ರೈತರು ಇಡೀ ಜಗತ್ತಿಗೆ ಅನ್ನದಾತರು. ರೈತರಿಲ್ಲದೆ ಮಾನವ ಕುಲವಿಲ್ಲ. ಆದ್ದರಿಂದ ರೈತರಿಗೆ ಆರ್ಥಿಕ ಸಹಾಯ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಆದ್ಯ ಕರ್ತವ್ಯವಾಗಿದೆ.
ರೈತರಿಗೆ 10 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೂಚನೆ ನೀಡಿದ್ದಾರೆ.
ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು, ಸರಕಾರದ ಆದ್ಯ ಕರ್ತವ್ಯ. ಯಾವುದೇ ರೀತಿಯ ಆರ್ಥಿಕ ಸಹಾಯ ನೀಡುವುದಾದರೂ ರೈತರಿಗೆ ಹೊರೆಯಾಗಬಾರದು. ಹಾಗಾಗಿ ರೈತರಿಗೆ 10 ಲಕ್ಷ ರೂಪಾಯಿ ವರೆಗೂ ಸಾಲ ನೀಡಲು ಯಾವುದೇ ರೀತಿಯ ತೊಂದರೆ ಇಲ್ಲ. ಅಷ್ಟೇ ಅಲ್ಲದೆ, ಸಾಲ ನೀಡುವಾಗ ರೈತರ ಸಿಬಿಲ್ ಸ್ಕೋರ್ ಸಹ ಪರಿಗಣಿಸುವ ಅಗತ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ, ರೈತ ಸಮುದಾಯಕ್ಕೆ ಬ್ಯಾಂಕುಗಳು ಮರು ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಈ ಮೂಲಕ ರೈತರಿಗೆ ನೆರವಾಗಿ ಅವರ ಅಭ್ಯುದಯಕ್ಕೆ ಬ್ಯಾಂಕ್ ಗಳು ಕಾರಣವಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆಯನ್ನು ನೀಡಿದ್ದಾರೆ.