ತಂತ್ರಜ್ಞಾನರಾಷ್ಟ್ರೀಯ
Trending

45 ನಿಮಿಷ ಚಾರ್ಜ್‌ ಮಾಡಿದರೆ 250 ಕಿ.ಮೀ ಓಡುವ ಭಾರತದ ಮೊದಲ ಸೋಲಾರ್‌ ಕಾರು

Share news

ಪುಣೆಯ ಸ್ಟಾರ್ಟಪ್ ಕಂಪನಿ ವೇವ್ ಮೊಬಿಲ್ಟಿ ಎಂಬ ಹೊಸದಾದ ಭಾರತದ ಮೊದಲ ಸೋಲರ್ ಕಾರನ್ನು ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋ 2023ರಲ್ಲಿ ಪರಿಚಯಿಸಲಾಯಿತು. ಈ ಕಾರಿನ ವಿಶೇಷತೆ ಏನೆಂದರೆ ಇದನ್ನು 45 ನಿಮಿಷ ಫುಲ್ ಚಾರ್ಜ್ ಮಾಡಿ 250 ಕಿ.ಮೀ ಓಡಿಸಬಹುದು.ಇದು ಬ್ಯಾಟರಿ ಚಾಲಿತ ಸಿಂಗಲ್ ಡೋರ್ ನ್ನು ಹೊಂದಿದೆ ಹಾಗೂ ಗಾತ್ರದಲ್ಲಿ ಟಾಟಾ ನ್ಯಾನೋವಿನಂತೆ ಕಾಣುತ್ತದೆ. ಈ ಕಾರಿನಲ್ಲಿ ಕೇವಲ ಇಬ್ಬರು ವಯಸ್ಕರು ಮತ್ತು 1 ಮಗು ಮಾತ್ರ ಕುಳಿತುಕೊಳ್ಳಬಹುದು.

14 kWh ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಒಮ್ಮೆ ಫುಲ್‌ ಚಾರ್ಜ್‌ ಮಾಡಿದ್ರೆ 250 ಕಿಮೀ ಚಲಿಸುವ ಸಾಮರ್ಥ್ಯ ಇದಕ್ಕಿದೆ. ಈ ಕಾರನ್ನು ಮನೆಯ ಸಾಕೆಟ್‌ನಿಂದ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಸಂಯೋಜಿತ ಚಾರ್ಜಿಂಗ್ ವ್ಯವಸ್ಥೆಯ ಮೂಲಕ, 45 ನಿಮಿಷಗಳಲ್ಲಿ 80 ಪ್ರತಿಶತ ಚಾರ್ಜ್ ಮಾಡಬಹುದು. ಕಾರಿನ ಮುಂಭಾಗದಲ್ಲಿ ಒಂದೇ ಸೀಟನ್ನು ಮತ್ತು ಹಿಂಭಾಗದಲ್ಲಿ ಸ್ವಲ್ಪ ದೊಡ್ಡ ಸೀಟನ್ನು ಅಳವಡಿಸಲಾಗಿದೆ.

Android Auto ಮತ್ತು Apple CarPlay ಈ ಕಾರಿನಲ್ಲಿದೆ. ಕಂಪನಿ ಮುಂದಿನ ವರ್ಷ ಪುಣೆ ಮತ್ತು ಬೆಂಗಳೂರಿನಲ್ಲಿ ಇವುಗಳನ್ನು ಪರಿಚಯಿಸಲಿದೆ. ಕಾರಿನ ಬೆಲೆಯನ್ನು ಸಹ ಮುಂಬರುವ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.


Share news

Related Articles

Leave a Reply

Your email address will not be published. Required fields are marked *

Back to top button