ಪ್ರೇರಣೆಲೇಖನ ಸಂಗಮ

ಸವಾಲಿಗೆ ಸವಾಲೆಸೆದ ಭಾರತದ ಮೊದಲ ಅಂಧ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್

Share news

ಐಎಎಸ್ ಎಂಬುದು ಎಷ್ಟೋ ಜನರಿಗೆ ಕನಸಿನ ಕೂಸು ಅದನ್ನು ಸಾಧಿಸಲು ಸದಾ ಪರಿಶ್ರಮ ಪಡುತ್ತಿರುವ ಸಾವಿರಾರು ಜನರ ಮಧ್ಯೆ ಹುಟ್ಟಿನಿಂದಲೇ ದೃಷ್ಟಿ ದೋಷದಿಂದ ಬಳಲುತ್ತಿದ್ದ ಪ್ರಾಂಜಲ್ ಪಾಟೀಲ್ ತಮ್ಮ ಆರನೇ ವಯಸ್ಸಿನಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡು, ಆಕೆ ಭಾರತದ ಮೊದಲ ಅಂಧ ಐಎಎಸ್ ಅಧಿಕಾರಿಯಾಗಿ ಮಾಡಿದ ಸಾಧನೆ ಏರಿದ ಎತ್ತರ ಅಂಧರಿಗೆ ಪ್ರೇರಣೆಯಾಗಿ ನಿಂತ ರೀತಿ ನಿಜಕ್ಕೂ ಸ್ಪೂರ್ತಿದಾಯಕ.

ಭಾರತೀಯ ಆಡಳಿತ ಸೇವೆಗೆ ಸೇರುವುದು ಅವರ ಬಹುದಿನದ ಕನಸಾಗಿತ್ತು ಮತ್ತು ಕೆಲವೇ ವರ್ಷಗಳಲ್ಲಿ ಅವರು ಅದನ್ನು ಸಾಧಿಸಲು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಗಿತ್ತು. ಮಹಾರಾಷ್ಟ್ರದ ಉಲ್ಹಾಸ್‌ ನಗರದ ನಿವಾಸಿಯಾಗಿರುವ ಪ್ರಾಂಜಲ್ ಪಾಟೀಲ್ ತನ್ನ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅದೇ ಸಮಯಕ್ಕೆ ಪ್ರಾಂಜಲ್‌ ಪಾಟೀಲ್ ಗೆ ಆರಂಭದಲ್ಲಿ ಭಾರತೀಯ ರೈಲ್ವೇ ಅಕೌಂಟ್ಸ್ ಸರ್ವಿಸ್ (IRAS) ನಲ್ಲಿ ಸ್ಥಾನವನ್ನು ನೀಡಲು ಮುಂದೆ ಬಂತು ಆದರೆ ರೈಲ್ವೆಯು ಈ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. ಅವರ ಕುರುಡುತನದ ಕಾರಣದಿಂದಾಗಿ ನೇಮಕ ಮಾಡಲು ನಿರಾಕರಿಸಿತು.

ತನ್ನ ಅಂಗವೈಕಲ್ಯದಿಂದಾಗಿ ರೈಲ್ವೆಯಿಂದ ನಿರಾಕರಣೆ ಮಾಡುವ ಮೂಲಕ ತನ್ನನ್ನು ನಿರಾಶೆಗೊಳಿಸಿದೆ ಎಂದು ಪ್ರಾಂಜಲ್ ಪಾಟೀಲ್ ಅವರು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಉತ್ತಮ ಅಧಿಕಾರಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ತುಡಿತ ಹೆಚ್ಚುತ್ತಲೇ ಇತ್ತು. ಛಲ ಬಿಡದೆ ಮುಂದೆ ಸಾಗಲು ನಿರ್ಧರಿಸದರು. ಪ್ರಾಂಜಲ್ ಪಾಟೀಲ್ ತನ್ನ ಕನಸನ್ನು ನನಸಾಗಿಸಲು ಎರಡನೇ ಪ್ರಯತ್ನದಲ್ಲಿ ತನ್ನ ಅಂಕವನ್ನು ಹೆಚ್ಚಿಸುವುದೇ ಏಕೈಕ ಮಾರ್ಗವೆಂದು ತಿಳಿದಿದ್ದರು ಮತ್ತು ಮುಂಬರುವ ಪರೀಕ್ಷೆಗಳ ತಯಾರಿಯಲ್ಲಿ ದಣಿವಿಲ್ಲದೆ ಸತತ ಶ್ರಮದಿಂದ ತಯಾರಿ ಮಾಡಲು ಪ್ರಾರಂಭಿಸಿದರು.

ಅವರ ಪ್ರಯತ್ನಕ್ಕೆ ಕೊನೆಗೂ ಫಲ ದೊರಕಿತು. ತನ್ನ ಎರಡನೇ ಪ್ರಯತ್ನದಲ್ಲಿ, ಪ್ರಾಂಜಲ್ ಪಾಟೀಲ್ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಮೊದಲಿಗಿಂತ ಉತ್ತಮ ಶ್ರೇಣಿಯನ್ನು ಗಳಿಸಿದರು. ತನ್ನ ಶ್ರೇಣಿಯನ್ನು ಸುಧಾರಿಸಿದ್ದು ಮಾತ್ರವಲ್ಲದೆ, ದೇಶದಕ್ಕೆ 124 ನೇ ಸ್ಥಾನ ಪಡೆದರು. ಇದು ಅವರ ಗಮನಾರ್ಹ ಸಾಧನೆಯಾಗಿದೆ.

ಅಂತಿಮವಾಗಿ ಅವರು ನಾಗರಿಕ ಸೇವೆಗಳಿಂದ ಅಂಗೀಕರಿಸಲ್ಪಟ್ಟಳು ಮತ್ತು ಕೇರಳದ ಎರ್ನಾಕುಲಂನಲ್ಲಿ ಸಹಾಯಕ ಕಲೆಕ್ಟರ್ ಸೇರಿಕೊಂಡಾಗ ಅವರ ಪ್ರಯತ್ನಗಳಿಗೆ ಬಹುಮಾನ ನೀಡಲಾಯಿತು. ತನ್ನ ಹೊಸ ಹುದ್ದೆಯನ್ನು ವಹಿಸಿಕೊಂಡ ನಂತರದ ಮೊದಲ ಕೆಲವು ದಿನಗಳಲ್ಲಿ, ಪ್ರಾಂಜಲ್ ಪಾಟೀಲ್ ತನ್ನ ಕೆಲಸದಿಂದ ಆಕರ್ಷಿಸಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಾ ತನ್ನ ಸಾಧನೆಯನ್ನು ಮೆರೆದರು, ದೇಶವೇ ಗೌರವಿಸಿತು.

ಪ್ರಾಂಜಲ್ ಪಾಟೀಲ್ ಪ್ರಕಾರ, ಆಕೆಯ ಸಾಧನೆಗಳನ್ನು ಅಸಾಧಾರಣ ಅಂಧರಾಗಿ ಮಾಡಿದ ಸಾಧನೆ ಎನ್ನುವುದರ ಬದಲಾಗಿ, ಸಮಾಜವು “ಸಾಮಾನ್ಯ” ಎಂದು ಪರಿಗಣಿಸಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹೊಂದಿರುವವರಂತೆ ಸಮಾನವಾಗಿ ಕಂಡು ಅವಕಾಶಗಳನ್ನು ನೀಡಬೇಕು ಎಂದು ಹೇಳುತ್ತಾರೆ.

ಪ್ರಾಂಜಲ್ ಪಾಟೀಲ್ ತನ್ನ ಪದವಿಪೂರ್ವ ಶಿಕ್ಷಣವನ್ನು ರಾಜ್ಯಶಾಸ್ತ್ರದ ಮೇಲೆ ಕೇಂದ್ರೀಕರಿಸಿ ಪೂರ್ಣಗೊಳಿಸಿದರು. ನಂತರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಅಂತರಾಷ್ಟ್ರೀಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಹಾಗೂ ಅವರು ಅದೇ ಸಂಸ್ಥೆಯಿಂದ ಎಂಫಿಲ್ ಮತ್ತು ಪಿಎಚ್‌ಡಿನ್ನೂ ಪಡೆದರು. ಮುಂಬೈನ ದಾದರ್‌ನಲ್ಲಿರುವ ಕಮಲಾ ಮೆಹ್ತಾ ಅಂಧ ಮಕ್ಕಳ ಶಾಲೆಯಿಂದ ಪ್ರಾಂಜಲ್ ಪಾಟೀಲ್ ತನ್ನ ಶೈಕ್ಷಣಿಕ ಪ್ರಯಾಣವನ್ನು ಆರಂಭಿಸಿದರು.ಅವರಿಗೆ ಪೋಷಕರು, ಸ್ನೇಹಿತರು ಮತ್ತು ಪತಿ ಯಾವಾಗಲೂ ಅವರ ಕನಸುಗಳನ್ನು ತಲುಪಲು ಪ್ರೋತ್ಸಾಹಿಸುತ್ತಿದ್ದರು ಮತ್ತು ಅಡೆತಡೆಗಳನ್ನು ದಾಟಿ ಮುಂದೆ ಸಾಗಲು ಸಹಾಯ ಮಾಡಿದ್ದಾರೆ.

ಅಂಧರಾಗಿ ದೇಶ ಸೇವೆ ಮಾಡಬೇಕೆಂಬ ಛಲದಿಂದ ದೈಹಿಕವಾಗಿ ಬಂದ ಸಮಸ್ಯೆಗಳನ್ನು ಎದುರಿಸಿ ಮನಸಿಕ ಸ್ಥೈರ್ಯದೊಂದಿಗೆ ಜೀವನದಲ್ಲಿ ನಡೆದ ಕಠಿಣ ದಾರಿ, ಮಾಡಿದ ಸಾಧನೆ, ಭಾರತದ ಮೊದಲ ಅಂಧ ಐಎಎಸ್ ಅಧಿಕಾರಿಯಾದ ಕ್ಷಣ ಪ್ರತಿಯೋಬ್ಬರಿಗೂ ಪ್ರೇರಣೆ ನೀಡಿತ್ತದೆ. ಸಾಧನೆ ಮಾಡಲು ಅಂಗ ವೈಫಲ್ಯವು ಅಡ್ಡಿ ಆಗುವುದಿಲ್ಲ, ಛಲವಿದ್ದರೆ ಏನನ್ನೂ ಸಾಧಿಸಲು ಸಾಧ್ಯ ಎಂದು ಪ್ರಾಂಜಲಿ ಪಾಟೀಲ್ ತೋರಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button