ಪುತ್ತೂರುಲೇಖನ ಸಂಗಮ

ಪುತ್ತೂರು ತಾಲೂಕಿನ ವಿಶೇಷ ಪ್ರತಿಭೆ ಕಾರ್ತಿಕ್ ಗಾಣಿಗ

Share news

ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಅಡಗಿರುವುದು ಸಹಜ. ಏನಾದರೂ ಒಂದು ಸಾಧಿಸಬೇಕು ಎನ್ನುವ ಹಠ ನಮ್ಮಲ್ಲಿದ್ದರೆ ಪ್ರತಿಭೆಯನ್ನು ಅನಾವರಣಗೊಳಿಸುವ ಸಾಧಕರು ನಾವಾಗಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇವರೇ.

ಕಾಲ ಬದಲಾದ ಹಾಗೆ ಜನರು ಹೊಸತನ ಏನಾದರೂ ನೋಡಬೇಕು ಎನ್ನುವುದು ಸಹಜ. ಅಂತೆಯೇ ಕೊರೋನಾದಂತಹ ಮಹಾಮಾರಿ ವಿಶ್ವಾದ್ಯಂತ ತನ್ನ ಅಲೆ ಅಬ್ಬರಿಸಿದ್ದು, ಮನೆಯಲ್ಲಿಯೇ ಕೂರುವಂತಹ ಪರಿಸ್ಥಿತಿ ಅಂದಿನದ್ದಾಗಿತ್ತು. ಇಂತಹ ಸಮಯವನ್ನು ಉತ್ತಮವಾಗಿ ಬಳಸಿಕೊಂಡು ವಿಶೇಷ ರೀತಿಯ ಆಕರ್ಷಣೆಗೆ ಒಳಗಾಗುವ ಜೊತೆಗೆ ಹಲವಾರು ಪ್ರಶಂಸೆಗೆ ಕಾರಣಕರ್ತರಾದ ನಮ್ಮೂರಿನ ಪ್ರತಿಭೆಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಪುತ್ತೂರು ತಾಲೂಕಿನ ಕಂಬಳ ಕೋಡಿಯ ಆನಂದ ಮತ್ತು ಯಶೋಧ ದಂಪತಿಯ ಮಗನಾದ ಕಾರ್ತಿಕ್ ಬಾಲ್ಯದಿಂದಲೂ ಕಲೆಯಲ್ಲಿ ಉತ್ತಮ ಆಸಕ್ತಿ ಹೊಂದಿರುವ ಪ್ರತಿಭೆ.

ಪ್ರಸ್ತುತ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ಬಿಕಾಂ‌ ಪದವಿ ವ್ಯಾಸಂಗ ಮಾಡುತ್ತಿರುವ ಇರುವ ಇವರು, ಕಲಿಕೆಯ ಜೊತೆ ತನ್ನ ಬಿಡುವಿನ ಸಮಯದಲ್ಲಿ ವಿಶೇಷ ರೀತಿಯ ಕಿರು ವಾಹನ ತಯಾರಿಕೆ ಮಾಡುವ ಕಲೆಯನ್ನು ಹೊಂದಿದ್ದಾರೆ.ಅಬ್ಬಾ ! ಇವರು ಮಾಡುವ ಯಾವುದೇ ವಾಹನದ ರೂಪ ನೋಡಿದರೆ ದಿನನಿತ್ಯ ನಾವು ನೋಡುವ ರಾಜಹಂಸ ,ಟೂರಿಸ್ಟ್ ಬಸ್ ಗಳಂತೆಯೇ ಭಾಸವಾಗುತ್ತೆ. ಇದನ್ನು ವಿಶೇಷ ರೀತಿಯಲ್ಲಿ ರಚಿಸಿ ಮೂರು ನಾಲ್ಕು ದಿನಗಳಲ್ಲಿ ಸುಂದರವಾದ ಬಸ್, ಆಟೋ ಜೀಪುಗಳಂತಹ ವಾಹನಗಳನ್ನು ರಚಿಸುವುದರಲ್ಲಿ ಭೇಷ್ ಎನಿಸಿದವರು .

ನಾವು ಕಸ ಅಂತ ಬಿಸಾಡುವ ರಟ್ಟಿನ ತುಂಡುಗಳಿಗೆ ಹೊಸದಾದ ಜೀವ ನೀಡಿ ಅದರಲ್ಲಿ ನವನವೀನ ಮಾದರಿಯ ಕಿರುವಾಹನಗಳನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತುಂಬಾ ಸರಳ ವ್ಯಕ್ತಿತ್ವ ಹೊಂದಿರುವ ಇವರಿಗೆ ಆಸಕ್ತಿ, ಶ್ರದ್ಧೆಯೇ ಪ್ರೇರಣೆ ಎಂದು ಹೇಳಿದರು ತಪ್ಪಾಗಲಾರದು. ತನ್ನ ಓದಿನ ಜೊತೆಗೆ ಸಮಯ ಸಿಕ್ಕಾಗ ಮನೆಯ ಜವಾಬ್ದಾರಿ ನೀಗಿಸಲು ಕೆಲಸಕ್ಕೂ ಹೋಗುವುದರೊಂದಿಗೆ ತಂದೆ ತಾಯಿಗೆ ಉತ್ತಮ‌ ಮಗನಾಗಿ ಗುರುತಿಸಿಕೊಂಡಿರುತ್ತಾರೆ.

ಈಗಾಗಲೇ ರಟ್ಟಿನ ತುಂಡಿನ ಮೂಲಕ ಕಿರುವಾಹನ ತಯಾರಿಸಿ ಅದಕ್ಕೆ ಸತ್ಯಾಂಬಿಕ, ಶಾರದ,ತೇಜಸ್, ಚಿನ್ನೂ ಈ ರೀತಿಯ ಹೆಸರು ನೀಡುವುದರೊಂದಿಗೆ ಗಮನಸೆಳೆದಿದ್ದಾರೆ. ಬಡತನದಲ್ಲಿ‌ಹುಟ್ಟಿದರೂ ಇವರ ಸಾಧನೆ ಎಂತಹ ಶ್ರೀಮಂತ ವ್ಯಕ್ತಿಯನ್ನೂ ಮೀರಿಸುವಂತಹದ್ದೆ ಆಗಿದೆ‌. ಇವರ ಕೆಲಸ ಕಾರ್ಯಗಳಿಗೆ ಮನೆಯವರ ಜೊತೆ ಸ್ನೇಹಿತರು ಪ್ರೊತ್ಸಾಹಿಸುತ್ತಾರೆ.

ವಿಭಿನ್ನ ರೀತಿಯಲ್ಲಿ ಸಜ್ಜಾಗುತ್ತಿದೆ ಕಿರುವಾಹನಗಳು:

ಈಗಾಗಲೇ ಕಸದಿಂದ ಅಂದರೆ ರಟ್ಟಿನ ತುಂಡುಗಳಿಂದ ತಯಾರಾಗುತ್ತಿದ್ದ ಕಿರುವಾಹನಗಳಿಗೆ ಕಾರ್ತಿಕ್ ಈಗ ವಿಭಿನ್ನವಾದ ರೂಪ ನೀಡಲು ಮುಂದಾಗಿದ್ದಾರೆ. ನೈಜತೆಯನ್ನು ಕಾಪಾಡುವ ನಿಟ್ಟಿನಲ್ಲಿ ಫ್ಲೈ ವುಡ್ ಶೀಟ್ ಅಳವಡಿಸಿ ಉತ್ತಮವಾಗಿ ಪ್ರೇಕ್ಷಕರನ್ನು ಆಕರ್ಷಿಸುವಂತೆ ಕಿರುವಾಹನಗಳ ತಯಾರಿ‌ ನಡೆಸುತ್ತಿದ್ದಾರೆ.

ಬಿಡುವಿನ ಸಮಯದಲ್ಲಿ ಕಥೆ ಕವನಗಳನ್ನು ಓದುವ ಹವ್ಯಾಸವನ್ನು ಇಟ್ಟು ಕೊಂಡಿರುವ ಇವರು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ತಾನೂ ಓದಿದ ಪದವಿಗೆ ಒಂದು ಸಣ್ಣ ಕೆಲಸ ಸಿಕ್ಕಿದರೆ ಸಾಕು ಅಂತಾರೆ ನಮ್ಮ ಕಾರ್ತಿಕ್.

ಮೊಬೈಲ್,ಲ್ಯಾಪ್ ಟಾಪ್ ಅಂತ ಕಾಲ ಕಳೆಯುವ ಈ ಸಮಯದಲ್ಲಿ ತನ್ನ ಕ್ರೀಯಾಶೀಲತೆಯಿಂದ ಹೊಸತರ ಪ್ರತಿಭೆ ಅನಾವರಣಗೊಳಿಸಿ ತಾಲೂಕಿನ ಹಿರಿಮೆಯನ್ನು ರಾಜ್ಯಾದ್ಯಂತ ಪಸರಿಸಿದ ಇವರ ಸಾಧನೆ ಇನ್ನಷ್ಟು ಪ್ರಶಂಸೆಗೆ ಪಾತ್ರರಾಗಲಿ‌ ಎಂಬುದೇ ನಮ್ಮ ಆಶಯ.


Share news

Related Articles

Leave a Reply

Your email address will not be published. Required fields are marked *

Back to top button