ಅಂತಾರಾಷ್ಟ್ರೀಯ

ಭಾರತದ ಸಾಲ ಸೌಲಭ್ಯ ಪಡೆದು ನಿರ್ಮಿಸಲಿರುವ ಬಾಂಗ್ಲಾದೇಶದ 8ನೇ ಐಟಿ/ಹೈಟೆಕ್ ಪಾರ್ಕ್ ಶಂಕುಸ್ಥಾಪನೆ

Share news

ಭಾರತದ ಇಂಡಿಯನ್ ಲೈನ್ ಆಫ್ ಕ್ರೆಡಿಟ್ ಅಡಿಯಲ್ಲಿ ನಿರ್ಮಿಸಲಾದ 8 ನೇ ಐಟಿ/ಹೈಟೆಕ್ ಪಾರ್ಕ್‌ಗೆ ನಾಟೋರ್‌ನ ಸಿಂಗ್ರಾದಲ್ಲಿ ಶಂಕುಸ್ಥಾಪನೆ ಮಾಡಲಾಯಿತು. ಬಾಂಗ್ಲಾದೇಶದ ಐಸಿಟಿ ಸಚಿವ ಜುನೈದ್ ಅಹ್ಮದ್ ಪಾಲಕ್ ಮತ್ತು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸಿದರು.

ಬಾಂಗ್ಲಾದೇಶದ 12 ಜಿಲ್ಲೆಗಳಲ್ಲಿ ಹೈಟೆಕ್ ಪಾರ್ಕ್‌ಗಳನ್ನು ಸ್ಥಾಪಿಸಲು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಶೇಖ್ ಹಸೀನಾ ನಡುವಿನ ಒಪ್ಪಂದದ ಅನುಷ್ಠಾನವು ಇತ್ತೀಚಿನ ತಿಂಗಳುಗಳಲ್ಲಿ ಗಮನಾರ್ಹವಾಗಿ ಸಾಗುತ್ತಿದೆ. ಈ ವರ್ಷ 8 ಹೈಟೆಕ್ ಪಾರ್ಕ್‌ಗಳಿಗೆ ಅಡಿಪಾಯ ಹಾಕಲಾಗಿದೆ.

ರಾಜ್ಯ ಐಸಿಟಿ ಸಚಿವ ಜುನೈದ್ ಅಹ್ಮದ್ ಪಾಲಕ್ ಮಾತಾನಾಡಿ, ಭಾರತವು ನೀಡಿದ 193 ಮಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ನೆರವಿನೊಂದಿಗೆ ಬಾಂಗ್ಲಾದೇಶದ 12 ಜಿಲ್ಲೆಗಳಲ್ಲಿ ಐಟಿ/ಹೈಟೆಕ್ ಪಾರ್ಕ್‌ಗಳನ್ನು ನಿರ್ಮಿಸಲು ಮುಂದಾಗಿದ್ದೇವೆ, ಇದಕ್ಕಾಗಿ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಹೈಟೆಕ್ ಪಾರ್ಕ್ ಪೂರ್ಣಗೊಂಡರೆ 1000 ಯುವಕರು ನೇರವಾಗಿ ತರಬೇತಿ ಪಡೆದು 3000 ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಮತ್ತು ಪರೋಕ್ಷವಾಗಿ ಇನ್ನೂ ಅನೇಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಉದ್ಯಾನವನಗಳು ಬಾಂಗ್ಲಾದೇಶದ ಐಟಿ ಉದ್ಯಮವನ್ನು ಅಭಿವೃದ್ಧಿಪಡಿಸಲು ತಾಂತ್ರಿಕವಾಗಿ ನುರಿತ ಉದ್ಯೋಗಿಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಢಾಕಾದಲ್ಲಿರುವ ಭಾರತದ ಹೈ ಕಮಿಷನ್ ಟ್ವೀಟ್‌ನಲ್ಲಿ ತಿಳಿಸಿದೆ. ಈ ಮೂಲಕ ಭಾರತ ತನ್ನ ನೆರೆ ರಾಷ್ಟ್ರಗಳೊಂದಿಗಿನ ಸಂಪರ್ಕವನ್ನು ಸಹಾಯ ನೀಡುವ ಮೂಲಕ ಇನ್ನಷ್ಟು ಗಟ್ಟಿಗೊಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button