ಪ್ರೇರಣೆಲೇಖನ ಸಂಗಮ

ಕಲ್ಲರಳಿ ಹೂವಾದ ಕಥೆ: ಚಿನ್ನದ ಓಟಗಾರ್ತಿ ಹಿಮಾ ದಾಸ್

Share news

ಬಡತನದ ಬೇಗೆಯಿಂದ ಬೆಂದು ತನ್ನ ಓಟದ ಮೂಲಕವೇ ಇಂದು ಇಡೀ ದೇಶವೇ ಗುರುತಿಸಿರುವ ಖ್ಯಾತ ಅಥ್ಲೀಟ್ ಹಿಮಾ ದಾಸ್ ಈಗ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಹಿಮಾ ದಾಸ್ ಬಾಲ್ಯದ ಕನಸು ನನಸಾಗಿದ್ದು, ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಈಕೆಗೆ ನೇಮಕಾತಿ ಪತ್ರ ನೀಡಿ ಸನ್ಮಾನಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಗೌರವವಿರುತ್ತದೆ. ಎಂತಹ ವ್ಯಕ್ತಿಯೂ ತನ್ನ ಆತ್ಮಗೌರವಕ್ಕೆ ಘಾಸಿಯಾದಾಗ ಆತನು ಅವಮಾನಕ್ಕೊಳಗಾಗುತ್ತಾನೆ ಅಥವಾ ಕೆರಳುತ್ತಾನೆ. ಇದು ಕೇವಲ ಇಷ್ಟಕ್ಕೇ ಸೀಮಿತವಾಗದೇ ಈ ಅವಮಾನ ಅಥವಾ ಕೆರಳುವಿಕೆಯು ಮನುಷ್ಯನಲ್ಲಿ ಸಾಧನೆಯ ಕಿಚ್ಚನ್ನು ಹೊತ್ತಿಸಬೇಕು. ಅವಮಾನ ಮತ್ತು ನೋವೆಂಬ ಸಾಗರದಲ್ಲಿ ಬಿದ್ದು ಸೋಲೆಂಬ ಸಾವೋ ಅಥವಾ ಸಾಧನೆಯೆಂಬ ಬದುಕೋ ಎನ್ನುವ ಪ್ರಶ್ನೆ ಬಂದಾಗ ಸಾಧನೆಯೆಂಬ ಧನಾತ್ಮಕ ಆಯ್ಕೆಯನ್ನು ಮಾಡಿಕೊಂಡು ಅದರೆಡೆಗೆ ಸಾಗಲು ಕಠಿಣ ಪರಿಶ್ರಮವನ್ನು ಮಾಡಬೇಕು. ಅಂತಹ ವಿಶೇಷ ಸಾಧಕರ ಸಾಲಿಗೆ ‘ಚಿನ್ನದ ಓಟಗಾರ್ತಿ ಹಿಮಾ ದಾಸ್’ ಸೇರುತ್ತಾರೆ.

ಟಾಟಾ ಸುಮೋ ಬೆನ್ನತ್ತಿ ಓಡಿದ್ದ ಹುಡುಗಿ:

ಒಮ್ಮೆ ಶಾಲೆಗೆ ಹೋಗುವಾಗ ಟಾಟಾ ಸುಮಾ ಚೇಸ್ ಮಾಡಿ ಹಿಮಾ ಓಡಿದ್ದಳು. ಹಿಮಾ ಅಸ್ಸಾಂನ ತೀರಾ ಗುಡ್ಡಗಾಡು ಪ್ರದೇಶದಿಂದ ಶಾಲೆಗೆ ಹೋಗಬೇಕಿದ್ದರೆ ಈಕೆ ನಿತ್ಯ ಹಲವಾರು ಮೈಲಿ ದೂರವನ್ನು ನಡೆದುಕೊಂಡೇ ಹೋಗುತ್ತಿದ್ದಳು. ಹಿಮಾ ಮೂರನೇಯ ತರಗತಿಯಲ್ಲಿ ಇರುವಾಗ ಒಂದು ದಿನ ಶಾಲೆಗೆ ಹೊರಡುವಾಗ ತಡವಾಗಿದ್ದರಿಂದ ಹಳ್ಳಿಯ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಟಾಟಾ ಸುಮೋಗೆ ಕೈ ಹಿಡಿದರು. ಆ ವಾಹನದಲ್ಲಿ ಇದ್ದ ಸೀಟೆಲ್ಲ ಭರ್ತಿಯಾಗಿದ್ದ ಕಾರಣ ಚಾಲಕನು ಹಿಮಾಳನ್ನು ವಾಹನದೊಳಗೆ ಹತ್ತಿಸದೇ ಚಾಲಕ ಈಕೆಯನ್ನು ಬೈಯುತ್ತಾ ಮುಂದೆ ಸಾಗಿದಾಗ ಈಕೆಯ ಆತ್ಮ ಗೌರವಕ್ಕೆ ಘಾಸಿಯಾಗಿತ್ತು. ಇದನ್ನು ಹಿಮಾಳ ತಾಯಿ ನೋಡುತ್ತಿದ್ದಂತೆಯೇ ಅವಮಾನ ಮತ್ತು ರೋಷದಿಂದ ಕುದಿಯಲಾರಂಭಿಸಿದ ಈ ಹುಡುಗಿ ಆ ವಾಹನ ಚಾಲಕನಿಗೆ ಸವಾಲೊಡ್ಡಿ ಹಿಮಾ ಆ ಟಾಟಾ ಸುಮಾ ಬೆನ್ನೆಟ್ಟಿ ಓಡಿದಳು. ಆಕೆ ಶಾಲೆಗೆ ತಲುಪುವಾಗ ಆಕೆ ಬಿದ್ದು ಕೈ-ಕಾಲುಗಳು ಗಾಯಗೊಂಡಿದ್ದವು. ಆದರೂ ಓಡಿ ಆ ಟಾಟಾ ಸುಮೋ ಶಾಲೆಗೆ ತಲುಪುವುದರ ಒಳಗೆ ತಾನೂ ಶಾಲೆಗೆ ತಲುಪಿ ಗುರಿ ಮುಟ್ಟಿದ್ದಳು. ಅಂದು ಛಲದಿಂದ ಓಡಿದ್ದ ಪುಟ್ಟ ಬಾಲಕಿ ಮುಂದೊAದು ದಿನ ದೇಶಕ್ಕಾಗಿ ಓಡುತ್ತಾಳೆ ಎಂದು ಯಾರೂ ಅಂದು ಕೊಂಡಿರಲಿಲ್ಲ. ಆ ಹುಡುಗಿಯೇ ಇಂದು ದೇಶ ಮತ್ತು ಪ್ರಪಂಚವೇ ಹೆಮ್ಮೆ ಪಡುವಂತಹ ಜುಲೈ-2019ನೇ ತಿಂಗಳೊAದರಲ್ಲೇ 5 ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ ಅಸ್ಸಾಂ ರಾಜ್ಯದ ಹಿಮಾ ದಾಸ್.

ಹಿಮಾ ದಾಸ್ ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯ ದಿಂಗ್ ಎಂಬ ಹಳ್ಳಿಯಲ್ಲಿ 09 ಜನವರಿ 2001ರಲ್ಲಿ ಜನಿಸಿದರು. ಈಕೆಯ ಕುಟುಂಬವು ಕೃಷಿ ಹಿನ್ನೆಲೆ ಹೊಂದಿದೆ. ಇವರ ತಂದೆ ರೊಂಜಿತ್ ದಾಸ್ ಮತ್ತು ತಾಯಿ ಜೊನಾಲಿ ದಾಸ್. ಹಿಮಾ ತನ್ನ ತಂದೆ ತಾಯಿಯ ನಾಲ್ಕು ಮಕ್ಕಳ ಪೈಕಿ ಅತ್ಯಂತ ಕಿರಿಯ ಪುತ್ರಿ. ಇವರದ್ದು ಕೂಡು ಕುಟುಂಬವಾಗಿದ್ದು, ಅಲ್ಲಿನ ಮಕ್ಕಳ ಪೈಕಿ ಹಿಮಾ ದಾಸ್ ಭಿನ್ನವಾಗಿ ಬೆಳೆದರು. ಹಿಮಾ 15 ವರ್ಷವಿದ್ದಾಗ ಹಳ್ಳಿಯ ಮಹಿಳೆಯರನ್ನು ಒಟ್ಟು ಸೇರಿಸಿ ಅಕ್ರಮವಾಗಿ ಮದ್ಯ ಮಾರುತ್ತಿದ್ದವನ ವಿರುದ್ಧ ಹೋರಾಟ ಮಾಡಿದ್ದರು. ಇದಾದ ಮಾರನೇಯ ದಿನ ಯುವಕನೊಬ್ಬ ಹಿಮಾ ಅವರ ಮನೆಯ ಮುಂದೆ ಬಂದು ‘ನಾನು ಮದ್ಯ ಮಾರಾಟ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಕೆಟ್ಟದಾಗಿ ಕೂಗಾಡಿದ್ದ. ಇದನ್ನು ಕೇಳಿದ ಹಿಮಾ ಆತನಿಗೆ ತನ್ನ ಕೈಯ ರುಚಿಯನ್ನು ತೋರಿಸಿದ್ದರು. ಏಟು ತಿಂದ ಹುಡುಗನ ಕುಟುಂಬದವರು ಹಿಮಾ ತಂದೆಯ ವಿರುದ್ಧ ಕೇಸು ದಾಖಲಿಸಿದ್ದರು. ಈ ಕೇಸ್ ಸಲುವಾಗಿ ಅವರ ತಂದೆ ಅನೇಕ ಬಾರಿ ಕೋರ್ಟ್ ಕೇಸ್‌ಗಾಗಿ ಅಲೆದಾಡಿದ್ದರು. ಚಿಕ್ಕವಳಿದ್ದಾಗಲೇ ವಿಮಾನದಲ್ಲಿ ಹಾರುವ ಕನಸನ್ನು ಹಿಮಾ ಕಂಡಿದ್ದರು. ಅದಕ್ಕೆ ಅವರ ತಂದೆಯು ‘ನೀನು ಚೆನ್ನಾಗಿ ಓದಿ, ಆಡಿದರೆ ಮಾತ್ರ ಅದು ಸಾಧ್ಯ ಎಂದು ಹೇಳಿದ್ದರು’.

ಫುಟ್ಬಾಲ್ ಆಡ ಬಯಸಿದ್ದ ಹಿಮಾ:

ಹಿಮಾಗೆ ಫುಟ್ಬಾಲ್ ಆಡಬೇಕೆಂಬ ಆಸೆ ಬಹಳ ಇತ್ತು. ಹಿಮಾ ಫುಟ್ಬಾಲ್ ಆಟವಾಡುವ ತಂಡದಲ್ಲಿ ಇಲ್ಲದಿದ್ದರೂ ಗೋಲ್ ಪೋಸ್ಟ್ ಹಿಂದೆ ನಿಂತು ತನ್ನ ಸಮೀಪ ಬರುವ ಬಾಲ್‌ಗೆ ಬಲವಾಗಿ ಒದ್ದು, ಉಳಿದ ಆಟಗಾರರು ತನ್ನನ್ನು ನೋಡುವ ಮೊದಲೇ ಓಡಿ ಹೋಗುತ್ತಿದ್ದಳು. ಒಂದು ದಿನ ಮಹಿಳೆಯ ಸ್ಥಳೀಯ ಫುಟ್ಬಾಲ್ ಟೂರ್ನ್ಮೆಂಟ್ ಇದ್ದಾಗ ತನ್ನ ತಂದೆಯ ಬಳಿ ಕಾಡಿ ಬೇಡಿ ಆಟ ಆಡಲು ಅನುಮತಿ ಪಡೆದಿದ್ದಳು. ಹಿಮಾ ಬಾಲ್ಯದಲ್ಲಿ ಫುಟ್ಬಾಲ್ ಆಟವನ್ನು ಆಡಲಾರಂಭಿಸಿ ತನ್ನ ಶಾಲೆಯಲ್ಲಿ ಹುಡುಗರ ಜೊತೆಗೆ ಆಟವಾಡುತ್ತಾ ಫುಟ್ಬಾಲ್ ಆಟದಲ್ಲಿ ವೃತ್ತಿ ಜೀವನವನ್ನು ಕಾಣಬಯಸಿದ್ದರು. ಜವಾಹರ್ ನವೋದಯ ವಿದ್ಯಾಲಯದಿಂದ ಶಾರೀರಿಕ ಶಿಕ್ಷಣ ತರಬೇತುದಾರ ಶಮ್ಸುಲ್ ಹೋಕ್ ಅವರು ಹಿಮಾಳಲ್ಲಿದ್ದ ವೇಗವಾಗಿ ಓಡುವ ಕೌಶಲವನ್ನು ಗಮನಿಸಿ ದಾಸ್ ತನ್ನ ಫುಟ್ಬಾಲ್ ಆಟದ ಕನಸನ್ನು ಅಥ್ಲೆಟಿಕ್ಸ್ಗೆ ಬದಲಾಯಿಸುವಂತೆ ಮಾಡಿ ಕಡಿಮೆ ಅಂತರದ ಓಟದಲ್ಲಿ ಭಾಗವಹಿಸುವ ಕಲೆಯನ್ನು ಕಲಿಸಿದರು.

ನಂತರ ಅಂತರ್ ಜಿಲ್ಲಾ ಕ್ರೀಡಾ ಮತ್ತು ಯುವಜನ ಕಲ್ಯಾಣ ನಿರ್ದೇಶನಾಲಯದ ತರಬೇತುದಾರ ನಿಪಾನ್ ದಾಸ್ ಎಂಬವರು ಹಿಮದಾಸ್‌ರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿ ಅವರು ಆಕೆಯನ್ನು ತರಬೇತಿಗಾಗಿ ರಾಜ್ಯದ ರಾಜಧಾನಿ ಗೌಹಾಟಿಗೆ ಕಳುಹಿಸುವಂತೆ ಅವರ ಹೆತ್ತವರಿಗೆ ಸಲಹೆ ನೀಡಿದರು. ಹಿಮಾ ದಾಸ್ ಅವರ ಪೋಷಕರು ತಮ್ಮ ಮೀಸಲಾತಿಯ ಹೊರತಾಗಿಯೂ ನಿಪಾನ್ ದಾಸ್ ಅವರ ಪ್ರಸ್ತಾಪಕ್ಕೆ ಒಪ್ಪಿ ಗೌಹಾಟಿಗೆ ಕಳುಹಿಸಿದರು. ಅಲ್ಲಿ ಸ್ವತಃ ನಿಪಾನ್ ದಾಸ್ ಅವರೇ ಹಿಮಾಗೆ ತರಬೇತಿಯನ್ನು ನೀಡಿದರು. ಹಿಮಾದಾಸ್ ಗೌಹಾಟಿಯ ಸರಸ್ಜಾಯ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಳಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ರಾಜ್ಯ ಅತ್ಲೆಟಿಕ್ಸ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಂಡರು. ಈ ಅಕಾಡೆಮಿಯು ಬಾಕ್ಸಿಂಗ್ ಮತ್ತು ಫುಟ್ಬಾಲ್ ಆಟಗಳಲ್ಲಿ ಪರಿಣತಿಯನ್ನು ಪಡೆದಿದ್ದು, ನಂತರದಲ್ಲಿ ಇಲ್ಲಿ ಅಥ್ಲೆಟಿಕ್ಸ್ಗಾಗಿ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಲಾಯಿತು.

ಕ್ರೀಡಾಕೂಟದಲ್ಲಿ ಈಕೆಯ ಸಾಧನೆ:

ಭತ್ತದ ಗದ್ದೆಯಲ್ಲಿ ಓಡಿ ಅಭ್ಯಾಸ ಮಾಡಿದ್ದ ಹಿಮಾ ದಾಸ್ 2018ರಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಓಟದಲ್ಲಿ ಮಿಂಚಿನAತೆ ಓಡಿ ಚಾಂಪಿಯನ್ ಆಗಿ ಹೊಸ ದಾಖಲೆ ಬರೆಯುವ ಮೂಲಕ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ್ದರು. ಹಿಮ ದಾಸ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫಿನ್ ಲ್ಯಾಂಡ್‌ನಲ್ಲಿ ನಡೆಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ದಾಖಲೆ ನಿರ್ಮಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಯನ್ನೂ ಗಳಿಸಿದ್ದಾರೆ. ಅಂಡರ್ 20 ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮದಾಸ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ನಂತರ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್‌ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಅಗ್ರಸ್ಥಾನಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಬಳಿಕ ಹಿಮಾ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ನ ಮಹಿಳೆಯರ 4*400 ಮೀಟರ್ ರಿಲೇ, ಮಿಶ್ರ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆಯಾಗಿದ್ದರು. 400 ಮೀಟರ್ ಮತ್ತು 4×400 ಮೀಟರ್ ರಿಲೇನಲ್ಲಿ 2018 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದಾಸ್ ಸ್ಪರ್ಧಿಸಿ 400 ಮೀಟರುಗಳಲ್ಲಿ, ದಾಸ್ ಫೈನಲ್‌ಗೆ ಅರ್ಹತೆ ಪಡೆದು ಅಲ್ಲಿ 51.32 ಸೆಕೆಂಡುಗಳ ಅವಧಿಯಲ್ಲಿ ಆರನೇ ಸ್ಥಾನ ಗಳಿಸಿದರು. ನಂತರ ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್‌ನಲ್ಲಿ ಕೇವಲ 51.13 ಸೆಕೆಂಡ್‌ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸುವ ಸಾಧನೆಯನ್ನು ಮಾಡಿದ್ದಾರೆ.

ಚೆಕ್‌ಗಣರಾಜ್ಯ ಮತ್ತು ಪೋಲೆಂಡ್‌ನಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಗಳಲ್ಲಿ ಹಿಮಾ ದಾಸ್ 200 ಮೀ ಸ್ಪರ್ಧೆಯಲ್ಲಿ ನಾಲ್ಕು ಹಾಗೂ 400 ಮೀ ಸ್ಪರ್ಧೆಯಲ್ಲಿ ಒಂದು ಹೀಗೆ ಒಟ್ಟು ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವುಗಳ ಪೈಕಿ ಪೋಲೆಂಡ್‌ನಲ್ಲಿ 200ಮೀ ಸ್ಪರ್ಧೆಯಲ್ಲಿ 23.65 ಸೆಕೆಂಡ್‌ನಲ್ಲಿ ಸ್ಪರ್ಧೆ ಮುಗಿಸಿ ಚಿನ್ನದ ಪದಕ, ಪೋಲೆಂಡ್‌ನಲ್ಲಿ ನಡೆದಿದ್ದ ಕುಟ್ನೋ ಅತ್ಲೆಟಿಕ್ಸ್ ಮೀಟ್‌ನ 200 ಮೀ ಓಟದಲ್ಲಿ 23.97ಸೆಕೆಂಡ್‌ನಲ್ಲಿ ಓಟವನ್ನು ಪೂರ್ಣಗೊಳಿ ಚಿನ್ನದ ಪದಕ, ಚೆಕ್‌ಗಣರಾಜ್ಯದಲ್ಲಿ ನಡೆದಿದ್ದ ಕ್ಲಾಡ್ನೋ ಅತ್ಲೆಟಿಕ್ಸ್ನಲ್ಲಿ 200ಮೀ ಓಟವನ್ನು 23.43 ಸೆ ಅಂತರದಲ್ಲಿ ಪೂರೈಸಿ 3ನೇ ಚಿನ್ನದ ಪದಕ, ಅಲ್ಲೇ ನಡೆದಿದ್ದ ಟ್ಯಾಬೋರ್ ಅತ್ಲೆಟಿಕ್‌ನ 200ಮೀ ಓಟವನ್ನು 23.25ಸೆ ಅಂತರದಲ್ಲಿ ಪೂರೈಸಿ ಒಂದೇ ತಿಂಗಳಿನಲ್ಲಿ 4ನೇ ಚಿನ್ನದ ಪದಕ, ಚೆಕ್‌ಗಣರಾಜ್ಯದಲ್ಲಿ ಅದೇ ತಿಂಗಳು ನಡೆದ ಮತ್ತೊಂದು ಸ್ಪರ್ಧೆಯ 400ಮೀ ಓಟದಲ್ಲಿ 52.09ಸೆ ಅಂತರದಲ್ಲಿ ಕ್ರಮಿಸಿ ಐದನೇ ಚಿನ್ನದ ಪದಕವನ್ನು ಪಡೆದ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ಭೋಗೇಶ್ವರ್ ಬರುವಾ ಬಳಿಕ ಅತರಾಷ್ಟಿçÃಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅಸ್ಸಾಂನ 2ನೇ ಓಟಗಾರ್ತಿಯಾಗಿ ಹಿಮಾ ದಾಸ್ ಗುರುತಿಸಿಕೊಂಡಿದ್ದಾರೆ. 2018ರ ಏಷ್ಯನ್ ಕ್ರೀಡಾಕೂಟದ 4×400ಮೀ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ, 2018ರ ಏಷ್ಯನ್ ಕ್ರೀಡಾಕೂಟದ 400ಮೀ ಓಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. 2018ರ ಯುನಿಸೆಫ್‌ನ ಭಾರತದ ಮೊದಲ ಯುವ ರಾಯಭಾರಿಯಾಗಿ ಹಿಮಾ ನೇಮಕಗೊಂಡು ನಂತರ ಅಸ್ಸಾಂ ಸರ್ಕಾರದ ಕ್ರೀಡಾ ರಾಯಭಾರಿ ಆಗಿಯೂ ನೇಮಕಗೊಂಡಿದ್ದರು. ಅದೇ ರೀತಿ 2018ರಲ್ಲಿ ಪ್ರತಿಷ್ಟಿತ ‘ಅರ್ಜುನ ಪ್ರಶಸ್ತಿ’ಗೂ ಹಿಮಾ ಭಾಜನರಾಗಿದ್ದಾರೆ.

ಹೃದಯವಂತೆ:

ಅಸ್ಸಾಂ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತನ್ನ ಒಂದು ತಿಂಗಳ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ಅಷ್ಟೇ ಅಲ್ಲದೇ ಪ್ರವಾಹ ಪೀಡಿತಗೊಂಡಿರುವ ತನ್ನ ಅಸ್ಸಾಂ ರಾಜ್ಯಕ್ಕೆ ಸಹಾಯ ಮಾಡಲು ಮುಂದೆ ಬರುವಂತೆ ಮನವಿಯನ್ನೂ ಮಾಡಿದ್ದರು.

ಅಭಿನಂದನೆಗಳ ಮಹಾಪೂರ:

ಪ್ರಧಾನಿ ನರೇಂದ್ರ ಮೋದಿ, ರಾಷ್ಟçಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಹಿಮಾಳ ಸಾಧನೆಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಹಿಮಾ ದಾಸ್ ‘ಚಿರತೆಯಂತೆ ಓಡಿದ ವಿಡಿಯೋ’ವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ರಾಷ್ಟವನ್ನು ಓಟದಲ್ಲಿ ಪ್ರತಿನಿಧಿಸಲು ಶೂ ಕೊಳ್ಳಲೂ ದುಡ್ಡಿಲ್ಲದ ಹಿಮಾ ಇಂದು ವಿಶ್ವದ ಅತಿದೊಡ್ಡ ಶೂ ಸಂಸ್ಥೆಯು ತನ್ನ ಶೂಗೆ ಹಿಮಾಳನ್ನು ಬ್ರಾಂಡ್ ಅಂಬಾಸಿಡರ್ ಮಾಡಿ ತನ್ನ ಶೂನಲ್ಲಿ ಹಿಮಾ ಹೆಸರನ್ನು ಮುದ್ರಿಸುತ್ತಿದೆ. ಇದೇ ಅಲ್ಲವೇ ಸಾಧನೆ? ಹಿಮಾ ತಾನು ಭಾರತ ದೇಶದ ಜೆರ್ಸಿ (ಆಟಗಾರರು ಧರಿಸುವ ಧಿರಿಸು) ತೊಡಬೇಂದು ಕಂಡಿದ್ದ ಕನಸಿಂದು ನನಸಾಗಿದೆ. ಈಕೆಗೆ ಒಲಿಂಪಿಕ್ಸ್ನಲ್ಲಿ ಭಾರತ ದೇಶಕ್ಕೆ ಚಿನ್ನದ ಪದಕ ತಂದುಕೊಡಬೇಕು ಎನ್ನುವ ಕನಸಿದೆ. ಹಿಮಾಳ ಈ ಹಿಂದಿನ ಎಲ್ಲಾ ಕನಸುಗಳು ನೆರವೇರಿದಂತೆ ಈ ಕನಸೂ ನೆರವೇರಲಿ, ಭಾರತಕ್ಕೆ ಮತ್ತಷ್ಟು ಕೀರ್ತಿ ತರುವಂತಾಗಲಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198


Share news

Related Articles

One Comment

Leave a Reply

Your email address will not be published. Required fields are marked *

Back to top button