ಆರೋಗ್ಯಲೇಖನ ಸಂಗಮ

ದಾಹ ತೀರಿಸುವ ಮಜ್ಜಿಗೆ ಆರೋಗ್ಯಕ್ಕೂ ಒಳ್ಳೆಯದು!

Share news

ಊಟದ ಜೊತೆಗೆ ಮಜ್ಜಿಗೆ ಇದು ಮೊದಲಿನಿಂದಲೂ ಬಂದ ಸಂಪ್ರದಾಯ. ಊಟದ ಕೊನೆಯಲ್ಲಿ ಮಜ್ಜಿಗೆ ಬಂತೆಂದರೆ ಅಲ್ಲಿಗೆ ಆ ಊಟ ಕೊನೆಯಾಯಿತು ಎಂಬ ಅರ್ಥ. ಒಂದು ವೇಳೆ ಮಜ್ಜಿಗೆ ಇಲ್ಲವೆಂದಾದರೆ ಆ ಊಟ ಅಪೂರ್ಣ ಎಂದೇ ಹೇಳಬಹುದು.

ಮಲಗುವ ಮುನ್ನ ಹಾಲು ಕುಡಿಯಬೇಕು, ಬೆಳಗ್ಗೆ ಮುಖ ತೊಳೆದು ನೀರು ಕುಡಿಯಬೇಕು, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿಯಬೇಕು. ಹೀಗೆ ಮಾಡಿದರೆ ವೈದ್ಯರಿಗೇನು ಕೆಲಸ ಎಂದು ಧರ್ಮಗ್ರಂಥವೊಂದಲ್ಲಿ ಉಲ್ಲೇಖವಿದೆ ಎಂದು ಯಾರೋ ನನಗೆ ಹೇಳಿದ ನೆನಪು. ದೇಹಕ್ಕೂ ಹಿತವನ್ನು ನೀಡುವ ಈ ಮಜ್ಜಿಗೆಯು ಈ ಬಿರುಬಿಸಿಲಿಗೆ ಸೇವಿಸಿದರಂತೂ ಹಾಯಾದ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.

ಹೌದು, ಬಿಸಿಲಿನ ಝಳಕ್ಕೆ ಗಂಟಲಿನ ಪಸೆಯೇ ಆರಿ ಹೋಗುವಂತಾಗುತ್ತದೆ. ನೀರು ಕುಡಿದು ಕುಡಿದು ಸಾಕಾಗಿ ಬಿಡುತ್ತದೆ. ಇದರ ಜೊತೆಗೆ ಆಗಾಗ ನೀರು ಕುಡಿಯುವುದು ಕೂಡಾ ಕೆಲವರಿಗೆ ಅಲರ್ಜಿ ಆಗುತ್ತದೆ ಅನ್ನಿ! ಆ ಸಮಯದಲ್ಲಿ ಮಜ್ಜಿಗೆ ಕುಡಿದರೆ ಸಾಕು, ಬಾಯಾರಿಕೆಯು ಮಾಯವಾಗುವುದರ ಜೊತೆಗೆ ದೇಹದ ಆಯಸವೂ ಪರಿಹಾರವಾಗುತ್ತದೆ.

ಮಜ್ಜಿಗೆಯಲ್ಲಿ ಇರುವ ಲ್ಯಾಕ್ಟಿಕ್ ಆ್ಯಸಿಡ್ ಅಂಶ ನಮ್ಮ ದೇಹಕ್ಕೆ ತುಂಬಾ ಉತ್ತಮವಾದುದು. ಇನ್ನು ಈ ಮಜ್ಜಿಗೆಯು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಲ್ಲದೇಚ ದೇಹವನ್ನು ತಂಪಾಗಿಡುವಂತೆ ಮಾಡುತ್ತದೆ. ಜೊತೆಗೆ ಇದರಲ್ಲಿ ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಅಂಶ ಹೇರಳವಾಗಿದ್ದು, ಇದು ನಮ್ಮ ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ.

ಇನ್ನು ಸಾಮಾನ್ಯವಾಗಿ ಕಂಡು ಬರುವ ಅಜೀರ್ಣ, ಹೊಟ್ಟೆನೋವಿಗೆ ಇದು ರಾಮಬಾಣ. ಅರ್ಧ ಲೋಟ ಮಜ್ಜಿಗೆಗೆ ಇಂಗು ಮತ್ತು ಉಪ್ಪು ಬೆರೆಸಿ ಕುಡಿದರೆ ಸಾಕು, ಕೆಲವೇ ಹೊತ್ತಿನಲ್ಲಿ ಹೊಟ್ಟೆ ನೋವು ಮಾಯ. ಇದರ ಜೊತೆಗೆ ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಇವುಗಳನ್ನು ಶಮನ ಮಾಡುವ ಈ ಮಜ್ಜಿಗೆಯು ಲಿವರ್ ನಲ್ಲಿನ ವಿಷಗುಣಗಳನ್ನು ತೆಗೆದು ಹಾಕುವಲ್ಲಿ ಸಹಕಾರಿ.

ಬಾಯಿ ಹುಣ್ಣು ಇರುವವರು ಮಜ್ಜಿಗೆಯನ್ನು ಕುಡಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ. ರಕ್ತದೊತ್ತಡವನ್ನು ನಿವಾರಿಸುವ ಶಕ್ತಿಯಿರುವ ಮಜ್ಜಿಗೆಯು ಡಯಟ್ ಮಾಡುವವರು ಕೂಡಾ ನಿಶ್ಚಿಂತೆಯಿಂದ ಕುಡಿಯಬಹುದು. ಅದರಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವ ಕಾರಣ ಡಯಟ್ ಮಾಡುತ್ತಿರುವವರು ಆರಾಮವಾಗಿ ಮಜ್ಜಿಗೆಯನ್ನು ಕುಡಿಯಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಹೇರಳವಾಗಿ ಕಂಡುಬರುವ ತಲೆಹೊಟ್ಟಿನ ಸಮಸ್ಯೆಗೂ ಇದು ರಾಮಬಾಣ. ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ನಂತರ ಸ್ನಾನ ಮಾಡಬೇಕು. ನಿಯಮಿತವಾಗಿ ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.


Share news

Related Articles

Leave a Reply

Your email address will not be published. Required fields are marked *

Back to top button