ಭಾರತ ವೈಭವಲೇಖನ ಸಂಗಮ

ಸ್ವಾತಂತ್ರ್ಯದ ಅಮೃತಘಳಿಗೆ

Share news

ಬ್ರಿಟಿಷರ ಕಪಿಮುಷ್ಠಿಯಿಂದ ದುರಾಡಳಿತ ದೌರ್ಜನ್ಯಗಳಿಂದ ನಮ್ಮ ದೇಶವನ್ನು ಸ್ವತಂತ್ರಗೊಳಿಸುವುದಕ್ಕಾಗಿ ನಮ್ಮ ಹಿರಿಯರು ನಡೆಸಿದ ಅವಿರತ ಹೋರಾಟ ತ್ಯಾಗ ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು. 75 ವರ್ಷಗಳಾಗಿವೆ ದೇಶವು ಸಂಭ್ರಮದಿಂದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ, ಆದರೆ ಬ್ರಿಟಿಷರಿಂದ ಸ್ವತಂತ್ರಗೊಳಿಸಲು ನಮ್ಮ ಹಿರಿಯರುಗಳು ನಾಯಕರು ಅಷ್ಟೇ ಅಲ್ಲ ಜನಸಾಮಾನ್ಯರು ಪಟ್ಟ ಕಷ್ಟಗಳು ಅನುಭವಿಸಿದ ಯಾತನೆಗಳು ಹರಿಸಿದ ರಕ್ತ ಒಂದಲ್ಲ ಎರಡಲ್ಲ ಲೆಕ್ಕಕ್ಕೂ ಸಿಗದಷ್ಟು ಬರೆಯಲು ಹೇಳಲು ಸಾಧ್ಯವಾಗದಷ್ಟು. ಅದನ್ನು ನಮ್ಮ ಇಂದಿನ ಯುವ ಪೀಳಿಗೆಯವರು ಅರಿತುಕೊಳ್ಳಬೇಕಾದದ್ದು ಅನಿವಾರ್ಯವೂ ಹೌದು ಅಗತ್ಯವು ಹೌದು.

ಬ್ರಿಟಿಷರ ವಿರುದ್ಧ ರಾಜರು, ಸಂಸ್ಥಾನದ ರಾಣಿಯರು, ಕ್ರಾಂತಿಕಾರರು, ವಿದ್ಯಾವಂತರು ಹೋರಾಡಿದುದು ಒಂದೆಡೆಯಾದರೆ ಅವರಿಗೆ ನೈತಿಕ ಬಲ ಮಾತ್ರವಲ್ಲ, ಸ್ವತಹ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬ್ರಿಟಿಷರ ಗುಂಡಿನ ಹೊಡೆತಕ್ಕೆ ಬೂಟಿನ ತುಳಿತಕ್ಕೆ ಅತ್ಯಾಚಾರಕ್ಕೆ ಅವಮಾನಕ್ಕೆ ಜೀವ ಕೊಟ್ಟಿದ್ದು, ಈ ನಮ್ಮ ಜನಸಾಮಾನ್ಯರು ಹಾಗೂ ಕೂಲಿ ಕಾರ್ಮಿಕರುಗಳು ಎಂದರೆ ಅತಿಶಯೋಕ್ತಿಯಾಗಲಾರದು. ಇದಕ್ಕೆ ಜೀವಂತ ಸಾಕ್ಷಿಯಾಗಿ ದೇಶದ ಮೂಲೆ ಮೂಲೆಗಳಲ್ಲೂ ರೈತಪಿ ಮುಗ್ಧ ಜನರ ಜನಸಾಮಾನ್ಯರ ಹೋರಾಟ ಇತಿಹಾಸದ ಗರ್ಭದಲ್ಲಿ ಸೇರಿ ಹೋಗಿದೆ. ಆದರೂ ಅವರೇನು ಸ್ವಾರ್ಥ ಬಯಸಿದವರಲ್ಲ ಅಧಿಕಾರ ಪಡೆಯುವ ಹಂಬಲವು ಇರಲಿಲ್ಲ ಇದ್ದದ್ದು ಕೇವಲ ದೇಶಾಭಿಮಾನ ಮಾತ್ರ.

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಒಂದು ಪುಟ್ಟ ಕುಗ್ರಾಮ ಇಸೂರಿನ ಮುಗ್ಧ ರೈತಾಪಿ ಜನರ ಹೋರಾಟವು ಸುವರ್ಣ ಅಕ್ಷರದಲ್ಲಿ ಬರೆದಿಡುವಂತದ್ದಾಗಿದೆ. 1942ರ ಕಾಲ ದೇಶದಲ್ಲೆಲ್ಲೆಡೆ ಬ್ರಿಟಿಷರ ವಿರುದ್ಧ ಅವರ ಕಾನೂನುಗಳ ವಿರುದ್ಧ ನಾಯಕರು ಕ್ರಾಂತಿಕಾರಿಗಳು ಅಹಿಂಸವಾದಿಗಳು ಜನಜಾಗ್ರತೆ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದ್ದರು.

ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆಯನ್ನು ಮುಗಿಲು ಮುಟ್ಟಿತ್ತಿದ್ದ ಸ್ಥಿತಿ ನಿರ್ಮಾಣವಾಗಿತ್ತು. ನಗರಗಳು ಎನ್ನದೆ ಹಳ್ಳಿಹಳ್ಳಿಗೂ ಸ್ವಾತಂತ್ರ್ಯದ ಕಿಚ್ಚು ಹಬ್ಬುತ್ತಿತ್ತು. ಇದೇ ವೇಳೆಗೆ ಸಾವಿರದ ಒಂಬೈನೂರ ನಲವತ್ತೆರಡು ಅಗಸ್ಟ್ 8ರಂದು ಮುಂಬೈಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರು ಮುಂದಿಟ್ಟ ಕ್ವಿಟ್ ಇಂಡಿಯಾ ಚಳುವಳಿಯ ಗೊತ್ತುವಳಿಯನ್ನು ಅಧಿವೇಶನವು ಅಂಗೀಕಾರ ಮಾಡಿತು. ಈ ಗೊತ್ತುವಳಿಯಂತೆ ಮಾಡು ಇಲ್ಲವೇ ಮಡಿ ಮತ್ತು ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಜನತೆ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿತು.

ಮಹಾತ್ಮಜೀ ಅವರು ಜನತೆಯಲ್ಲಿ ಭಿನ್ನವಿಸಿಕೊಂಡರು ಈ ಮಾಹಿತಿಯು ಎಲ್ಲೆಡೆಗೂ ಹರಡಿತು. ಯಾರೋ ಪರಕೀಯರು ಪರಂಗಿಯವರು ನಮ್ಮನ್ನು ಆಳುವುದು ಎಂದರೇನು? ಅವರಿಗೆ ನಾವು ಕಂದಾಯವನ್ನು ಕಟ್ಟಬೇಕು ನಮ್ಮ ಗ್ರಾಮ ನಮ್ಮದು ನಮ್ಮ ಆಡಳಿತವನ್ನು ನಾವೇ ನಡೆಸೋಣ ಯಾವುದೇ ಬ್ರಿಟಿಷ್ ಅಧಿಕಾರಿಗಳು ನಮ್ಮ ಅಪ್ಪಣೆ ಪಡೆಯದೆ ಊರಿನೊಳಗೆ ಪ್ರವೇಶ ಮಾಡಬಾರದು ಎಂದು ಗ್ರಾಮಗಳು ಸ್ವತಂತ್ರದ ಆತುರತೆಯಿಂದ ಮುನ್ನುಗ್ಗಿದವು. ಸಾವಿರದ ಒಂಬೈನೂರ ನಲವತ್ತೆರಡು ಸೆಪ್ಟೆಂಬರ್ 27ರಂದು ತ್ರಿವರ್ಣ ಧ್ವಜವನ್ನು ಹಾರಿಸಿ ಹಳ್ಳಿ ಹಳ್ಳಿಗರು ಧೈರ್ಯವನ್ನು ಮೆರೆದರು ಅನೇಕ ಬ್ರಿಟಿಷ್ ಅಧಿಕಾರಿಗಳನ್ನು ನಿರ್ನಾಮ ಮಾಡಿದರು.

ಹೀಗೆ ಇಂತಹ ಹೋರಾಟದಲ್ಲಿ ಚಂದ್ರಶೇಖರ್ ಆಜಾದ್, ವೀರ ಭಗತ್ ಸಿಂಗ್ ರಂತಹ ಅನೇಕ ವೀರರ ಹೋರಾಟದ ಫಲವಾಗಿ ಸಾವಿರದ ಒಂಬೈನೂರ ನಲವತ್ತೇಳು ಆಗಸ್ಟ್ 14ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ನಾವಿಂದು ಸ್ವಾತಂತ್ರ್ಯವನ್ನು ಪಡೆದಿದ್ದೇವೆ ಅಂತಹ ಸ್ವಾತಂತ್ರ್ಯವನ್ನು ಸ್ವೇಚ್ಛೆ ಎಂದು ಭಾವಿಸದೆ ಅದರ ಸದುಪಯೋಗವನ್ನು ಮಾಡಿಕೊಂಡು ಭಾರತ ದೇಶವನ್ನು ಅಭಿವೃದ್ಧಿಯತ್ತ ಕೊಂಡ ಹೋಗೋಣ. ನಾವೆಲ್ಲ ನಾವಿಕರಂತೆ ದೇಶದ ನೌಕೆಯನ್ನು ಮುನ್ನಡೆಸೋಣ..ಸ್ವಾತಂತ್ರ್ಯದ ಅಮೃತಘಳಿಗೆಯಲ್ಲಿ ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಭಾರತ ಮಾತಾ ಕಿ ಜೈ


Share news

Related Articles

Leave a Reply

Your email address will not be published. Required fields are marked *

Back to top button