ಲೇಖನ ಸಂಗಮ

ತಾಯಿ ಭಾರತೀಯ ಧೀರ ಸುಪುತ್ರ ಸಿಡಿಲ ಸಂತ ಸ್ವಾಮಿ ವಿವೇಕಾನಂದ

Share news

ಸನಾತನ ಧರ್ಮ ಅತ್ಯಂತ ಪುರಾತನವಾದಂತಹ ಶ್ರೇಷ್ಠ ಧರ್ಮ ಹಿಂದೂ ಧರ್ಮ ಇಂತಹ ಶ್ರೇಷ್ಠ ಧರ್ಮದ ಶ್ರೇಷ್ಠತೆಯನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಡಲು ಹುಟ್ಟಿ ಬಂದವರೇ ಸ್ವಾಮಿ ವಿವೇಕಾನಂದರು. ವಿವೇಕಾನಂದರ ಜೀವನ ಬದುಕಿನಲ್ಲಿ ಬೇಸತ್ತು ದುಃಖದಿಂದ ಕಂಗಾಲಾದ ವ್ಯಕ್ತಿಗೆ ಒಂದು ಸ್ಪೂರ್ತಿಯ ಸೆಲೆಯನ್ನು ನೀಡುತ್ತದೆ. ವಿವೇಕಾನಂದರು 12 ಜನವರಿ 1863 ರಲ್ಲಿ ಕಲ್ಕತ್ತಾದಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿಯ ಆರನೇ ಮಗನಾಗಿ ಜನಿಸಿದರು. ದೇವರನ್ನು ಕಾಣಬೇಕು ಎಂಬ ತೀವ್ರತೆ ಅವರಲ್ಲಿ ಬಾಲ್ಯದಿಂದಲೇ ಅಚಲವಾಗಿತ್ತು.

ದೇವರನ್ನು ಕಾಣಬೇಕು ಎಂಬ ತೀವ್ರತೆಯಿಂದ ಹೊರಟ ಅವರಿಗೆ ಗುರುವಾಗಿ ಸಿಕ್ಕವರು ಶ್ರೀ ರಾಮಕೃಷ್ಣ ಪರಮಹಂಸರು, ಮೊದಲು ನರೇಂದ್ರರಾಗಿದ್ದ ಅವರು ನಂತರದಲ್ಲಿ ಸ್ವಾಮಿ ವಿವೇಕಾನಂದರಾದರು. ಭಾರತೀಯರೆಲ್ಲರೂ ದುಃಖದಲ್ಲಿರುವಾಗ ಅವರ ದುಃಖವನ್ನು ತಡೆಯಲು ಸೂರ್ಯನಂತೆ ಉದಯಿಸಿದವರು ಸ್ವಾಮಿ ವಿವೇಕಾನಂದರು. ಇವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ಮತ ಗ್ರಂಥಗಳನ್ನು ಅಧ್ಯಯನ ಮಾಡಿರುತ್ತಾರೆ. ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಸಹೋದರ ಸಹೋದರಿಯರೇ ಎಂದು ಭಾಷಣ ಮಾಡುವುದರ ಮೂಲಕವಾಗಿ ಇಡೀ ಪ್ರಪಂಚಕ್ಕೆ ಭಾರತದ ಸಂಸ್ಕೃತಿ ಏನು ಅದರ ಮಹತ್ವವೇನು ಎನ್ನುವುದನ್ನು ಅತ್ಯಂತ ಚೆನ್ನಾಗಿ ತಿಳಿಸಿರುತ್ತಾರೆ.. ಭಾರತ ಎಂದರೆ ಮೂಗು ಮುರಿಯುತ್ತಿದ್ದ ಜನರಿಗೆ ಭಾರತದ ಶ್ರೇಷ್ಠತೆಯನ್ನು ಎತ್ತಿ ತೋರಿಸಿದ ಮಹಾನ್ ವೀರ ಸಂತ ಸನ್ಯಾಸಿ ಸ್ವಾಮಿ ವಿವೇಕಾನಂದರು ಸ್ವಾಮಿ ವಿವೇಕಾನಂದರೇಂದರೆ ನರನಾಡಿಗಳಲ್ಲಿ ಹರಿಯುವ ಶಕ್ತಿ.

ಮನಸ್ಸನ್ನು ಶ್ರೇಷ್ಠ ಗುರಿಯೆಡೆಗೆ ಕರೆದುಕೊಂಡು ಹೋಗುವ ಪ್ರೇರಣಾ ಮೂರ್ತಿ. ವಿವೇಕಾನಂದರ ಮಾತುಗಳಿಂದ ಸ್ಪೂರ್ತಿ ಪಡೆಯದ ವ್ಯಕ್ತಿಗಳೆ ಇಲ್ಲ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದು ಕೂಡ ನಮ್ಮ ಬೆನ್ನ ಹಿಂದೆ ಇದ್ದು ಮಾರ್ಗದರ್ಶನ ಮಾಡುತ್ತಿರುವ ಗುರುದೇವ ಸ್ವಾಮಿ ವಿವೇಕಾನಂದರು. ನಡೆ ನುಡಿಗಳಲ್ಲಿ ದೇಶ ಭಕ್ತಿಯನ್ನು ಅಛಲವಾಗಿ ತುಂಬುತ್ತಿರುವ ಮಹಾನ್ ಚೇತನ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಪ್ರತಿ ಬಾರಿ ವಿವೇಕಾನಂದರ ಭಾವಚಿತ್ರ ನೋಡಿ ದಿನ ಪ್ರಾರಂಭಿಸಿದರೆ ಆ ದಿನವಿಡೀ ಆಗದ ಶಕ್ತಿ ತುಂಬುವ ಸಾಮರ್ಥ್ಯ ಇಂದು ಇದೆ ಎಂಬುದರಲ್ಲಿ ಸಂದೇಹವಿಲ್ಲ. ವಿವೇಕಾನಂದರು ಬದುಕಿದ ಸಣ್ಣ ಸಮಯದಲ್ಲಿ ಮಾಡಿದ ಕಾರ್ಯಗಳು ಹೇಳಿದ ಮಾತುಗಳು ಸಾವಿರ ವರ್ಷಗಳ ನಂತರವೂ ಶಾಶ್ವತ ಮುಂದೆ ಬರುವ ಜನಾಂಗಕ್ಕೂ ಪ್ರೇರಣಾ ಶಕ್ತಿ.

ಹಿಂದೂ ಧರ್ಮ ಪುನರುಜ್ಜೀವನಗೊಳಿಸಿದ ಸಂತ ಸ್ವಾಮಿ ವಿವೇಕಾನಂದರು ತಾವು ಅನುಭವಿಸಿದ ಕಷ್ಟಗಳು ಏನು ಕಡಿಮೆಯಿಲ್ಲ ಆದರೂ ಅದನೆಲ್ಲಾ ಮೆಟ್ಟಿ ನಿಂತು ನೀಡಿದ ಆಧ್ಯಾತ್ಮಿಕ ಬೆಳಗು ಭಾರತೀಯರಿಗೆ ಅದು ಕತ್ತಲಿನ ಕೋಣೆಗೆ ಬೆಳಕು ನೀಡಿದ ಅನುಭವ ಹೀಗೆ ಅಮೇರಿಕಾದ ಮುಂದೆ ತೆರೆದಿಟ್ಟ ಹಿಂದೂ ಧರ್ಮ ಭಾರತೀಯ ಸಂಸ್ಕೃತಿಯ ಜ್ಞಾನ ಇಡೀಯ ಜಗತ್ತಿಗೆ ಪ್ರಕಾಶಮಾನವಾದ ಜ್ಯೋತಿಯಾಗಿತ್ತು. ಜಗತ್ತಿಗೆ ಹಿಂದೂ ಧರ್ಮದ ಶ್ರೇಷ್ಠತೆ ತಿಳಿದಿತ್ತು ಸ್ವಾಮಿ ವಿವೇಕಾನಂದರ ಜೀವನವೇ ಒಂದು ಗರಡಿಮನೆ ಅಲ್ಲಿ ನಾವು ಕಲಿಬೇಕಾಗಿರುವ ಎಲ್ಲಾ ಶಾಸ್ತ್ರ ವಿದ್ಯೆಗಳು ಲಭ್ಯ. ಸ್ವಾಮಿ ವಿವೇಕಾನಂದರು ಸಾವಿರಾರು ಯುವಕರ ಹೃದಯದಲ್ಲಿ ನೆಲೆಸಿರುವ ಅಪೂರ್ವ ವ್ಯಕ್ತಿತ್ವ ಇಂದು ಮಾತ್ರವಲ್ಲ ಎಂದೆಂದಿಗೂ ವಿವೇಕಾನಂದರು ನಮ್ಮೊಂದಿಗೆ ಇದ್ದಾರೆ ಎಂದೇ ಸದಾ ಅನಿಸುತ್ತದೆ ಅವರ ಪ್ರಭಾವಕ್ಕೆ ಒಮ್ಮೆ ಒಳಗಾದರೆ ಮತ್ತೆ ಆ ವ್ಯಕ್ತಿ ಪೂರ್ತಿ ಬದಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಅಂತಹ ಅಸಾಧಾರಣ ಶಕ್ತಿಯ ಕಣ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಗಳು ಪ್ರತಿ ಮಾತುಗಳು ಶಾಶ್ವತ ಮನದಲಿ ಹೃದಯದಲಿ…

ಜೈ ಭಾರತ್ ಮಾತಾ


Share news

Related Articles

Leave a Reply

Your email address will not be published. Required fields are marked *

Back to top button