಳುತ್ತಾರೆ.ಒಟ್ಟು ಗ್ರಾಮದಲ್ಲಿ 180 ಮನೆಗಳಿವೆ.1000 ಮತದಾರರಿದ್ದರೆ.

ಇಲ್ಲಿ ರಾಜಕೀಯದ ಗಾಳಿ ಅಷ್ಟಾಗಿ ಬೀಸಿಲ್ಲ.ಗ್ರಾಮಸ್ಧರು ಒಗ್ಗಾಟ್ಟಿನಿಂದ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ.
1980ರಿಂದ ಈ ಬೆಳವಣಿಗೆ ಕಾರ್ಯ ಪ್ರಾರಂಭವಾಗಿದೆ. ಒಟ್ಟು 1400 ಜನ ಈ ಗ್ರಾಮದಲ್ಲಿ ವಾಸವಿದ್ದಾರೆ.ಈ ರೀತಿ ಸರ್ಕಾರದ ಸಹಾಯವಿಲ್ಲದೆ ಬೆಳೆದು ಬಡ ಗ್ರಾಮಗಳಿಗೆ ಮಾದರಿಯಾಗಿ ಹೇಗೆ ತಮಗೆ ಬೇಕಾದ್ದನ್ನು  ತಾವೇ ನಿರ್ಮಿಸಿ ಬೆಳೆಯಬಹುದು ಎಂದು ತೊರಿಸಿ ಕೊಟ್ಟುಇಡೀಯ ರಾಜ್ಯವೇ  ತಿರುಗಿ ನೋಡುವಂತೆ ಉಳಿದವರಿಗೆ ತೊರಿಸಿದ್ದರೆ.ಹಿರಿಯರು ಹೇಳಿದ ಮಾತು ನಿಜವಾಗಿದೆ “ಒಗ್ಗಾಟ್ಟಿನಲ್ಲಿ ಬಲವಿದೆ”. ಇನ್ನೂ ಇಂತಹ ಮಾದರಿ ಗ್ರಾಮಗಳು ಎದ್ದುನಿಲ್ಲಲಿ.ಬಡ ಗ್ರಾಮಗಳಿಗೆ ದಾರಿಯಾಗಲಿ.

Share news

Related Articles

Leave a Reply

Your email address will not be published. Required fields are marked *

Back to top button