ರಾಮಾಯಣ ಕಾಲದ ರಾಮನ ಬಂಟ ಹನುಮಂತನಿಗೆ ಭಾರತದೆಲ್ಲೆಡೆ ಭಕ್ತಿ ಪ್ರಧಾನ ಪ್ರಾಮುಖ್ಯತೆಯಿದೆ. ಹನುಮಂತ ತನ್ನ ಸೇನೆಯೊಂದಿಗೆ ಲಂಕೆಗೆ ಹೋಗಿ ಸೀತೆಯನ್ನು ಕರೆತರಲು ಸೇತುವೆ ನಿರ್ಮಾಣ ಮಾಡಿದ ಬಗ್ಗೆ ಕತೆಗಳಿವೆ. ಆದ್ದರಿಂದ ನಮ್ಮ ಭಾರತದಲ್ಲಿ ಹನುಮನನ್ನು ಅಲ್ಲಲ್ಲಿ ವಿಗ್ರಹ ರೂಪದಲ್ಲಿ ಪ್ರತಿಷ್ಠಾಪಿಸಿ ದೇವರಾಗಿ ಪೂಜಿಸುತ್ತೇವೆ.
ಆಗಸ್ಟ್ 18ರಂದು ವಿಗ್ರಹ ದ ಪ್ರಾಣಪ್ರತಿಷ್ಠೆ
ಆದರೆ ವಿಶೇಷವೆಂದರೆ ಅಮೆರಿಕಾದ ಟೆಕ್ಸಾಸ್ ನಲ್ಲಿ 90 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇದು ಅಮೆರಿಕದ ಮೂರನೇ ಅತಿ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಟೆಕ್ಸಾಸ್ ನ ಹೌಸ್ಟನ್ ಸಿಟಿಯಲ್ಲಿ ಆಗಸ್ಟ್ 18ರಂದು ವಿಗ್ರಹದ ಪ್ರಾಣ ಪ್ರತಿಷ್ಠಾ ವಿಧಿ ವಿಧಾನಗಳು ವಿಧ್ಯುಕ್ತವಾಗಿ ನೆರವೇರಿತು.
ಅಮೇರಿಕಾದ ಮೂರನೇ ಅತಿ ಎತ್ತರದ ವಿಗ್ರಹ ವೆಂಬ ಖ್ಯಾತಿಗೆ ಪಾತ್ರವಾಗಿದೆ.
ಉತ್ತರ ಅಮೆರಿಕದ ಪ್ರಸ್ತುತ ಅತಿ ಎತ್ತರದ ಹನುಮಾನ್ ವಿಗ್ರಹ ಕೆತ್ತನೆ ಹಾಗೂ ಪ್ರತಿಷ್ಠೆಯ ಹಿಂದಿರುವ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಪ್ರೀತಿ, ಶಾಂತಿ ಮತ್ತು ಭಕ್ತಿಯುಕ್ತ ಜಗತ್ತನ್ನು ನಿರ್ಮಿಸಲು ನಿರಂತರ ಪ್ರಯತ್ನ ನಡೆಸಬೇಕೆಂಬ ಸಂದೇಶವೂ ಪ್ರಸ್ತುತ ಈ ಹನುಮಂತನ ವಿಗ್ರಹ ಅಳವಡಿಕೆಯ ಹಿಂದಿದೆ. ಅಮೆರಿಕದ ಪ್ರಥಮ ಅತ್ಯಂತ ಎತ್ತರದ ವಿಗ್ರಹವೆಂದರೆ ಲಿಬರ್ಟಿ ಅಥವಾ ಸ್ವಾತಂತ್ರ್ಯದ ವಿಗ್ರಹ ಮತ್ತು ಇದರ ಎತ್ತರ 151 ಅಡಿಗಳು. ಫ್ಲೋರಿಡಾದ ಗಲ್ಫ್ ಸ್ಟ್ರೀಮ್ ಪಾರ್ಕ್ ನಲ್ಲಿನ 110 ಅಡಿ ಎತ್ತರದ ಪೆಗಾಸಸ್ ಅಂಡ್ ಡ್ರ್ಯಾಗನ್ ವಿಗ್ರಹ ದ್ವಿತೀಯ ಅತಿ ಎತ್ತರದ ವಿಗ್ರಹ. ಇದುವರೆಗೆ 88.6 ಅಡಿ ಎತ್ತರದ ಅವರ್ ಲೇಡಿ ಆಫ್ ದ ರಾಕೀಸ್ ಮೂರನೇ ಅತಿ ಎತ್ತರದ ವಿಗ್ರಹವೆಂದು ಪರಿಗಣಿತವಾಗಿತ್ತು. ಆದರೆ ಇದೀಗ ಹೊಸದಾಗಿ ಪ್ರತಿಷ್ಠಾಪನೆಯಾಗಿರುವ ಹನುಮಾನ್ ವಿಗ್ರಹವು ಅಮೇರಿಕಾದ ಮೂರನೇ ಅತಿ ಎತ್ತರದ ವಿಗ್ರಹವೆಂಬ ಖ್ಯಾತಿಗೆ ಪಾತ್ರವಾಗಿದೆ.
ಅಮೆರಿಕದ ಈ ಹನುಮಂತನ ವಿಗ್ರಹಕ್ಕೆ ಸಾಮರಸ್ಯದ ವಿಗ್ರಹವೆಂಬ ಹೆಸರಿಡಲಾಗಿದೆ ಪ್ರಸ್ತುತ ಚಿಂತನೆ ಸಹಿತ ವಿಗ್ರಹ ರಚನೆಯ ಸಂಪೂರ್ಣ ಯೋಜನೆಯು ಚಿನ್ನಜಿಯಾರ್ ಸ್ವಾಮೀಜಿಗಳ ಪರಿಕಲ್ಪನೆಯ ಕೂಸಾಗಿದೆ.
ಕಾಯಕ ಯೋಗಿ ನಾಡಿನ ಶ್ರೇಷ್ಠ ಸಂತ ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ..
ಭಾರತದ ಸ್ವಾತಂತ್ರ್ಯ ದಿನಾಚರಣೆ ದಿನವಾದ ಆಗಸ್ಟ್ 15 ರಂದೇ ಈ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ಆರಂಭಗೊಂಡವು. ಆಗಸ್ಟ್ 18 ರಂದು ಪ್ರತಿಮೆಯ ಪ್ರಾಣ ಪ್ರತಿಷ್ಠಾಪನೆ ಮಾಡಲಾಯ್ತು. ಈ ಧಾರ್ಮಿಕ ವಿಧಿ ವಿಧಾನಗಳು ಶ್ರೀ ಚಿನ್ನ ಜೀಯಾರ್ ಸ್ವಾಮೀಜಿ ಅವರ ನೇತೃತ್ವದಲ್ಲೇ ನಡೆಯಿತು. ಜೊತೆಯಲ್ಲೇ ಹಲವು ವೇದಾಧ್ಯಯನ ಪಂಡಿತರು, ಪುರೋಹಿತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮದ ಸಂಘಟಕರು, ಈ ಪ್ರತಿಮೆಯು ಗುರುಗಳಾದ ಶ್ರೀ ಚಿನ್ನ ಜೀಯಾರ್ ಸ್ವಾಮೀಜಿ ಅವರ ಸ್ಪೂರ್ತಿಯಿಂದ ನಿರ್ಮಾಣಗೊಂಡಿದೆ ಎಂದರು. ಪದ್ಮ ಭೂಷಣ ಪುರಸ್ಕೃತರಾದ ಶ್ರೀಗಳು ವೇದಾಧ್ಯಯನ ಪಂಡಿತರು. ಉತ್ತರ ಅಮೆರಿಕದಲ್ಲಿ ಹಲವು ಧಾರ್ಮಿಕ ಚಟುವಟಿಕೆಗಳನ್ನು ಶ್ರೀಗಳು ಕೈಗೊಂಡಿದ್ದಾರೆ.