ಭಾರತ ವೈಭವಲೇಖನ ಸಂಗಮ

ಸ್ವಾಮಿ ವಿವೇಕಾನಂದರೆಂದರೆ ನರನಾಡಿಗಳಲ್ಲಿ ಹರಿಯುವ ಶಕ್ತಿ

Share news

ಸ್ವಾಮಿ ವಿವೇಕಾನಂದರೆಂದರೆ ನರನಾಡಿಗಳಲ್ಲಿ ಹರಿಯುವ ಶಕ್ತಿ. ಮನಸ್ಸನ್ನು ಶ್ರೇಷ್ಠ ಗುರಿಯೆಡೆಗೆ ಕರೆದುಕೊಂಡು ಹೋಗುವ ಪ್ರೇರಣಾ ಮೂರ್ತಿ. ವಿವೇಕಾನಂದರ ಮಾತುಗಳಿಂದ ಸ್ಪೂರ್ತಿ ಪಡೆಯದ ವ್ಯಕ್ತಿಗಳೇ ಇಲ್ಲ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದು ಕೂಡ ನಮ್ಮ ಬೆನ್ನ ಹಿಂದೆ ಇದ್ದು ಮಾರ್ಗದರ್ಶನ ಮಾಡುತ್ತಿರುವ ಗುರುದೇವ ಸ್ವಾಮಿ ವಿವೇಕಾನಂದರು. ನಡೆ ನುಡಿಗಳಲ್ಲಿ ದೇಶ ಭಕ್ತಿಯನ್ನು ಅಛಲವಾಗಿ ತುಂಬುತ್ತಿರುವ ಮಹಾನ್ ಚೇತನ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಪ್ರತಿ ಬಾರಿ ವಿವೇಕಾನಂದರ ಭಾವಚಿತ್ರ ನೋಡಿ ದಿನ ಪ್ರಾರಂಭಿಸಿದರೆ ಆ ದಿನವಿಡೀ ಆಗದ ಶಕ್ತಿ ತುಂಬುವ ಸಾಮರ್ಥ್ಯ ಇಂದು ಇದೆ ಎಂಬುದರಲ್ಲಿ ಸಂದೇಹವಿಲ್ಲ.

ವಿವೇಕಾನಂದರು ಬದುಕಿದ ಸಣ್ಣ ಸಮಯದಲ್ಲಿ ಮಾಡಿದ ಕಾರ್ಯಗಳು ಹೇಳಿದ ಮಾತುಗಳು ಸಾವಿರ ವರ್ಷಗಳ ನಂತರವೂ ಶಾಶ್ವತ ಮುಂದೆ ಬರುವ ಜನಾಂಗಕ್ಕೂ ಪ್ರೇರಣಾ ಶಕ್ತಿ. ಹಿಂದೂ ಧರ್ಮ ಪುನರುಜ್ಜೀವನಗೊಳಿಸಿದ ಸಂತ ಸ್ವಾಮಿ ವಿವೇಕಾನಂದರು ತಾವು ಅನುಭವಿಸಿದ ಕಷ್ಟಗಳು ಏನು ಕಡಿಮೆಯಿಲ್ಲ ಆದರೂ ಅದನೆಲ್ಲಾ ಮೆಟ್ಟಿ ನಿಂತು ನೀಡಿದ ಆಧ್ಯಾತ್ಮಿಕ ಬೆಳಗು ಭಾರತೀಯರಿಗೆ ಅದು ಕತ್ತಲಿನ ಕೋಣೆಗೆ ಬೆಳಕು ನೀಡಿದ ಅನುಭವ ಹೀಗೆ ಅಮೇರಿಕಾದ ಮುಂದೆ ತೆರೆದಿಟ್ಟ ಹಿಂದೂ ಧರ್ಮ ಭಾರತೀಯ ಸಂಸ್ಕೃತಿಯ ಜ್ಞಾನ ಇಡೀ ಜಗತ್ತಿಗೆ ಪ್ರಕಾಶಮಾನವಾದ ಜ್ಯೋತಿಯಾಗಿತ್ತು.

ಜಗತ್ತಿಗೆ ಹಿಂದೂ ಧರ್ಮದ ಶ್ರೇಷ್ಠತೆ ತಿಳಿದಿತ್ತು ಸ್ವಾಮಿ ವಿವೇಕಾನಂದರ ಜೀವನವೇ ಒಂದು ಗರಡಿಮನೆ ಅಲ್ಲಿ ನಾವು ಕಲಿಬೇಕಾಗಿರುವ ಎಲ್ಲಾ ಶಾಸ್ತ್ರ ವಿದ್ಯೆಗಳು ಲಭ್ಯ. ಸ್ವಾಮಿ ವಿವೇಕಾನಂದರು ಸಾವಿರಾರು ಯುವಕರ ಹೃದಯದಲ್ಲಿ ನೆಲೆಸಿರುವ ಅಪೂರ್ವ ವ್ಯಕ್ತಿತ್ವ ಇಂದು ಮಾತ್ರವಲ್ಲ ಎಂದೆಂದಿಗೂ ವಿವೇಕಾನಂದರು ನಮ್ಮೊಂದಿಗೆ ಇದ್ದಾರೆ ಎಂದೇ ಸದಾ ಅನಿಸುತ್ತದೆ ಅವರ ಪ್ರಭಾವಕ್ಕೆ ಒಮ್ಮೆ ಒಳಗಾದರೆ ಮತ್ತೆ ಆ ವ್ಯಕ್ತಿ ಪೂರ್ತಿ ಬದಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಅಂತಹ ಅಸಾಧಾರಣ ಶಕ್ತಿಯ ಕಣ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಗಳು ಪ್ರತಿ ಮಾತುಗಳು ಶಾಶ್ವತ ಮನದಲಿ ಹೃದಯದಲಿ.

ಸ್ವಾಮಿ ವಿವೇಕಾನಂದರ ಪ್ರತಿಯೊಂದು ಮಾತುಗಳು ನಮ್ಮಲ್ಲಿ ಆಗಾಧ ಶಕ್ತಿ ಹಾಗೂ ಸ್ಪೂರ್ತಿಯನ್ನು ತುಂಬುವಂತದ್ದು ಆದರೆ ಕೆಲವು ಮಾತುನ್ನು ಕೇಳಿದಾಗ ಪ್ರತಿಬಾರಿ ಮೈಯೆಲ್ಲಾ ರೋಮಾಂಚನ ಆಗುತ್ತದೆ. “ಯಾರ ನರಡಿನಾಡಿಗಳಲ್ಲಿ ಅಧ್ಬುತ ರಾಜಸ ಸ್ವಭಾವ ತುಂಬಿ ತುಳುಕಾಡುತ್ತಿದೆಯೊ, ಯಾರು ಸತ್ಯ ಸಾಕ್ಷಾತ್ಕಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧರಾಗಿರುವರೊ, ಯಾರಿಗೆ ತ್ಯಾಗವೇ ಆಯುಧವಾಗಿದೆಯೊ , ಧರ್ಮವೆ ಖಡ್ಗವಾಗಿದೆಯೊ ಅಂತಹವರು ದೇಶಕ್ಕೆ ಬೇಕಾಗಿದೆ. ನಮಗಿಂದು ಬೇಕಾಗಿರುವುದು ಜೀವನ ಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ. ಜೀವನವನ್ನು ಭೋಗೋದ್ಯಾನದಂತೆ ನೋಡುವ ವಿಲಾಸಿ ಭಾವವಲ್ಲ”

ಒಮ್ಮೆ ಅವರು ಸಂಪರ್ಕಕ್ಕೆ ಬಂದರೆ ಸಾಕು ಅಗಾಧ ಬದಲಾವಣೆ ಕಾಣಬಹುದು. ಮುಂದೆ ಸ್ವಾಮಿ ವಿವೇಕಾನಂದರು ಇನ್ನೊಂದು ಕಡೆ ಹೇಳುತ್ತಾರೆ ” ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ. ಒಮ್ಮೆ ನೀವೆಲ್ಲ ವೇದಗಳ ಋಷಿಗಳಾಗಿದ್ದಿರಿ. ಈಗ ಬೇರೆ ರೂಪಗಳಲ್ಲಿ ಬಂದಿರುವಿರಿ ಅಷ್ಟೆ. ನನಗದು ಸೂರ್ಯನ ಬೆಳಕಿನಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ನಿಮ್ಮಲ್ಲಿ ಅನಂತ ಶಕ್ತಿ ಇದೆ. ಅದನ್ನು ಜಾಗೃತಗೊಳಿಸಿ. ಏಳಿ, ಹೃನ್ಮನಳನ್ನು ಅರ್ಪಿಸಿ ಈ ಮಹತ್ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸೊಂಟಕಟ್ಟಿ ಸಿದ್ಧರಾಗಿ. ಕ್ಷಣಿಕವಾದ ಸಿರಿ ಕೀರ್ತಿಯಿಂದೇನು ಮಾಡುವಿರಿ ? ನನಗನ್ನಿಸುವುದೇನು ಗೊತ್ತೆ ? ಮುಕ್ತಿ ಮುಂತಾದ ಯಾವುದಕ್ಕೂ ನಾನು ಗಮನ ಕೊಡುವುದಿಲ್ಲ. ನಿಮ್ಮಲ್ಲೆಲ್ಲಾ ಮಹದಾಲೋಚನೆಗಳನ್ನು ಬಿತ್ತಿ ಇಂತಹ ಭಾವನೆಯನ್ನು ಜಾಗೃತಗೊಳಿಸುವುದೇ ನನ್ನ ಧ್ಯೇಯ. ಕೇವಲ ಒಂದೇ ಒಂದು ವ್ಯಕ್ತಿಯನ್ನು ತರಬೇತಿ ಮಾಡಲು ನಾನು ಸಾವಿರಾರು ಜನ್ಮಗಳನ್ನು ಎತ್ತಿ ಬರಲು ಸಿದ್ಧನಿದ್ದೇನೆ.” ಇದನ್ನು ಕೇಳಿದಾಗ ಸ್ವಾಮಿ ವಿವೇಕಾನಂದರು ಇಂದು ಕೂಡ ನಮ್ಮೆದುರು ನಿಂತು ಮಾರ್ಗ ತೋರಿದಂತೆ ಕಾಣುತ್ತಿದೆ.

ಒಮ್ಮೆ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಭಾವಕ್ಕೆ ಒಳಗಾದರೆ ಮತ್ತೆ ಹೊರಬರಲು ಸಾಧ್ಯವಿಲ್ಲ ಹಾಗೂ ಹೊರಬರಲು ಬಯಸುವುದಿಲ್ಲ ಏಕೆಂದರೆ ಯಾವುದೇ ಜೀವನದ ಕಷ್ಟದ ಸುಖದ ಸಂದರ್ಭದಲ್ಲಿ ಮಾರ್ಗ ತೋರಿ ಸರಿಯಾಗಿ ನಮ್ಮನ್ನು ತೀರಕ್ಕೆ ತಲುಪಿಸುವ ಶಕ್ತಿ ಸ್ವಾಮಿ ವಿವೇಕಾನಂದರ ವಿಚಾರಗಳಿಗಿದೆ ಎಂಬುದನ್ನು ಮರೆಯುವಂತಿಲ್ಲ. ನಮ್ಮ ಅಂತ:ಶಕ್ತಿ ವೃದ್ಧಿಸುವ ಅಪರೂಪದ ಈಗೀನ ಭಾಷೆಯಲ್ಲಿ ಟಾನಿಕ್ ಹೇಳಬಹುದು. ವಿವೇಕಾನಂದರ ಮಾತುಗಳು ಇನ್ನೂ ನೂರು ವರ್ಷಗಳಾದರೂ ಎಲ್ಲಾ ಪೀಳಿಗೆಗೆ ಸ್ಪೂರ್ತಿಯ ಕಿಡಿಯಾಗಿ ಭಾರತದ ಸಂಸ್ಕೃತಿ ಉಳಿಸುವಲ್ಲಿ ಕೆಲಸ ಮಾಡುವಂತ ಶಕ್ತಿಯಿದೆ ಅವುಗಳಿಗೆ ಸಾವಿಲ್ಲ ಅಂತ್ಯವು ಇಲ್ಲ ಹಾಗಾಗೇ ಭಾರತ ಹಾಗೂ ಹಿಂದೂ ಸಂಸ್ಕೃತಿಗೆ ಎಂದು ಸಾವಿಲ್ಲ ಎಂಬುದು ನೆನಪಿರಲಿ.


Share news

Related Articles

Leave a Reply

Your email address will not be published. Required fields are marked *

Back to top button