ಅಂತಾರಾಷ್ಟ್ರೀಯ

ಅಮೆರಿಕದ ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್‌ ಕ್ಯಾಪ್ಟನ್ ಜೋಯಾ ಅಗರ್ವಾಲ್

Share news

ಬೋಯಿಂಗ್ 777 ವಿಮಾನದ ಏರ್ ಇಂಡಿಯಾದ ಹಿರಿಯ ಪೈಲಟ್ ಕ್ಯಾಪ್ಟನ್ ಜೋಯಾ ಅಗರ್ವಾಲ್ ನಾರ್ಥ್ ಪೋಲ್ ಗಿಂತ ಮೇಲೆ ವಿಮಾನ ಹಾರಾಟ ಮಾಡಿದ ಮೊದಲ ಭಾರತೀಯ ಮಹಿಳಾ ಪೈಲಟ್ ಆಗಿದ್ದು, 16,000 ಕಿಮೀಗಳ ಅಂತರವನ್ನು ಕ್ರಮಿಸಿ ದಾಖಲೆ ನಿರ್ಮಿಸಿದ್ದಾರೆ. 2021ರಲ್ಲಿ ಮೊದಲ ಬಾರಿಗೆ ಜೋಯಾ ಅಗರ್ವಾಲ್ ನೇತೃತ್ವದ ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು ಸ್ಟೇಟ್ಸ್ ಆಫ್ ಅಮೇರಿಕಾ ಸ್ಯಾನ್ ಫ್ರಾನ್ಸಿಸ್ಕೋ(SFO)ನಿಂದ ವಾಯು ಮಾರ್ಗದಿಂದ ಬೆಂಗಳೂರಿಗೆ ತಲುಪುವ ಮೂಲಕ ಜಗತ್ತಿನ ಉದ್ದದ ವಾಯು ಮಾರ್ಗವನ್ನು ಕ್ರಮಿಸಿ ದಾಖಲೆ ಬರೆದಿದ್ದರು.

ಅಮೆರಿಕ ಮೂಲದ ಏವಿಯೇಷನ್ ಮ್ಯೂಸಿಯಂ ಏರ್ ಇಂಡಿಯಾ ಪೈಲೆಟ್ ಸಾಧನೆಯಿಂದ ಪ್ರಭಾವಿತರಾಗಿ ತಮ್ಮ ಮ್ಯೂಸಿಯಂನಲ್ಲಿ ಸ್ಥಾನ ನೀಡಿದೆ. ಮ್ಯೂಸಿಯಂನಲ್ಲಿ ಏಕೈಕ ಜೀವಂತ ವಸ್ತುವಾಗಿ ಪೈಲಟ್ ಕ್ಯಾಪ್ಟನ್ ಜೋಯಾ ಅಗರ್ವಾಲ್ ಸ್ಥಾನ ಪಡೆದು ಭಾರತದ ಮಹಿಳೆಯರಿಗೆ ಯುವ ಪೀಳಿಗೆಗೆ ಸಾಧನೆಯ ಸಾವಲುಗಳನ್ನು ಸ್ವೀಕರಿಸುವ ಮೂಲಕ ಹೊಸ ದಾಖಲೆಯೊಂದಿಗೆ ಮಾದರಿಯಾಗಿದ್ದಾರೆ. ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ ವಾಯುಯಾನದಲ್ಲಿ ಅವರ ಅಸಾಮಾನ್ಯ ವೃತ್ತಿಜೀವನಕ್ಕಾಗಿ SFO ಏವಿಯೇಷನ್ ​​​​ಮ್ಯೂಸಿಯಂನಿಂದ ಜೋಯಾ ಅವರನ್ನು ಗೌರವಿಸಲಾಯಿತು.

“ಅಮೇರಿಕಾದ ಮ್ಯೂಸಿಯಂನಲ್ಲಿರುವ ಮೊದಲ ಭಾರತೀಯ ಮಹಿಳೆ ನಾನೇ ಎಂದು ನೀವು ನಂಬಲೂ ಸಾಧ್ಯವಿಲ್ಲ, ಎಂಟು ವರ್ಷದ ಹುಡುಗಿ ತನ್ನ ಮನೆಯ ಟೆರೇಸ್ ಮೇಲೆ ಕುಳಿತು, ನಕ್ಷತ್ರಗಳನ್ನು ನೋಡುತ್ತಾ ಪೈಲಟ್ ಆಗುವ ಕನಸು ಕಾಣುತ್ತಿದ್ದಳು. ಈಗ ಅಮೇರಿಕ ತಮ್ಮ ಮ್ಯೂಸಿಯಂನಲ್ಲಿ ಭಾರತೀಯ ಮಹಿಳೆಯನ್ನು ಗುರುತಿಸಿರುವುದು ನಿಜಕ್ಕೂ ನನಗೆ ಸಿಕ್ಕ ಅತಿದೊಡ್ಡ ಗೌರವವಾಗಿದೆ… ಇದು ನನಗೆ ಮತ್ತು ನನ್ನ ದೇಶಕ್ಕೆ ಸಂತಸದ ಕ್ಷಣವಾಗಿದೆ.” ಎಂದು ಕ್ಯಾಪ್ಟನ್ ಜೋಯಾ ಹೇಳಿದ್ದಾರೆ.

ಕ್ಯಾಪ್ಟನ್ ಜೋಯಾ ಅಗರ್ವಾಲ್ ವಿಶ್ವಸಂಸ್ಥೆಯ (UN) ಲಿಂಗ ಸಮಾನತೆಯ ವಕ್ತಾರರಲ್ಲಿ ಒಬ್ಬರು ಮತ್ತು ಅವರು ತಮ್ಮ ಕನಸುಗಳನ್ನು ಈಡೇರಿಸಲು ಮಹಿಳೆಯರು ಮತ್ತು ಯುವಕರನ್ನು ಪ್ರೋತ್ಸಾಹಿಸುವ ಪ್ರವರ್ತಕರಾಗಿದ್ದಾರೆ.1980 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ​​​​ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (SFO) ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಲಾಯಿತು. ನಿರಂತರವಾಗಿ ಬೆಳೆಯುತ್ತಿರುವ ವಸ್ತುಗಳನ್ನು ಸಂಗ್ರಹಿಸಿ ಅಭಿವೃದ್ಧಿಪಡಿಸಿದೆ, ಈಗ SFO ಮತ್ತು ವಾಣಿಜ್ಯ ವಾಯುಯಾನದ ಇತಿಹಾಸಕ್ಕೆ ಸಂಬಂಧಿಸಿದಂತೆ 150,000 ಕ್ಕಿಂತ ಹೆಚ್ಚು ಸಂಖ್ಯೆಯ ವಸ್ತುಗಳಿವೆ.

ಭಾರತದಲ್ಲಿ ಮಹಿಳಾ ಪೈಲಟ್‌ಗಳ ಭಾಗವಹಿಸುವಿಕೆ ವೇಗವಾಗಿ ಹೆಚ್ಚುತ್ತಿದೆ. ಇಂಟರ್ನ್ಯಾಷನಲ್ ಸೊಸೈಟಿ ಆಫ್ ವುಮೆನ್ ಏರ್‌ಲೈನ್ಸ್ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿದೆ. US ನಲ್ಲಿ 5.5 ಪ್ರತಿಶತಕ್ಕೆ ಹೋಲಿಸಿದರೆ, ಎಲ್ಲಾ ಪೈಲಟ್‌ಗಳಲ್ಲಿ ಸುಮಾರು 12.4 ಪ್ರತಿಶತವನ್ನು ಹೊಂದಿದೆ. ಹೀಗೆ ಭಾರತೀಯ ಮಹಿಳಾ ಪೈಲೆಟ್ ಗಳ ಸಾಧನೆ ನಿಜಕ್ಕೂ ಶ್ಲಾಘನೀಯ.


Share news

Related Articles

Leave a Reply

Your email address will not be published. Required fields are marked *

Back to top button