ಪ್ರೇರಣೆಲೇಖನ ಸಂಗಮ

ಸೃಜನಶೀಲ ಕಾಷ್ಠ ಶಿಲ್ಪ ಕಲಾವಿದರು : ಶ್ರೀ ಡಾ | ಬಾ ಮ ಭಟ್

Share news

ಕಾಸರಗೋಡು ಜಿಲ್ಲೆಯ ಪೆರ್ಲ-ಬದಿಯಡ್ಕ ನಡುವೆ ಬಣ್ಪುತಡ್ಕದ ಸಮೀಪ ಹಚ್ಚ ಹಸಿರಿನ ನಿಸರ್ಗ ರಮಣೀಯ ಪರಿಸರದಲ್ಲಿರುವ ಪ್ರದೇಶವಾದ ಬಾಳೆಕುಮೇರಿ. ಇಲ್ಲೊಂದು ಸುಮಾರು 45 ವರ್ಷಗಳ ಹಿಂದೆ ಇದ್ದ ಹಳೆಯ ಶೈಲಿಯ ಹಿರಿದಾದ ಎರಡು ಅಂತಸ್ತಿನ ಮನೆಯಲ್ಲಿ ಗಂಡಸರು -ಹೆಂಗಸರು -ಮಕ್ಕಳು ಸೇರಿದಂತೆ ವಾಸವಾಗಿದ್ದ ಇದೊಂದು ಕೂಡುಕುಟುಂಬ ಇಲ್ಲಿಯವರಾದ ಬಾಳೆಕುಮೇರಿ ಶ್ರೀ ವೆಂಕಟರಮಣ ಭಟ್ ಹಾಗೂ ಶ್ರೀಮತಿ ಗೌರಮ್ಮ ದಂಪತಿಗಳಿಗೆ 8 ಜನ ಗಂಡು ಮಕ್ಕಳು ಹಾಗೂ 2 ಜನ ಹೆಣ್ಣು ಮಕ್ಕಳು. 8ನೆಯ ಗರ್ಭದಲ್ಲಿ ಜನಿಸಿದ ಮಗನಿಗೆ ಮಹಾಬಲ ಎಂದು ನಾಮಕರಣ ವಾಗಿ, ವರ್ಷ-ವರ್ಷ ಕಳೆದರೂ ವರ್ಷಗಳಾರಕ್ಕೆ ವಿದ್ಯಾಭ್ಯಾಸಕ್ಕಾಗಿ ಊರಿನ ಶಿಕ್ಷಣ ಸಂಸ್ಥೆಗೆ ದಾಖಲಾತಿಗೊಂಡು ಮುಂದುವರಿದವರು ಶ್ರೀ ಮಹಾಬಲ ಭಟ್ಟರು.

ಈ ಮನೆಯ ಪಕ್ಕದಲ್ಲೇ ಅಡಿಕೆ ತೋಟವಿದ್ದು, ಅಲ್ಲಿಂದಲೇ ಹಕ್ಕಿಗಳ ಕಲರವ ಅಲ್ಲದೆ ಮುಜುಗಳ ಹಾರಾಟ – ಚೀರಾಟ ಕೇಳಿ ಬಂದು, ಹಿಂಬದಿಯ ಬಾಗಿಲಲ್ಲೇ ನೋಡಿದಾಗ ನಮ್ಮನ್ನೇ ದಿಟ್ಡಿಸಿ ನೋಡುತ್ತಿದ್ದವು.ಕೂಗಳತೆಗೆ ನಿಲುಕದಷ್ಟು ಇನ್ನೂ ದೂರದಲ್ಲಿ ಬೇಸಾಯ ಮಾಡುತ್ತಿದ್ದ 7 – 8 ಎಕರೆಗಳಷ್ಟು ಗದ್ದೆ ಗಳಿದ್ದು, ಪಕ್ಕದಲ್ಲೇ ಉಳುವುದಕ್ಕಾಗಿ 3 – 4 ಜೊತೆ ಎತ್ತುಗಳು ಸೇರಿ ದಂತೆ ಒಂದು ಜಾನುವಾರು ಹಟ್ಟಿ ಇದ್ದು, ಬೇಸಾಯದ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಉಳಕೊಳ್ಳಲು ಪುಟ್ಟಮನೆ ಇತ್ತು. ಉಳಿದ ದಿನಗಳಲ್ಲಿ ಅವುಗಳಿಗೆ ತಿನಿಸುಗಳನ್ನು ದಿವಸಕ್ಕೆ ಎರಡು ಬಾರಿ ಮನೆಯಿಂದ ಹೋಗಿ ಕೊಟ್ಟು ಬರಬೇಕಾಗಿತ್ತು.

ಇದು ಸ್ವಲ್ಪ ಕಷ್ಟದ ಕೆಲಸವಾಗಿ, ಅವುಗಳಿಗೆ ಆಗಾಗ ಮೇವುಗಳ ಪೂರೈಕೆಗೆ ತೊಂದರೆ ಅಲ್ಲದೆ, ಜನರ ಒಡನಾಟದಲ್ಲಿಯೂ ಕಡಿಮೆಯಾಗಿ ಮೂಖ ಪ್ರಾಣಿಗಳು ಮೂಖ ವೇದನೆಯನ್ನು ಅನುಭವಿಸುವ ಪ್ರಸಂಗವೂ ಬರಬಹುದಾಗಿತ್ತು. ಆದರೂ ಮನೆಯ ಹಿರಿಯರು ಈ ಎಲ್ಲಾ ಕೆಲಸಗಳನ್ನು ನಿಭಾಯಿಸುವಲ್ಲಿ ಸಫಲರಾಗಿದ್ದು, ಶಾಲಾ ದಿನಗಳ ಬಿಡುವಿನ ವೇಳೆಯಲ್ಲಿ ಇವರ ಜೊತೆ – ಜೊತೆಯಾಗಿ ಶ್ರೀ ಮಹಾಬಲ ಭಟ್ ಮನಪೂರ್ವಕವಾಗಿ ಸಂತೋಷ ದಿಂದ ಭಾಗಿಯಾಗಿ ತಮ್ಮ ಸಮಯವನ್ನು ಒಳ್ಳೆಯ ರೀತಿಯಲ್ಲಿ ಕಳೆದು ಸದುಪಯೋಗ ಪಡಿಸಿಕೊಳ್ಳುತ್ತಿದ್ದರು.

ಶ್ರೀಯುತರು ಶಾಲಾದಿನಗಳನ್ನು ಕಳೆಯುತ್ತಿರುವಾಗಲೇ ಪ್ರಕೃತಿಯತ್ತ ಮುಖ ಮಾಡಿದವರು. ಹುಲ್ಲು-ಕಡ್ಡಿ ಸೇರಿದಂತೆ ಕಲ್ಲು-ಮಣ್ಣು , ಮರದಕೊಂಬೆ , ಬೇರು ಕಾಂಡ , ಸುತ್ತಿಕೊಂಡ ಬಳ್ಳಿಗಳು ಅಲ್ಲದೆ ಮನೆಯವರು ಬಿಸಾಡಿದ ತೆಂಗಿನ ಕಾಯಿಯ ಚಿಪ್ಪು (ಗೆರೆಟೆ) ಮುಂತಾದವುಗಳನ್ನು ಅತೀ ಸೂಕ್ಷ್ಮ ವಾಗಿ ಗಮನಿಸಿ, ತಮ್ಮ ಮನಸ್ಸಿಗೆ ಬಂದ ಭಾವನೆಗಳ ಮೂಲಕ ಅಂತವುಗಳಲ್ಲಿ ಚೂರಿ-ಕತ್ತಿಗಳನ್ನು ಉಪಯೋಗಿಸಿಕೊಂಡು ಗದ್ದೆ ಉಳುವ ನೊಗ- ನೇಗಿಲು, ಬೀಸುವ-ಅರೆಯುವ, ಕುಟ್ಟಿ ಪುಡಿ ಮಾಡುವ ಕಲ್ಲುಗಳು, ಸೌಟು , ತಟ್ಟೆ , ಚಮಚೆ , ಸೇಮಿಗೆಮಣೆ ಹೀಗೆ ಹಲವಾರು – ಹಲವು ವಿಧದ ಆಕಾರಗಳಲ್ಲಿ ಕೆತ್ತಿ ಆಕೃತಿಗಳನ್ನು ರೂಪಿಸುತ್ತಿದ್ದರು. ಇವರ ಜೀವಮಾನದಲ್ಲಿ”ಬಿಸಾಡು” ವ ವಸ್ತುಗಳೆಂಬ ಪದ ಇಲ್ಲವೇ ಇಲ್ಲ . ನಿರ್ಜೀವ ವಸ್ತುಗಳಗಳಿಗೆ ಜೀವ ತುಂಬುವವರು. ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಒಂದೆಡೆ ಕಸದಿಂದ ರಸ ಎಂಬ ಮಾತಿದ್ದರೆ, ಇವರದ್ದು ” ಕಸದಿಂದ ಕಲೆ ” ಇದೇ ಈ ಕಲಾವಿದರ ವೈಶಿಷ್ಟ್ಯ.

ಶ್ರೀ ಮಹಾಬಲ ಭಟ್ಟರು ಪ್ರೌಢ ಶಾಲೆಯ ವಿದ್ಯಾಭ್ಯಾಸದ ನಂತರ ಮೈಸೂರು ” ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ” ನಲ್ಲಿ ಕಲಾಗಾರಿಕೆಯ ಬಗ್ಗೆ ಶಿಕ್ಷಣ ಪಡೆಯಲು ಸೇರ್ಪಡೆಗೊಂಡು ತರಬೇತಿ ಗೊಳ್ಳಲು ಪ್ರಾರಂಬಿಸಿದರು. ಅಲ್ಲಿ ಕೊಟ್ಟಂತಹ ಕೆಲಸಗಳನ್ನು ಸರಿಯಾಗಿ ಮಾಡಿ ಕ್ಷಣಮಾತ್ರದಲ್ಲಿ ಪೂರ್ತಿಗೊಳಿಸುತ್ತಿದ್ದರು. ಉಳಿದವರಿಗೆಲ್ಲಾ ಮಾದರಿಯಾಗಿ, ಅಚ್ಚರಿಗೊಂಡ ಅದ್ಯಾಪಕರು ಪ್ರೀತಿ- ಅಭಿಮಾನದಿಂದ ಇವರಿಗೆ ಎಲ್ಲಾ ಉಪಕರಣ ಗಳನ್ನು ಸಂಗ್ರಹಿಸಿ ಕೊಟ್ಟು ಅಭ್ಯಾಸ ಮಾಡಲು ಅನುಕೂಲವಾಗಿದ್ದರೂ ಇವರ ಮನೋಭಾವನೆಗೆ ತಕ್ಕುದಾದ ಉತ್ತರ ದೊರಕಲಿಲ್ಲ. ಪ್ರಕೃತಿಯೇ ಮತ್ತೆ ಕೈ ಬೀಸಿ ಕರೆದಂತಾಗಿ, ಪ್ರಕೃತಿ ಯನ್ನೇ ” ಗುರು ” ವಾಗಿಸಿಕೊಳ್ಳುವ ಭಾವನೆಯಿಂದ 5 ವರ್ಷ ಗಳ ತರಬೇತಿ ಗೆ ಹೋದವರು 1 ವರ್ಷ ದಲ್ಲೇ ಮರಳಿ ಮನೆಗೆ ಬಂದರು.

ನಂತರ ಇವರು ಪದವಿ ಪೂರ್ವ ಶಿಕ್ಷಣ ವನ್ನು ಮುಗಿಸಿ, ಪದವಿಗೋಸ್ಕರ ಪುತ್ತೂರಲ್ಲಿ ಕಾಲೇಜನ್ನು ಸೇರಿಕೊಂಡು ಬಿ.ಎಸ್ ಸಿ 2 ನೇವರ್ಷ ಕಳೆಯುವಷ್ಟರಲ್ಲೇ ವಿದ್ಯಾಭ್ಯಾಸ ವನ್ನು ಮೊಟಕುಗೊಳಿಸಿ, ಬೆಂಗಳೂರಿನ ” ಕರ್ನಾಟಕ ಹೋಮಿಯೋಪಥಿಕ್ ” ಕಾಲೇಜಿನಲ್ಲಿ ಕೋರ್ಸಿಗೆ(M.B.H.S)ಸೇರಿಕೊಂಡವರು ಒಂದು ವರ್ಷ ಗಳಷ್ಟೇ ತರಬೇತಿ ಗೊಂಡು, ಮರಳಿಬಂದು ಅಂಚೆಯ ಮೂಲಕ ಕೋರ್ಸನ್ನು ಮುಂದುವರೆಸಿದರು. ನಂತರ ಸಮೀಪದ ಊರಾದ ಅಡ್ಯನಡ್ಕದಲ್ಲಿ ಜನರಿಗಾಗಿ ” ಜನತಾ ಕ್ಲಿನಿಕ್ ” ನ್ನು ಪ್ರಾರಂಬಿಸಿ ಡಾ| ಮಹಾಬಲ ಭಟ್ಟರೆಂದು ಊರಿಗೇ ಡಾಕ್ಟರ್ ಆಗಿ ಚಿರಪರಿಚಿತರಾದರು. ಬಹಳ ಸೌಮ್ಯವಾದಿಯ ಹಾಸ್ಯಪ್ರಜ್ಞೆವುಳ್ಳ ಇವರು ಔಷಧಿಗಳ ಗುಣಮಟ್ಟ ಒಳ್ಳೆಯದಾಗಿದ್ದು , ಬೆಲೆಯಲ್ಲಿ ಕಡಿಮೆ ಇದ್ದು, ಇವರದ್ದು ಮಾತಿಗೇ ಬೆಲೆ ಜಾಸ್ತಿ. ಅಲ್ಲದೆ ಇವರಿಗೆ ಹಿರಿಯರು – ಕಿರಿಯರು ಎಂಬ ಭೇದ ಭಾವನೆ ಗಳಿಲ್ಲದೆ ಎಲ್ಲರನ್ನೂ ಪ್ರೀತಿ-ಗೌರವ ದಿಂದ ಕಾಣುವವರು. ಇಂತವರು ಸಿಗುವುದು ಬಹಳ ವಿರಳ. ಕೃಷಿಕರಾಗಿ, ವೈದ್ಯರಾಗಿ,ಕೆತ್ತನೆ ಕೆಲಸಗಳನ್ನು ಮುಂದುವರೆಸುತ್ತಾ ಬಂದ ಇವರು ಸಾಹಿತಿಯೂ ಹೌದು.

ಶ್ರೀಯುತರು 1 ವರ್ಷಗಳ ಕಾಲ ಕ್ಲಿನಿಕ್ ನ್ನು ಮುಂದುವರೆಸಿ ನಂತರ ಮನೆಯಲ್ಲೇ ಒಂದು ಕೋಣೆಯನ್ನು ಔಷಧಾಲಯ ಮಾಡಿಕೊಂಡು, ಕೃಷಿಯ ಜೊತೆಗೆ ಪ್ರಕೃತಿ ಯನ್ನು ವೀಕ್ಷಿಸುತ್ತಾ ಪರಿಸರವನ್ನು ಸುತ್ತಾಡಿದರು. ಕಂಡ – ಕಂಡಲ್ಲೆಲ್ಲಾ ಸಿಕ್ಕಿ – ಸಿಕ್ಕಿದ್ದನ್ನೆಲ್ಲಾ ಬಾಚಿ ಕೊಂಡರು. ಮಣ್ಣನ್ನು ಅಗೆಯಿಸಿದರು. ಅಡಿಯಲ್ಲಿ ಹುದುಗಿದ್ದ ಮರದ ಕಾಂಡವನ್ನು ಹೊರತೆಗೆದು ಕಲಾಕೃತಿಯಾಗಿ ರೂಪಿಸಿದರು.ಜೊತೆಗೆ ಸಿಮೆಂಟ್, ಸುಣ್ಣ, ಚಿಪ್ಪು,ಗರಿ ,ಬೇರು, ಕಾಂಡ, ಸುತ್ತಿಕೊಂಡ ಬಳ್ಳಿಗಳು,, ಪಿ.ವಿ.ಸಿ.ಪೈಪುಗಳು ಸೇರಿದಂತೆ ಬಾತುಕೋಳಿ, ಕೊಕ್ಕರೆ, ಗಿಳಿ,ಕರಡಿ, ಆನೆ,ಆಮೆ,ಹಾವು,ಸಿಂಹ ಹೀಗೆ ಹಲವಾರುಗಳನ್ನು ಹಲವು ವಿಧಗಳಲ್ಲಿ ತಮ್ಮ ಸಲಕರಣೆಗಳಾದ ಬಡ್ಡು, ಉಳಿ, ಬ್ಲೇಡುಗಳ ಸಹಾಯದಿಂದ ಕಡಿದು ರೂಪ ಕೊಡುತ್ತಿದ್ದರು. ಸಲಕರಣೆಗಳನ್ನು ಮೈಸೂರಿನಿಂದಲೇ ತರಿಸುತ್ತಿದ್ದರು.ಇವರ ಸಾಧನೆ ಯನ್ನು ಬರೆಯುದಕ್ಕೆ ಸಾವಿರ-ಸಾವಿರ ಪುಟಗಳಿದ್ದರೂ ಸಾಕಾಗದು. ನೋಡುದಕ್ಕೆ ಕಣ್ಣುಗಳೆರಡೂ ಸಾಲದು.

ಇವರಿಂದ ಕೆತ್ತಲ್ಪಟ್ಟ ಒಂದೊಂದು ಕಲಾಕೃತಿಗಳು ಒಂದೊಂದು ಸಾರವತ್ತಾದ ಕಥಾಧಾರಿತವಾಗಿದ್ದು , ಪ್ರತಿಯೊಂದನ್ನೂ ವಿವರವಾಗಿ ವಿವರಿಸುತ್ತಾರೆ. ಅಲ್ಲದೆ ಕೂತುಕೊಳ್ಳುವ ಕುರ್ಚಿಗಳು, ಮಲಗುವ ಮಂಚ, ಊಟಕ್ಕಿರುವ ಮೇಜು, ಟೀಪಾಯಿ, ಸಿಮೆಂಟ್ ನ ಚಟ್ಟಿಗಳು, ಬಟ್ಟೆಗಳನ್ನಿಡುದಕ್ಕೆ ಪಿ.ವಿ.ಸಿ ಪೈಪ್ ಗಳಿಂದಲೇ 3 – 4 ಸಾಲುಗಳುಳ್ಳ ಆಯತಾಕಾರದ ಸ್ಟಾಂಡ್, ದೇವರ ಕೋಣೆಯಲ್ಲಿ ದೇವರ ಸುತ್ತಲೂ ಪ್ರಭಾವಳಿ ಯಂತೆ ಕಾಣುವ ಕಲಾಕೃತಿ. ಮುಸುಂಬಿ ಹಣ್ಣುಗಳ ಸುಲಿವಿಕೆಯಲ್ಲೂ ಇವರ ಕಲೆಗಾರಿಕೆ ಕಂಡು ಬರುತ್ತದೆ. 1979 ನೆಯ ಇಸವಿಯಲ್ಲಿ ಇವರ ಅಣ್ಣನ ಮಗಳಾದ ಗೀತಾಳ ಮದುವೆ (ನಂತರ ಶ್ರೀಮತಿ ಗೀತಾಲಕ್ಷ್ಮೀಶ ಚೊಕ್ಕಾಡಿ) ಸಂದರ್ಭದಲ್ಲಿ ಮಹಾಬಲ ಭಟ್ಟರಿಂದಲೇ ತಿಳಿವರ್ಣ ಸೀರೆ ಗಳಿಂದ ನಿರ್ಮಿತ ವಾಗಿ, ಸುತ್ತಲೂ ಹೂ ಗುಚ್ಚಗಳನ್ನು ಹಚ್ಚಿಅಲಂಕಾರಗೊಂಡು,ಕಲಾಪ್ರೌಡಿಮೆಯನ್ನು ಮೆರೆದ ಮದುವೆ ಮಂಟಪವು ಈಗಲೂ ಕಣ್ಣಿಗೆ ಕಟ್ಟುವಂತಿದೆ. ಇವರ ಕಲೆ – ಕಲೆಗಾರಿಕೆ ಯಾವತ್ತಿಗೂ ಜೀವಂತ…..

ಈಗಲೂ ಕಣ್ಣಿಗೆ ಕಟ್ಟುವಂತಿದೆ. ಇವರ ಕಲೆ – ಕಲೆಗಾರಿಕೆ ಯಾವತ್ತಿಗೂ ಜೀವಂತ……ಸುಮಾರು 30 ವರ್ಷಗಳ ಹಿಂದೆಯೇ ಅಲ್ಲಿನ ಜಾಗವು ವಿಭಜನೆಗೊಂಡಾಗ ಶ್ರೀ ಮಹಾಬಲ ರು ಅಲ್ಲೇ ಕೆಳಗೆ ಮನೆಯಲ್ಲಿ ವಾಸವಾಗಿ, ಅದೀಗ ಹಳೆಯದಾಗಿ, ಪಕ್ಕಕ್ಕೇ ಕಳೆದ ನವೆಂಬರ್ ನಲ್ಲಿ ಸುಸಜ್ಜಿತವಾದ ಟೇರೀಸ್ ಮನೆಯು ನಿರ್ಮಾಣವಾಗಿ ಗೃಹ ಪ್ರವೇಶ ಗೊಂಡು , ಈಗ ಎರಡು ಮನೆಯಲ್ಲೂ ಇವರಿಂದ ಕೆತ್ತಲ್ಪಟ್ಟ ಕಲಾಕೃತಿಗಳು ತುಂಬಿಕೊಂಡಿವೆ. ಇವರ ಕೆತ್ತನೆಯ ಕಲಾಕೃತಿಗಳು ಸುಳ್ಯ ತಾಲೂಕಿನ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ, ಪುತ್ತೂರು ಟೌನ್‌‌ ಬ್ಯಾಂಕಿನ ಸಭಾಂಗಣಕಾಸರಗೋಡು ಸೇರಿದಂತೆ ತಾಲೂಕು ಮಟ್ಟದಲ್ಲೂ, ರಾಜ್ಯ ಮಟ್ಟದ ಸಾಂಸ್ಕೃತಿಕ ಮಹೋತ್ಸವದಲ್ಲೂ ಪ್ರದರ್ಶನ ಗೊಂಡಿದೆ. ಶ್ರೀ ಗಳಾದ ಎನ್.ಎಸ್. ಪತ್ತಾರ್ ಚಿತ್ರಕಲಾ ವಿಭಾಗದ ಮುಖ್ಯಸ್ತರು ಮಹಾಲಸಾ ಚಿತ್ರ ಕಲಾ ಶಾಲೆ,ಮಂಗಳೂರು, ಕೆ.ಎಸ್.ರಾಜಾರಾಮ್ ಛಾಯಾಚಿತ್ರಕಾರ ಬೆಂಗಳೂರು.

ಡಾ| ಗಿರಿಧರ್ ಕಜೆ, ಕೆ.ಎಸ್.ಮದ್ಯಸ್ಥ ಕುಂಜಾರು,ಮೊದಲಾದ ಗಣ್ಯಾತಿ ಗಣ್ಯರು ಇವರ ಕಲೆ – ಕಲಾಕೃತಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1998 ನೇ ಇಸವಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಬದಿಯಡ್ಕದ ಕೃಷಿ ಉತ್ಪನ್ನ ವಸ್ತು ಪ್ರದರ್ಶನ ದಲ್ಲಿ ” ಕಾಷ್ಢ ಕಲೆ”, 2002 ನೇ ಇಸವಿಯಲ್ಲಿ ಕೃಷಿ ವಿನಿಮಯ ಕೇಂದ್ರ ಪೆರಡಾಲ ದಿಂದ” ಕಾಷ್ಠ ಶಿಲ್ಪ ” ಮತ್ತು 2003 ನೇ ಇಸವಿಯಲ್ಲಿ ” ಜನ ಮೆಚ್ಚುಗೆ “ಪ್ರಶಸ್ತಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದ್ದಾರೆ. ಅಲ್ಲದೆ ಇನ್ನೂ ಅನೇಕ ಸಂಘ- ಸಂಸ್ಥೆ ಗಳಿಂದ ಗೌರವ, ಪ್ರಶಸ್ತಿ ಗಳು ಇವರಿಗೆ ಲಭಿಸಿವೆ. ಎಲ್ಲವೂ ತಾನಾಗಿ ಬಂದವು ಗಳನ್ನು ಸ್ವೀಕರಿಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿ, ಸರ್ವೇ ಜನ: ಸುಖಿನೋ ಬವಂತು ಎಂಬುದು ಇವರ ಕಳಕಳಿ.

ಶ್ರೀ ಡಾ| ಮಹಾಬಲ ಭಟ್ಟರು ಸಾಹಿತಿಯಾಗಿ ಡಾ| ಬಾ ಮ ಭಟ್ ಎಂಬ ಕಾವ್ಯನಾಮದಿಂದ ಆನಂದ – ಸುಧಾ,ಕಲ್ಯಾಣಿ ನಗರ್, ಪ್ರತಿಭಾ ಶಕ್ತಿ, ಯೋಗ ಸಂಸಾರ, ಪ್ರತಿಭಾ ಕಿರಣ ರವಿ ( ರವೀಂದ್ರರ ಜೀವನ ಚರಿತ್ರೆ) ಬರೆದ ಕಾದಂಬರಿ ಗಳ ಜೊತೆಗೆ ಪರಿವರ್ತನೆ ಕಾದಂಬರಿಯು ಪತ್ರಿಕೆಯೊಂದರಲ್ಲಿ ಧಾರಾವಾಹಿ ಯಾಗಿ ಪ್ರಕಟಗೊಂಡಿತ್ತು. ವ್ಯೆಜಯಂತಿ ಹಾರ-ಕವನ ಸಂಕಲನ,

ಸ್ವಯಂ ಪ್ರತಿಭೆ-ಕಥಾ ಸಂಕಲನ, ಹಾಗೂ ಸುಪ್ತ ಪ್ರತಿಭೆ ನಾಟಕ ರೂಪದಲ್ಲಿ ರಚಿಸಲ್ಪಟ್ಟು, ಸುಳ್ಯ, ಪುತ್ತೂರು, ಕಾಸರಗೋಡು ಮುಂತಾದ ತಾಲೂಕು ಗಳ ಹೆಚ್ಚಿನ ಶಾಲೆಗಳಲ್ಲಿ ರಂಗ ಪ್ರದರ್ಶನಗೊಂಡು ಪ್ರಸಿದ್ಧಿ ಗೊಂಡಿದೆ. ಡಾ| ಬಾ ಮ ಭಟ್ ರ ಪತ್ನಿ ದ.ಕನ್ನಡ ಜಲ್ಲೆ- ಸುಳ್ಯ ತಾಲೂಕು-ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ಯವರಾಗಿದ್ದು ,ಇವರಿಗೆ 4 ಜನ ಹೆಣ್ಣು ಮಕ್ಕಳಾದ ರೇಖಾ,ಸೀಮಾ,ಶಿಲ್ಪಾ ,ಮೃದುಲಾ. ಇತ್ತೀಚೆಗಿನ ವರ್ಷಗಳಲ್ಲಿ ಇವರೆಲ್ಲರೂ ಶ್ರೀಮತಿ ಗಳಾಗಿದ್ದಾರೆ. ಶ್ರೀಮತಿ ಶಿಲ್ಪಾ ಉತ್ತಮ ಯೋಗಾಸನ, ಫೈಟಿಂಗ್, ಚುಕ್ಕಿ ಚಿತ್ರ ಕಾಲಾವಿದೆ ಯಾಗಿ ಅಲ್ಲದೆ ಹಾಡುಗಾರ್ತಿಯಾಗಿದ್ದು ಸಂಕಲನ ತರುವಷ್ಟೂ ಪದ್ಯಗಳನ್ನು ರಚಿಸಿರುತ್ತಾರೆ.

ಇದೀಗ 86 ನೇ ವಯಸ್ಸಿನ ಡಾ| ಬಾ ಮ ಭಟ್ ಶ್ರವಣ ಶಕ್ತಿ ಕುಂದಿದರೂ,ನೆಮ್ಮದಿಯ ಜೀವನ ನಡೆಸುತ್ತಿದ್ದು ಲವ ಲವಿಕೆ ಯಿಂದ ತಮ್ಮನ್ನು ತಾವೇ ನಿಭಾಯಿಸಿಕೊಂಡು” ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ” ಎಂಬ ಮಾತು ಇವರಿಗೇ ಸಲ್ಲುವಂತಿದ್ದು , ಕಾಷ್ಠ ಶಿಲ್ಪ ಕಲಾವಿದ ಮಹಾನು ಭಾವರಾದ ಡಾ| ಬಾ ಮ ಭಟ್ ನಮ್ಮವರೇ ಆಗಿರುವಬಾಳೆ ಕುಮೇರಿ ಅಣ್ಣಯ್ಯ ರಿಗೆ……ನಮೋ ನಮ : 🙏🙏.

ಕಿವಿ ಮಾತಾಗಿ ಬರೆಯಲು ಇಚ್ಚಿಸುತ್ತೇನೆ. ಈಗ ಇರುವ ಹಳೆಯ ಮನೆಯನ್ನು ಇವರ ಕಲಾಕೃತಿ ಗಳಿಂದ ಕೂಡಿದ “ಆರ್ಟ್ ಗ್ಯಾಲರಿಯಾಗಿ ಪರಿವರ್ತಿಸಿದಲ್ಲಿ ಇದಕ್ಕೆ ಸಮನಾದ ಗೌರವ – ಪ್ರಶಸ್ತಿ ಬೇರೊಂದಿಲ್ಲ.

ಫೋಟೋ & ಬರಹ : ಬಾಲು ದೇರಾಜೆ, ಸುಳ್ಯ.


Share news

Related Articles

Leave a Reply

Your email address will not be published. Required fields are marked *

Back to top button