ಪರಿಸರಲೇಖನ ಸಂಗಮ

ಕೈಲಾಸದ ಒಡೆಯನಿಗೆ ಪ್ರಿಯ ಈ ನಾಗಲಿಂಗ ಪುಷ್ಪ

Share news

ಕೈಲಾಸದ ಒಡೆಯ ಶಿವನಿಗೆ ಪ್ರಿಯವಾಗಿರುವ ಈ ಹೂವು ಕಾಣಲು ತುಂಬಾ ಆಕರ್ಷಕ. ಅತ್ಯಂತ ಸುಗಂಧಭರಿತವಾಗಿರುವ ಈ ಹೂವು ಹೆಚ್ಚಾಗಿ ಶಿವ ದೇವಾಲಯಗಳ ಎದುಎಉ ಕಂಡುಬರುತ್ತದೆ. ನಾಗಲಿಂಗ ಪುಷ್ಪ ಎಂದು ಕನ್ನಡದಲ್ಲಿ ಕರೆಯಲ್ಪಡುವ ಈ ಹೂವಿಗೆ ತಮಿಳಿನಲ್ಲಿ ಶಿವಲಿಂಗ ಪುಷ್ಪ, ತೆಲುಗಿನಲ್ಲಿ ಮಲ್ಲಿಕಾರ್ಜುನ ಪುಷ್ಟ ಎಂದು ಕರೆಯತ್ತಾರೆ.

ಇನ್ನೂ ಓದಿ..ಅಡುಗೆಯ ರುಚಿ ಹೆಚ್ಚಿಸುವ ಕರಿಬೇವು ಆರೋಗ್ಯವರ್ಧಕವೂ ಹೌದು

ಇಂಗ್ಲೀಷ್ ನಲ್ಲಿ ಕೇನಾನ್ ಬಾಲ್ ಟ್ರೀ ಎಂಬ ಹೆಸರಿರುವ ಈ ನಾಗಲಿಂಗ ಪುಷ್ಪಕ್ಕೆ ಉತ್ತರ ಭಾರತದಲ್ಲಿ ಕೈಲಾಸಪತಿ ಹೂವು ಎಂದು ಕರೆಯುತ್ತಾರೆ. ಮೂಲತಃ ದಕ್ಷಿಣ ಅಮೇರಿಕಾ ಮತ್ತು ಕೆರೆಬಿಯನ್ ನಲ್ಲಿ ಬೆಳೆಯುವ ಈ ಮರವು ಲೇಥಿಡೇಸಿ ಕುಟುಂಬಕ್ಕೆ ಸೇರಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ಕೌರಾಪಿಟ್ ಜಿಯನೆಂಸಿಸ್.

ಇನ್ನೂ ಓದಿ.. “ಸಿಡಿಲಮರಿ – ರಂಗಪಾದರಸ ತೀರ್ಥಹಳ್ಳಿ ಗೋಪಾಲ ಆಚಾರ್ಯ “

ಅಂದ ಹಾಗೇ ಕಾಣಲು ಬಹಳ ಸುಂದರವಾಗಿರುವ ಈ ಹೂವು ತನ್ನ ಸೌಂದರ್ಯದಿಂದಲೇ ಪ್ರಕೃತಿ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತದೆ ಎಂದರೆ ತಪ್ಪಾಗಲಾರದೇನೋ? ಕೇಸರಿ ಕೆಂಪು ಬಣ್ಣದಿಂದ ಕೂಡಿರುವ ಈ ಹೂವು ಆರು ದಳಗಳನ್ನು ಹೊಂದಿದೆ. ಶಿವಲಿಂಗವನ್ನು ರಕ್ಷಿಸುವ ನಾಗನನ್ನು ಈ ಹೂವು ಹೋಲುವ ಕಾರಣ ಇದಕ್ಕೆ ನಾಗಲಿಂಗ ಪುಷ್ಪ ಎಂದು ಹೆಸರು.

ಸುಮಧುರವಾದ ಸುಹಾಸನೆಯಿಂದ ಕೂಡಿರುವ ನಾಗಲಿಂಗಪುಷ್ಟದಲ್ಲಿ ಮಕರಂದವಿಲ್ಲ. ಮಾತ್ರವಲ್ಲದೇ ಇದರ ಕಾಯಿಯನ್ನು ಜಜ್ಜಿದರೆ ಮೂಗು ಮುಚ್ಚಿಕೊಳ್ಳುವಷ್ಟು ಕೆಟ್ಟದಾದ ವಾಸನೆ ಬರುತ್ತದೆಯಂತೆ.

ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಲ್ಪಡುವ ಈ ನಾಗಲಿಂಗಪುಷ್ಪವನ್ನು ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕು ಎಂದೆನಿಸಿಬಿಡುತ್ತದೆ. ಹಾಗಾಗಿ ಒಂದು ವೇಳೆ ನಿಮಗೆ ಈ ಮರವನ್ನು ನೋಡುವ ಅವಕಾಶ ದೊರೆತರೆ ಕಣ್ಣಾರೆ ಆ ಹೂವಿನ ಅಂದವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಮರೆಯದಿರಿ

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಥೈಲ್ಯಾಂಡ್ ನಲ್ಲಿ ಹಿಂದೂ ಧರ್ಮದ ಸಂಕೇತವಾದ ಸೃಷ್ಟಿಕರ್ತ ಬ್ರಹ್ಮ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಮುಖ್ಯವಲ್ಲ, ದೃಢ ಮನಸ್ಸು ಬೇಕು ಎಂದ ಪೂರ್ಣಿಮಾ

ಯಕ್ಷಗಾನ ಕಲಾ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ

ಮಣ್ಣಿಂದ ಮೇಲೆದ್ದು ಬಂದು 600 ವರ್ಷಗಳ ಹಿಂದಿನ ಗತವೈಭವ ಮರುಕಳಿಸುವಂತೆ ಮಾಡಿದ ಕಾರ್ಣಿಕದ ದೈವಸ್ಥಾನ | ಮಾಡತ್ತಾರು

ಮರಗಿರಿ (Amaragiri) | ಭಾರತಾಂಬೆಯ ಭವ್ಯ ಮಂದಿರ || ಹನುಮಗಿರಿ, ಈಶ್ವರಮಂಗಲ 


Share news

Related Articles

Leave a Reply

Your email address will not be published. Required fields are marked *

Back to top button