ಪ್ರತಿಭಾನ್ವೇಷಣೆಲೇಖನ ಸಂಗಮ

ಯಕ್ಷ-ಭರತ‌ನೃತ್ಯ ಕಲಾಸಂಪನ್ನೆ

Share news

ಯಕ್ಷಗಾನ ಎಂದರೆ ಪುರುಷ ಪ್ರಧಾನವಾದದ್ದು. ರಂಗದಲ್ಲಿ ಪುರುಷರೇ ಮಹಿಳೆಯರಾಗುತ್ತಿದ್ದರು. ಇಲ್ಲಿ ಎಲ್ಲವೂ ಪುರುಷಮಯ ಎಂಬ ಕಾಲ ಬದಲಾಗಿದೆ. ಪುರುಷ ಪ್ರಧಾನವಾದ ಯಕ್ಷಗಾನ ಕ್ಷೇತ್ರಕ್ಕೆ ಮಹಿಳೆಯರು ಲಗ್ಗೆ ಇಟ್ಟಿದ್ದಾರೆ. ಪುರುಷರಿಗೆ ಕಡಿಮೆ ಇಲ್ಲದಂತೆ ಕುಣಿಯುತ್ತಾರೆ. ಸ್ತ್ರೀಸಹಜ ಬೆಡಗು, ಬಿನ್ನಾಣವಷ್ಟೇ ಅಲ್ಲ, ಭಯಾನಕ, ಭೀಭತ್ಸ, ಶೃಂಗಾರ, ಕರುಣೆ, ವೀರ ಹೀಗೆ ಪುರುಷ ಪಾತ್ರವನ್ನೂ ತೊಟ್ಟು ಸೈ ಎನಿಸಿಕೊಳ್ಳುತ್ತಿದ್ದಾರೆ ಮಹಿಳೆಯರು ಹೀಗೆ ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಕಲಾವಿದೆ ವಿದುಷಿ ಭಾಗೀರಥಿ ಎಮ್ ರಾವ್.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

14.06.1970 ರಂದು ಯು.ಜಯರಾಮ ರಾವ್ ಹಾಗೂ  ಶ್ರೀಮತಿ ನವೀನಮ್ಮ ಇವರ ಮಗಳಾಗಿ ಜನನ. ಬಿಕಾಂ ಇವರ ವಿದ್ಯಾಭಾಸ, ಕರ್ನಾಟಕ ಸಂಗೀತ ಹಾಗೂ ಭಾರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ. ಶ್ರೀಮಾನ್ ಐರೋಡಿ ಸದಾನಂದ ಹೆಬ್ಬಾರ್ ಯಕ್ಷಗಾನ ಗುರುಗಳು, ಹೆಜ್ಜೆಗಾರಿಕೆಯನ್ನು ಸೀತಾರಾಮ ಶೆಟ್ಟಿ ಕೊಯ್ಯುರ್ ಬಳಿ ಅಭ್ಯಾಸ ಮಾಡಿ, ಭಾಗವತಿಕೆಯನ್ನು  ಕೆ. ಪಿ.ಹೆಗ್ಡೆ, ಸದಾನಂದ ಐತಾಳ್ ಬಳಿ ಕಲಿತಿರುತ್ತಾರೆ.

ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ವಿ.ಬಾಬು ಶೆಟ್ಟಿ (ಗೆಳೆಯರ ಬಳಗ ಹಂಗಳೂರು) ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಬಳಗ ನಮ್ಮದು ಎಂದು ಹೇಳುತ್ತಾರೆ ಭಾಗೀರಥಿ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲು ಪ್ರಸಂಗದ ಕಥೆಯ ಬಗ್ಗೆ ಹಿರಿಯ ಕಲಾವಿದರಿಂದ ತಿಳಿದುಕೊಳ್ಳುತ್ತೇನೆ. ನಿರ್ದೇಶಕರಾದ ಭಾಗವತರಿಂದ ಪಾತ್ರದ ಬಗ್ಗೆ ಹಾಗೂ ಪದ್ಯದ ಅರ್ಥದ ಬಗ್ಗೆ ಸಮಾಲೋಚನೆ ನಡೆಸುತ್ತೇನೆ. ಯಾವ ಪದ್ಯಕ್ಕೆ ಹೆಚ್ಚು ಕುಣಿಯಬೇಕು, ಹಾಗೂ ಯಾವ ಪದ್ಯಕ್ಕೆ ಕುಣಿಯಬಾರದು ಹಾಗೂ ಭಾವನೆಗಳ ಬಗ್ಗೆ ತಯಾರಿ ಮಾಡಿಕೊಂಡು, ಅಭ್ಯಾಸ ಮಾಡಿಕೊಂಡು ವೇದಿಕೆ (ರಂಗಸ್ಥಳವನ್ನು) ಹತ್ತುತ್ತೇನೆ.

ಇನ್ನೂ ಓದಿ.. “ಸಿಡಿಲಮರಿ – ರಂಗಪಾದರಸ ತೀರ್ಥಹಳ್ಳಿ ಗೋಪಾಲ ಆಚಾರ್ಯ “

ಸುಧನ್ವ ಮೋಕ್ಷ, ಕಂಸ ದಿಗ್ವಿಜಯ, ರತ್ನಾವತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ವಾಲಿವಧೆ, ಕೃಷ್ಣ ಸಂಧಾನ, ಮೈಂದ ದ್ವಿವಿದ, ಕೃಷ್ಣಾರ್ಜುನ ಕಾಳಗ, ದ್ರೌಪದಿ ಪ್ರತಾಪ, ಸೌಗಂಧಿಕಾ ಪುಷ್ಪಹರಣ, ಕೃಷ್ಣ ಪಾರಿಜಾತ, ಜಾಂಬವತಿ ಕಲ್ಯಾಣ ನೆಚ್ಚಿನ ಪ್ರಸಂಗಗಳು. ಸುಧನ್ವ, ದಿಗ್ವಿಜಯದ ಕಂಸ, ಭದ್ರಸೇನ, ಜಾಂಬವತಿ, ಅರ್ಜುನ, ವಾಲಿ, ಮೀನಾಕ್ಷಿ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿಗತಿ:-
ಇಂದು ಕಾಲಮಿತಿ ಯಕ್ಷಗಾನವಾದ್ದರಿಂದ ಪ್ರಸಂಗದ ಸಂಪೂರ್ಣ ಮಾಹಿತಿ ಸಿಗುವುದಿಲ್ಲ. ಮಾತುಗಾರಿಕೆಗಿಂತ ಬರೀ ಕುಣಿತಕ್ಕೆ ಹೆಚ್ಚು ಪ್ರಾಶಸ್ತ್ಯ. ವೇಷಭೂಷಣದಲ್ಲೂ ಸರಿಯಾದ ನಿಖರತೆ ಇಲ್ಲ. ಎರಡನೇ ವೇಷಧಾರಿಗಳು ಪುಂಡುವೇಷದಷ್ಟೆ  ಕುಣಿಯುವುದು ಹಾಗೂ ಸರಿಯಾದ ತಾಲೀಮು ನಡೆಸದೆ ಎಲ್ಲರೂ ವೇಷಧಾರಿಗಳಾಗುವುದು ಒಂದು ದುಃಖದ ಸಂಗತಿ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇವತ್ತಿನ ಪ್ರೇಕ್ಷಕರು ಬಹಳ ಗಡಿಬಿಡಿ ಮನೋಭಾವದವರು. ರಾತ್ರಿಯೆಲ್ಲಾ ಕುಳಿತುಕೊಂಡು ಆಟ ನೋಡುವ ಮನಸ್ಥಿತಿ ಯಾರಿಗೂ ಇಲ್ಲ. ವಿಮರ್ಶೆಗೂ ಹೋಗುವುದಿಲ್ಲ. ಪಾಂಡಿತ್ಯ ಹೊಂದಿದವರೂ ಸಹ ಹೊಸಬರಿಗೆ ಸರಿಯಾಗಿ ಅನುಸರಿಸಿಕೊಂಡು ಹೋಗಬೇಕಾಗುತ್ತದೆ. ಇಲ್ಲದಿದ್ರೆ ಹಿರಿಯವರಿಗೆ ಏನೂ ಬರಲ್ಲ ಅನ್ನುವ ಭಾವನೆ ಪ್ರೇಕ್ಷಕರದ್ದು. ಇದೊಂದು ದೊಡ್ಡ ದುರಂತ.

ಇನ್ನೂ ಓದಿ.. ಕೈಲಾಸದ ಒಡೆಯನಿಗೆ ಪ್ರಿಯ ಈ ನಾಗಲಿಂಗ ಪುಷ್ಪ

ಯಕ್ಷರಂಗದಲ್ಲಿ ಮುಂದಿನ ಯೋಜನೆ:-
ನನಗೆ ಇನ್ನೂ ಹಲವಾರು ಪ್ರಸಂಗಗಳಲ್ಲಿ ( ಹೊಸ ಹೊಸ) ಅಭಿನಯಿಸುವ ಆಸೆ. ಸಾಂಪ್ರದಾಯಿಕ ಗುಣಮಟ್ಟದ ಸಂಪ್ರದಾಯ ಬದ್ಧ ಹೆಜ್ಜೆ ಹಾಗೂ ವೇಷಭೂಷಣ ಮತ್ತು ಮಾತುಗಾರಿಕೆಯನ್ನು ಹೆಚ್ಚಿನ ಕಲಾ ಪ್ರೇಕ್ಷಕರಿಗೆ ಮನವರಿಕೆ ಮಾಡುವ ಆಸೆ.

(ಹವ್ಯಾಸಿ ಕಲಾವಿದೆ) ಯಕ್ಷ ಸಿರಿ ವನಿತಾ ಬಳಗ, ಲಹರಿ ಕಲಾರಂಗ, ಯಕ್ಷ ಮಹಿಳಾ ಬಳಗ, ಸಾಫಲ್ಯ ಟ್ರಸ್ಟ್, ಉಡುಪಿ ಮೇಳದಲ್ಲಿ ತಿರುಗಾಟವನ್ನು ಮಾಡಿರುತ್ತಾರೆ ಭಾಗೀರಥಿ. ಯಕ್ಷಗಾನ, ಭರತನಾಟ್ಯ, ನಾಟಕದಲ್ಲಿ ಪಾತ್ರ ಮಾಡುವುದು, ಸಂಗೀತ, ಲೇಖನ ಬರೆಯುವುದು, ಭಾಷಣ ಮಾಡುವುದು ಇವರ ಹವ್ಯಾಸಗಳು.

ಸನ್ಮಾನ ಹಾಗೂ ಪ್ರಶಸ್ತಿ:-
♦ ಮೂರು ಬಾರಿ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ.
♦ ರೋಟರಿ ಕ್ಲಬ್ ತೆಕ್ಕಟ್ಟೆ ಇವರಿಂದ ಸನ್ಮಾನ.
♦ರೋಟರಿ ಕ್ಲಬ್ ಕೋಟ ಇವರಿಂದ ಸನ್ಮಾನ.
♦ ಯಶಸ್ವಿ ಕಲಾವೃಂದ , ಭ್ರಾಮರಿ ನಾಟ್ಯಾಲಯ, ತಾಂಡವಂ ಕುಂದಾಪುರ ಅವರಿಂದ ಸನ್ಮಾನ.
♦ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕದಕಟ್ಟೆ ಇವರಿಂದ ಸನ್ಮಾನ.
♦ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ಇವರಿಂದ ಸನ್ಮಾನ.
♦ ಶಿರೂರು ಯಕ್ಷಗಾನ ತಂಡ, ಶನೇಶ್ವರ ದೇವಸ್ಥಾನ ಕೊಮೆ, ತೆಕ್ಕಟ್ಟೆ, ಹೀಗೆ ಹಲವಾರು ಸಂಸ್ಥೆಗಳು ಸನ್ಮಾನಿಸಿವೆ.

ವಿದುಷಿ ಭಾಗೀರಥಿ ಎಮ್ ರಾವ್ ಅವರು ಮಧುಕರ ಬಿ ರಾವ್ ಅವರನ್ನು 26.04.2000 ರಂದು ಮದುವೆಯಾಗಿ ಮಗ ಸರ್ವೇಶ್ ಎಂ ರಾವ್ ಜೊತೆಗೆ  ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

ಇನ್ನೂ ಓದಿ.. ಪಂಚಗವ್ಯ ಹಾಗೂ ಗೋವಿನ ಮಹತ್ವವನ್ನು ತಿಳಿಸುವ ಪದ್ಮಪುರಾಣ

ಥೈಲ್ಯಾಂಡ್ ನಲ್ಲಿ ಹಿಂದೂ ಧರ್ಮದ ಸಂಕೇತವಾದ ಸೃಷ್ಟಿಕರ್ತ ಬ್ರಹ್ಮ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

ಕುಮಾರ ಪರ್ವತ – ಗಿರಿ ಗದ್ದೆಯ ಬೆಟ್ಟದ ಜೀವ…ಶ್ರೀ ಮಹಾಲಿಂಗೇಶ್ವರ ಭಟ್

ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಮುಖ್ಯವಲ್ಲ, ದೃಢ ಮನಸ್ಸು ಬೇಕು ಎಂದ ಪೂರ್ಣಿಮಾ

ಯಕ್ಷಗಾನ ಕಲಾ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ


Share news

Related Articles

Leave a Reply

Your email address will not be published. Required fields are marked *

Back to top button