ಲೇಖನ ಸಂಗಮಸಿನಿ ವಿಹಾರ

ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಮೋಡಿ ಮಾಡಿದ್ದಾರೆ ಈ ಸಂಸ್ಕೃತ ಟೀಚರ್!

Share news

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕಥೆಯೊಂದು ಶುರುವಾಗಿದೆ” ಧಾರಾವಾಹಿಯಲ್ಲಿ ನಾಯಕಿ ವರ್ಣಿಕಾ ಆಗಿ ಅಭಿನಯಿಸುತ್ತಿರುವ ಸೌಮ್ಯ ಭಟ್ ಕಡಲನಗರಿಯ ಪ್ರತಿಭೆ ಎಂಬುದು ಹಲದವರಿಗೆ ತಿಳಿದಿರಲಿಕ್ಕಿಲ್ಲ! ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸೌಮ್ಯ ಭಟ್ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡ ಬೆಡಗಿ.

ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಭಡ್ತಿ ಪಡೆದಿರುವ ಸೌಮ್ಯ ಭಟ್ ವೃತ್ತಿ ಜೀವನ ಶುರು ಮಾಡಿದ್ದು ಸಂಸ್ಕೃತ ಅಧ್ಯಾಪಿಕೆಯಾಗಿ. ತಿರುಪತಿಯ ಆರ್ ಎಸ್ ವಿ ಪಿ ಯಲ್ಲಿ ವಿದ್ಯಾಭ್ಯಾಸ ಪಡೆದ ಸೌಮ್ಯ ಭಟ್ ಮುಂದೆ ಸಂಸ್ಕೃತ ಅಧ್ಯಾಪಿಕೆಯಾಗಿ ವೃತ್ತಿ ಜೀವನ ಶುರು ಮಾಡಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಲನ ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಸೌಮ್ಯ ಭಟ್ ನಟಿಯಾಗಲು ಕಾರಣ ಫೇಸ್ ಬುಕ್. ಹೌದು, ಕೊಂಚ ಮಟ್ಟಿಗೆ ಫೇಸ್ ಬುಕ್ ನಲ್ಲಿ ಆ್ಯಕ್ಟೀವ್ ಆಗಿದ್ದ ಸೌಮ್ಯ ಅವಕಾಶ ದೊರೆತಾಗಲೆಲ್ಲಾ ತಮ್ಮ ಫೋಟೋಗಳನ್ನು ಹಾಕುತ್ತಿದ್ದರು.

ಸೌಮ್ಯ ಅವರ ಪೋಟೋ ನೋಡಿದ ನಟ, ನಿರ್ದೇಶಕ ಜಗದೀಶ್ ಮಲ್ನಾಡು ಸೌಮ್ಯರನ್ನು ಸಂಪರ್ಕಿಸಿ ನಟಿಸಲು ಇಷ್ಟ ಇದ್ದರೆ ಮಿಲನ ಧಾರಾವಾಹಿಯ ಆಡಿಶನ್ ನಲ್ಲಿ ಭಾಗವಹಿಸಿ ಎಂದು ಹೇಳಿದರು. ಅದಾಗಿಯೇ ಅವಕಾಶ ಬಂದ ಕಾರಣ ಬೇಡ ಎನ್ನದೇ ಮುಂದುವರಿದ ಸೌಮ್ಯ ಇಂದು ನಟಿಯಾಗಿ ಮಿಂಚುತ್ತಿದ್ದಾರೆ.

ಮಿಲನ ಧಾರಾವಾಹಿಯ ನಂತರ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಒಂದೂರಲ್ಲಿ ರಾಜ ರಾಣಿ ಧಾರಾವಾಹಿಯಲ್ಲಿಯೂ ಈಕೆ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಲಕ್ಷ್ಮಿ ಬಾರಮ್ಮ” ಧಾರಾವಾಹಿಯಲ್ಲಿ ಮೇಧಾ ಆಗಿ ಅಭಿನಯಿಸಿದ್ದ ಸೌಮ್ಯ ಭಟ್ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಮೆಚ್ಚುಗೆಯನ್ನು ಗಳಿಸಿದರು.

‘ಕನ್ನಡತಿ’ ಧಾರಾವಾಹಿಯಲ್ಲಿ ನಾಯಕ ಹರ್ಷನ ಅಸಿಸ್ಟೆಂಟ್ ಆಶಿತ ಆಗಿ ಬಣ್ಣ ಹಚ್ಚಿದ ಸೌಮ್ಯ ಭಟ್ ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಪವಿತ್ರಾ ಆಗಿ ಕಾಣಿಸಿಕೊಂಡರು. ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ಸೌಮ್ಯ ಭಟ್ ತಮಿಳಿನ ‘ತಾಳಂಪು’ ಧಾರಾವಾಹಿಯಲ್ಲಿ ನಾಯಕಿಯಾಗಿ
ಮೋಡಿ ಮಾಡಿದರು.

ಇದೀಗ ವರ್ಷಿಕಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಸೌಮ್ಯ ಭಟ್ ಹಿರಿತೆರೆಯಲ್ಲೂ ನಟನಾ ಕಂಪನ್ನು ಪಸರಿಸಿದ ಬೆಡಗಿ. “ರಾಜು ಎದೆಗೆ ಬಿದ್ದ ಅಕ್ಷರ” ಎನ್ನುವ ಸಿನಿಮಾದಲ್ಲಿ ನಾಯಕನ ಅಕ್ಕನ ಪಾತ್ರಕ್ಕೆ ಜೀವ ತುಂಬಿದ್ದ ಈಕೆ “ನಿನ್ನ ಸನಿಹಕೆ” ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇನ್ನು ಹೆಸರಿಡಬೇಕಾದ ವೆಬ್ ಸಿರೀಸ್ ನಲ್ಲಿಯೂ ಈಕೆ ನಟಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button