ಪ್ರತಿಭಾನ್ವೇಷಣೆಲೇಖನ ಸಂಗಮ

ನಟನೆಯ ಮೂಲಕ ಮನ ಸೆಳೆದ ಹ್ಯಾಂಡ್ ಸಮ್ ಹುಡುಗ ಸೂರಜ್ ಹೊಳಲು

Share news

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ “ಗೃಹಪ್ರವೇಶ” ದಲ್ಲಿ ನಾಯಕ ಮಿಥುನ್ ಆಗಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಸೂರಜ್ ಹೊಳಲು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ “ಯಾರೇ ನೀ ಮೋಹಿನಿ” ಯಲ್ಲಿ ನಾಯಕ ಮುತ್ತು ಅಲಿಯಾಸ್ ಮುತ್ತುಮಾಮನಾಗಿ ಬಣ್ಣ ಹಚ್ಚಿದ ಸೂರಜ್ ಹೊಳಲು ತದ ನಂತರ ಕನ್ನಡ ಕಿರುತೆರೆಯಲ್ಲಿ ನಟಿಸಿದ್ದು ಕಡಿಮೆಯೇ!

ಇನ್ನೂ ಓದಿ.. “ಸಿಡಿಲಮರಿ – ರಂಗಪಾದರಸ ತೀರ್ಥಹಳ್ಳಿ ಗೋಪಾಲ ಆಚಾರ್ಯ “

“ಯಾರೇ ನೀ ಮೋಹಿನಿ” ಧಾರಾವಾಹಿಯ ನಂತರ ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸೂರಜ್ ಹೊಳಲು ತೆಲುಗು ಧಾರಾವಾಹಿ “ಚಿಟ್ಟಿತಲ್ಲಿ” ಯಲ್ಲಿ ನಾಯಕನಾಗಿ ನಟಿಸಿದ್ದಲ್ಲದೇ ಪರಭಾಷೆಯ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪುಟ್ಟಕ್ಕನ ಮಕ್ಕಳು” ಧಾರಾವಾಹಿಯಲ್ಲಿ ಅತಿಥಿ ಪಾತ್ರ ಭುವನ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ ಸೂರಜ್. ನಾಯಕಿ ಸ್ನೇಹಾಳಂತೆಯೇ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲವನ್ನು ಹೊಂದಿರುವ ಭುವನ್ ಎಂಬ
ಪಾತ್ರಕ್ಕೆ ಸೂರಜ್ ಜೀವ ತುಂಬುತ್ತಿದ್ದಾರೆ.

ಇನ್ನೂ ಓದಿ.. ಕೈಲಾಸದ ಒಡೆಯನಿಗೆ ಪ್ರಿಯ ಈ ನಾಗಲಿಂಗ ಪುಷ್ಪ

ಕನ್ನಡದ ಜೊತೆಗೆ ಪರಭಾಷಾ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಸೂರಜ್ ಅವರ ನಟನಾ ಪಯಣ ಶುರುವಾಗಿದ್ದು “ಕುಲವಧು” ಧಾರಾವಾಹಿಯಿಂದ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಕುಲವಧು” ಧಾರಾವಾಹಿಯಲ್ಲಿ ನಾಯಕ ಗೌರವ್ ಆಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು ಸೂರಜ್ ಹೊಳಲು. ಮುಂದೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಸೂರಜ್ ನಟಿಸಿದ್ದರೂ ತಮ್ಮ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ನಿಜ.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಇನ್ನು ನಟನೆಯ ಹೊರತಾಗಿ ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿದ್ದಾರೆ ಸೂರಜ್ ಹೊಳಲು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಡ್ಯಾನ್ಸಿಂಗ್ ಚಾಂಪಿಯನ್ ” ನಲ್ಲಿ ಸ್ಪರ್ಧಿಯಾಗಿ ಸೈ ಎನಿಸಿಕೊಂಡಿರುವ ಸೂರಜ್ ಅವರ ನಟನಾ ಜರ್ನಿ ಕಲರ್ ಫುಲ್ ಆಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಥೈಲ್ಯಾಂಡ್ ನಲ್ಲಿ ಹಿಂದೂ ಧರ್ಮದ ಸಂಕೇತವಾದ ಸೃಷ್ಟಿಕರ್ತ ಬ್ರಹ್ಮ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಮುಖ್ಯವಲ್ಲ, ದೃಢ ಮನಸ್ಸು ಬೇಕು ಎಂದ ಪೂರ್ಣಿಮಾ

ಯಕ್ಷಗಾನ ಕಲಾ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ


Share news

Related Articles

Leave a Reply

Your email address will not be published. Required fields are marked *

Back to top button