ಲೇಖನ ಸಂಗಮಸಂಸ್ಕೃತಿ

ಗುರು ತತ್ವ ಚಿಂತನ

Share news

ನಮ್ಮ ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟವಾದ ಸ್ಥಾನವನ್ನು ನೀಡಲಾಗಿದೆ. ಆಶಾಢ ಶುದ್ಧ ಪೂರ್ಣಿಮೆಯನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎನ್ನುವುದಾಗಿ ಕರೆಯುವರು.

ಗುರು ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ। ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ।।

ಸೃಷ್ಟಿ, ಸ್ಥಿತಿ,ಲಯಗಳಿಗೆ ಕಾರಣಕರ್ತರು ಬ್ರಹ್ಮ ವಿಷ್ಣು ಮಹೇಶ್ವರ ಗುರು ಈ ಮೂರು ಪಾತ್ರವನ್ನು ನಿರ್ವಹಿಸುತ್ತಾನೆ ಆದ್ದರಿಂದ ಗುರುವಿನ ಪಾತ್ರ ನಮ್ಮ ಜೀವನದಲ್ಲಿ ಅತ್ಯಂತ ಹಿರಿದಾದುದು ಈ ದಿನ ಭಗವಾನ್ ಕೃಷ್ಣ ದ್ವೈಪಾಯನರು ಸಮಗ್ರ ವೇದ ರಾಶಿಯನ್ನು ಯಜುರ್ವೇದ,ಸಾಮವೇದ ಅಥರ್ವಣ ವೇದ, ಎಂಬ ನಾಲ್ಕು ವಿಭಾಗವಾಗಿ ವಿಭಾಗಿಸಿ ಜಗತ್ತಿಗೆ ನೀಡಿದ ದಿನ ಆದ್ದರಿಂದ ಅವರನ್ನು ವೇದವ್ಯಾಸರು ಎಂಬುದಾಗಿ ಕರೆಯಲಾಯಿತು. ಮತ್ತು ಈ ದಿನವನ್ನು ವ್ಯಾಸ ಪೂರ್ಣಿಮೆ ಎಂಬುದಾಗಿ ಆಚರಿಸಲಾಗುತ್ತಿದೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎನ್ನುವಂತೆ ಮನುಷ್ಯ ಹುಟ್ಟಿದ ಮೇಲೆ ಮೊದಲು ಗುರುವನಿಸುವವಳು ತಾಯಿ ಹಾಗೆ ನಂತರದ್ದು ಗುರುವಿನ ಸ್ಥಾನ ಹಾಗೆ ನಂತರದ ಸ್ಥಾನ ಸಮಾಜದ್ದು ಹೀಗೆ ಮೂರು ಹಂತದಲ್ಲಿ ಮಾನವನ ಬೆಳವಣಿಗೆ ಆಗುತ್ತದೆ.

ಅಜ್ಞಾನ ತಮಿರಾಂಧಸ್ಯ ಜ್ಞಾನಾಂಜನ ಶಲಾಖಯಾ।
ಚಕ್ಷುರುನ್ಮಿಲೀತಂ ಯೇನ
ತಸ್ಮೈ ಶ್ರೀ ಗುರವೇ ನಮಃ ।।

ಗು ಅಂದರೆ ಅಜ್ಞಾನ ರು ಅಂದರೆ ಹೋಗಲಾಡಿಸುವವ ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವವ ಗುರು ಮನುಷ್ಯ ತನ್ನ ಅನುಭವದಿಂದಲೂ ಸಾಕಷ್ಟು ಕಲಿಯುತ್ತಾನೆ, ಹಾಗಾಗಿ ಅನುಭವವು ಒಂದು ಗುರು ಎನ್ನಬಹುದು ಹೀಗೆ ಗುರು ಪೂರ್ಣಿಮೆಯ ಈ ಶುಭದಿನದಲ್ಲಿ ಎಲ್ಲಾ ಸಮಾಜದ ಯತಿವರ್ಯರು ಚಾತುರ್ಮಾಸ್ಯ ವ್ರತ ಕೈಗೊಂಡು ಸಮಾಜಕ್ಕೆ ಉತ್ತಮ ವಿಚಾರವನ್ನು ನೀಡುತ್ತಾರೆ ನಾವೆಲ್ಲರೂ ಅಂತಹ ಗುರುಗಳಿಂದ ಜ್ಞಾನವನ್ನು ಪಡೆದುಗುರು ವಿನ ಮಹತ್ವವನ್ನು ಅರಿತು ಸಾರ್ಥಕ ಜೀವನವನ್ನು ನಡೆಸೋಣ ಗುರು ಕಾರುಣ್ಯ ಸದಾ ನಮ್ಮ ಮೇಲಿರಲಿ.


Share news

Related Articles

Leave a Reply

Your email address will not be published. Required fields are marked *

Back to top button