ಪ್ರೇರಣೆಲೇಖನ ಸಂಗಮ

ಯೂಟ್ಯಬ್ ಮೂಲಕ ಬದುಕು ಕಟ್ಟಿಕೊಂಡು, ಉಳಿದವರಿಗೂ ಆಸರೆಯಾದ ಅಂಧ ತಾರೆ ನಾಗಲಕ್ಷ್ಮಿ

Share news

ಬೊಡ್ಡು ನಾಗ ಲಕ್ಷ್ಮಿ ಅವರು ದೃಷ್ಟಿಹೀನ ಯೂಟ್ಯೂಬ್ ತಾರೆಯಾಗಿದ್ದು, ಅವರ ಅಡುಗೆಯ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. 2.5 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಅವರ ವೀಡಿಯೊಗಳು ಕವಿತಾ ನಾಗ ವ್ಲಾಗ್ಸ್ ಎಂಬ ಯುಟ್ಯೂಬ್ ಚಾನೆಲ್ ಮೂಲಕ ನೋಡಬಹುದು.

ಲಕ್ಷ್ಮಿ ಅವರು ಕೃಷಿ ಕುಟುಂಬದಲ್ಲಿ ಜನಿಸಿದರು ಆದರೆ ಜೀವನೋಪಾಯಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಬೇಕಾಯಿತು. ತನ್ನ 10ನೇ ವಯಸ್ಸಿನಿಂದಲೇ ಕುಟುಂಬವನ್ನು ಪೋಷಿಸಲು ಚಿಕ್ಕಪುಟ್ಟ ಕೆಲಸಗಳನ್ನು ಮಾಡತೊಡಗಿದರು. ಲಕ್ಷ್ಮಿ ಅವರು ಯೂಟ್ಯೂಬ್ ತಾರೆಯಾಗಿ ಗಳಿಸಿದ ಅಪಾರ ಪ್ರೀತಿ ಮತ್ತು ಜನಪ್ರಿಯತೆಯೊಂದಿಗೆ,ಇದೀಗ ಅವರ ಕುಟುಂಬವು ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ.

ಖ್ಯಾತ ತೆಲುಗು ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗಿರುವ ಅವರ ಸಹೋದರ ಆದಿ ರೆಡ್ಡಿ ಮತ್ತು ಅವರ ಅತ್ತಿಗೆ ಬೊಂಡಾಲಾ ಕವಿತಾ ಅವರ ಪ್ರೋತ್ಸಾಹದಿಂದ ಲಕ್ಷ್ಮಿ ಅವರು ತಮ್ಮ ಯುಟ್ಯೂಬ್ ಮೂಲಕ ಅಡುಗೆಯನ್ನು ಕಲಿಸುವ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದರು. ಅಂದಿನಿಂದ ಅವರು ತಮ್ಮ ಕುಟುಂಬದ ಆದಾಯ ಮತ್ತು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಅವರು ಸೂದ್ ಚಾರಿಟಿ ಫೌಂಡೇಶನ್‌ಗೆ ಮತ್ತು ಕೋವಿಡ್ ಪೀಡಿತ ಜನರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ 25,000 ದೇಣಿಗೆ ನೀಡಿದರು. ಇದಲ್ಲದೆ, ಅವರು ತಮ್ಮ ಗ್ರಾಮದ ಯುವಕರಿಗೆ ಕ್ರೀಡಾ ಕಿಟ್‌ಗಳನ್ನು ಖರೀದಿಸಲು 60,000 ರೂಪಾಯಿಗಳ ಆರ್ಥಿಕ ಕೊಡುಗೆಯನ್ನು ನೀಡಿದರು. ಹೀಗೆ ತಾವು ಅಂಧರಾಗಿ ಯಾರಿಗೂ ಕಡಿಮೆಯಿಲ್ಲದಂತೆ ಸಾಧಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಲಕ್ಷ್ಮಿ ಅವರು ದೈನಂದಿನ ಜೀವನದ ವಾಸ್ತವಿಕ ನೋಟವನ್ನು ಪ್ರದರ್ಶಿಸುವುದು ವ್ಲಾಗ್ ಅನ್ನು ಪ್ರಾರಂಭಿಸುವ ಹಿಂದಿನ ಆಲೋಚನೆಯಾಗಿದೆ. ಬಲಗಣ್ಣಿನಲ್ಲಿ ಕೇವಲ 5 ಪ್ರತಿಶತದಷ್ಟು ಗೋಚರತೆಯನ್ನು ಹೊಂದಿರುವ ಲಕ್ಷ್ಮಿ ಹೇಳುತ್ತಾರೆ, “ ನನಗೆ ಕಾಣಿಸದಿದ್ದರೆ ಏನು? ಇತರ ಜನರು ಮಾಡಬಹುದು ಮತ್ತು ನನ್ನ ಅಡುಗೆ ಮಾಡಲ ಅವರಿಗೆ ಕಲಿಸಬಲ್ಲೆ.

ಆಕೆಯ ವೀಡಿಯೋಗಳ ವಿಶಿಷ್ಟತೆ ಏನೆಂದರೆ, ಖಾದ್ಯವನ್ನು ಹೇಗೆ ತಯಾರಿಸಬೇಕೆಂದು ವಿವರಿಸುವ ಸರಳತೆ. ಪ್ರತಿ ವೀಡಿಯೋದಲ್ಲಿನ ಲಕ್ಷ್ಮಿಯವರ ನಗು ಜೀವನದ ನೋವುಗಳನ್ನು ಮರೆಸಿ ಅಡುಗೆ ಮಾಡಲು ವಿವರಿಸುವ ಶೈಲಿ ಎಲ್ಲಾವೂ ಜನರ ಮನಸ್ಸು ಗೆಲ್ಲುವುದು ಖಚಿತ. ತಮ್ಮ ಸಾಮಾಜಿಕ ಸೇವೆಯೊಂದಿಗೆ ಅಂಧರಾಗಿದ್ದರು ಸುಮ್ಮನೆ ಕುಳಿತುಕೊಳ್ಳದೆ ತಾವೇ ಸ್ವತಃ ಯುಟ್ಯೂಬ್ ಮೂಲಕ ಬದುಕು ಕಟ್ಟಿಕೊಂಡು ಉಳಿದ ಅಂಧರಿಗೆ, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button