ಲೇಖನ ಸಂಗಮಹಿಂದೂ ಆಚಾರ-ವಿಚಾರ

ಕುಂಕುಮ ಧಾರಣೆ ಹಿಂದಿನ ಆಧ್ಯಾತ್ಮಿಕ ಶಕ್ತಿ ಹಾಗೂ ವೈಜ್ಞಾನಿಕ ಮಹತ್ವ

Share news

ಭಾರತಸ್ಯ ಪ್ರತಿಷ್ಠೇ ದ್ವೇ।
ಸಂಸ್ಕೃತಿ ಸಂಸ್ಕೃತ ಸ್ತಥಾ।।
ಅಂದರೆ ನಮ್ಮ ಭಾರತದಲ್ಲಿ ಎರಡು ಪ್ರಮುಖವಾದ ಅಂಶ ಒಂದು ಸಂಸ್ಕೃತ ಭಾಷೆ ಇನ್ನೊಂದು ಸಂಸ್ಕೃತಿ ಅಂದರೆ ನಮ್ಮ ಆಚಾರ ವಿಚಾರಗಳು ನಮ್ಮ ಸಂಸ್ಕೃತಿಯ ಪ್ರಮುಖ ಕುರುಹು ಸ್ತ್ರೀ ಪುರುಷರಿಬ್ಬರು ಧರಿಸುವ ಕುಂಕುಮ ನಮ್ಮ ಸ್ವಾಸ್ತ್ಯಕ್ಕಾಗಿ ಹಾಗೂ ಸಂಸ್ಕೃತಿಯ ಕುರುಹಾಗಿ ಇದನ್ನು ಬಳಸಲಾಗುತ್ತದೆ. ಕುಂಕುಮದ ತಯಾರಿಕೆಯಲ್ಲಿ ಅರಿಶಿಣವನ್ನು ಬೆರೆಸಿರುವುದರಿಂದ ಇದು ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ.

ಕುಂಕುಮಂ ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ। ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ।।
ಕುಂಕುಮ ಶುಭದ ಸಂಕೇತ ಇದನ್ನು ಧರಿಸುವುದರಿಂದ ನನಗೆ ಶುಭವಾಗಲಿ ನನ್ನ ಮನಸ್ಸಿಗೆ ಶಾಂತಿ ಉಂಟಾಗಲಿ ಎಂಬ ಪ್ರಾರ್ಥನೆಯೊಂದಿಗೆ ಉಂಗುರದ ಬೆರಳಿನಿಂದ ಕುಂಕುಮ ಹಚ್ಚುವುದರಿಂದ ನಮ್ಮ ಆಜ್ಞಾಚಕ್ರ ಜಾಗೃತಗೊಂಡು ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಉಂಟಾಗುತ್ತದೆ. ಅಷ್ಟೇ ಅಲ್ಲ ಆಜ್ಞಾಚಕ್ರವು ರಕ್ತನಾಳಗಳು ಹಾಗೂ ನರಗಳು ಸಂಧಿಸುವ ಒಂದು ಪ್ರಮುಖ ಜಾಗ ಈ ಜಾಗವನ್ನು ಪ್ರಚೋದಿಸುವುದರಿಂದ ಒತ್ತಡ ಕಳೆದುಕೊಂಡು ಮನಸ್ಸು ಶಾಂತವಾಗುತ್ತದೆ ಎಂದು ಹೇಳುತ್ತಾರೆ.

ಆಯುರ್ವೇದ ಪಂಚಕರ್ಮ ಚಿಕಿತ್ಸೆಯಲ್ಲಿ ಶಿರೋಧಾರ ಮಾಡುವಾಗ ಇದೇ ಜಾಗಕ್ಕೆ ಎಣ್ಣೆ ಬೀಳುವಂತೆ ಮಾಡುತ್ತಾರೆ. ಅದು ಅಜ್ಞಚಕ್ರವನ್ನು ಚುರುಕುಗಳಿಸಿ ಮುಖದ ನರಗಳನ್ನು ಪ್ರಚೋದಿಸಿ ದೇಹಕ್ಕೆ ರಕ್ತ ಚಲನೆ ಹೆಚ್ಚಿಸಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಪ್ರತಿದಿನ ಕುಂಕುಮ ಅಥವಾ ಗಂಧ ಹಚ್ಚಿ ಕೊಳ್ಳುವುದರಿಂದ ಆರೋಗ್ಯ ಸಂಬಂಧಿ ಲಾಭವಿದೆ ತಲೆನೋವು ನಿದ್ರಾಹೀನತೆ, ಕಿವಿಗೆ ಸಂಬಂಧಿಸಿದ ಅನಾರೋಗ್ಯ ಕಣ್ಣಿನ ಅನಾರೋಗ್ಯ ಮುಂತಾದವುಗಳನ್ನು ದೂರವಿಡುವುದಕ್ಕೂ ಕುಂಕುಮ ಧಾರಣೆಗೂ ಸಂಬಂಧವಿದೆ.

ಕುಂಕುಮ ವಿಜಯದ ಸಂಕೇತವೂ ಹೌದು. ರಣರಂಗಕ್ಕೆ ತೆರಳುವ ಮುನ್ನ ಯೋಧರಿಗೆ ತಾಯಿ ತಿಲಕವಿಟ್ಟು ಕಳುಹಿಸುವುದನ್ನು ನೋಡಿರಬಹುದು, ಇದು ವಿಜಯ ಸಾಧಿಸಲಿ, ಸದಾ ಶುಭವಾಗಲಿ ಎಂಬ ಹಾರೈಕೆಯ ಸಂಕೇತವಾಗಿದೆ. ಸುಮಾರು 5000 ವರ್ಷಗಳ ಹಿಂದೆಯೂ ಹಿಂದೂ ಸಂಸ್ಕೃತಿಯಲ್ಲಿ ಕುಂಕುಮ ಹಚ್ಚುವ ಸಾಂಪ್ರದಾಯವಿತ್ತು. ಇದಕ್ಕೆ ಸಾಕ್ಷಿಗಳು ಸಿಗುತ್ತವೆ. ಬಲೂಚಿಸ್ಥಾನದ ಮೆಹ್ರ್‌ಗರ್‌ನಲ್ಲಿ ಉತ್ಖತನ ಮಾಡಿದ ಸಂದರ್ಭದಲ್ಲಿ ದೊರೆತ ಸ್ತ್ರೀಯರ ಪ್ರತಿಮೆಗಳಲ್ಲಿ, ಹರಪ್ಪಾ ನಾಗರಿಕತೆಯಲ್ಲೂ ಕೂದಲನ್ನು ವಿಭಜಿಸುವ ಬೈತಲೆಗೆ ಕುಂಕುಮವನ್ನು ಹಚ್ಚುವ ಸಂಪ್ರದಾಯವಿತ್ತು ಎನ್ನುವುದು ತಿಳಿದು ಬಂದಿದೆ. ಮಹಾಭಾರತದಲ್ಲಿ ಪಾಂಡವರು ಪಗಡೆಯಾಟದಲ್ಲಿ ಸೋತಾಗಲೂ ದ್ರೌಪದಿಯು ಅಸಹ್ಯ ಹಾಗೂ ಹತಾಶೆಯಿಂದ ಸಿಂಧೂರವನ್ನು ಒರೆಸಿದಳೆಂದು ಹೇಳಲಾಗುತ್ತದೆ. ಕುಂಕುಮದ ಬಳಕೆಯನ್ನು ಪುರಾಣ, ಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರಿಯಲ್ಲೂ ವಿವರಿಸಲಾಗಿದೆ.

ಕುಂಕುಮಾರ್ಚನೆ ಎಂದರೆ ದೇವಿಯ ಸಹಸ್ರ ನಾಮಾವಳಿಗಳನ್ನು ಹೇಳಿ ಶ್ರೀ ಚಕ್ರದ ಮೇಲೆ ಕುಂಕುಮ ಸಮರ್ಪಿಸುವುದು ಹೀಗೆ ಸಮರ್ಪಿತವಾದಂತಹ ಕುಂಕುಮದಲ್ಲಿ ದೇವಿಯ ಶಕ್ತಿ ಜಾಗೃತವಾಗುತ್ತದೆ. ಆ ಕುಂಕುಮವನ್ನು ಧರಿಸುವುದರಿಂದ ನಮ್ಮಲ್ಲಿಯೂ ಶಕ್ತಿ ಸಂಚಯವಾಗಿ ಆನಂದ ದೊರಕುತ್ತದೆ ಎಂದು ಹೇಳಲಾಗಿದೆ. ಆದರೆ ಕುಂಕುಮ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಆರೋಗ್ಯದ ಪ್ರತೀಕವೂ ಹೌದು. ಹೀಗೆ ವೈಜ್ಞಾನಿಕವಾಗಿ ಯೋಗ್ಯವಾಗಿರುವ ಸಂಸ್ಕೃತಿಯ ಪ್ರತೀಕವೂ ಆದ ಕುಂಕುಮವನ್ನು ಹಚ್ಚುವ ಮೂಲಕ ನಮ್ಮ ಸಂಸ್ಕೃತಿ ನಮ್ಮ ಆರೋಗ್ಯವನ್ನು ನಾವು ಉಳಿಸಿಕೊಳ್ಳೋಣ.


Share news

Related Articles

Leave a Reply

Your email address will not be published. Required fields are marked *

Back to top button