ಅಂತಾರಾಷ್ಟ್ರೀಯ

ಆಹಾರದ ಬಿಕ್ಕಟ್ಟು ಎದುರಿಸುತ್ತಿರುವ ರಾಷ್ಟ್ರಗಳಿಗೆ ಭಾರತವು 1.8 ಮಿಲಿಯನ್ ಟನ್ ಗೋಧಿಯನ್ನು ರವಾನಿಸಿದೆ

Share news

ವಿದೇಶಿ ಸರ್ಕಾರಗಳ ಕೋರಿಕೆಯ ಮೇರೆಗೆ ಭಾರತವು 1.8 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ. ಉಕ್ರೇನ್ ಯುದ್ಧದಿಂದ ಉಂಟಾದ ಜಾಗತಿಕ ಆಹಾರ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ದೇಶಗಳಿಗೆ ಗೋಧಿಯನ್ನು ನೀಡಿದೆ.

ಬಾಂಗ್ಲಾದೇಶ, ಓಮನ್, ಯುಎಇ ಮತ್ತು ಅಫ್ಘಾನಿಸ್ತಾನದ ಇತರ ದೇಶಗಳಿಗೆ ಗೋಧಿಯನ್ನು ಕಳುಹಿಸಲಾಗಿದೆ. ಕಳೆದ ತಿಂಗಳು, ಆಹಾರ ಸಚಿವ ಪಿಯೂಷ್ ಗೋಯಲ್ ಭಾರತವು ಗೋಧಿಯ ಪ್ರಮುಖ ರಫ್ತುದಾರನಲ್ಲದಿದ್ದರೂ, “ಆಹಾರ ಬಿಕ್ಕಟ್ಟು ಎದುರಿಸುತ್ತಿರುವ ಸ್ನೇಹಪರ ದೇಶಗಳಿಗೆ ಅದನ್ನು ಪೂರೈಸುತ್ತದೆ” ಎಂದು ಹೇಳಿದ್ದರು ಅದರಂತೆ ಕಳುಹಿಸಲಾಗಿದೆ.

ಬೇಸಿಗೆಯ ಆರಂಭದಲ್ಲಿ ಸುಡುವ ಬಿಸಿಲಿನಿಂದ ಇಳುವರಿ ಮೇಲೆ ಪರಿಣಾಮ ಬೀರಿದ ನಂತರ ಉತ್ಪಾದನೆಯ ಅಂದಾಜುಗಳನ್ನು ಸುಮಾರು 5% ರಷ್ಟು ಕಡಿತಗೊಳಿಸಿ ಭಾರತವು ಮೇ 13 ರಂದು ಗೋಧಿಯ ಖಾಸಗಿ ರಫ್ತು ನಿಷೇಧಿಸಿತು. ವಿದೇಶದಲ್ಲಿನ ತೀವ್ರವಾದ ಕೊರತೆಯನ್ನು ನೀಗಿಸಲು ಗೋದಿ ರಫ್ತಿಗಾಗಿ ವಿನಂತಿಸಿದ ರಾಷ್ಟ್ರಗಳಿಗೆ ರವಾನಿಸಲಾಗಿದೆ.

ಕೇಂದ್ರ ಸರ್ಕಾರ ಮತ್ತು ಯುಎನ್ ವರ್ಲ್ಡ್ ಫುಡ್ ಪ್ರೋಗ್ರಾಂ ಈ ವಾರ ಅಫ್ಘಾನಿಸ್ತಾನಕ್ಕೆ 10,000 ಹೆಚ್ಚುವರಿ ಟನ್‌ ಗೋಧಿಯನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಅಫ್ಘಾನಿಸ್ತಾನದಲ್ಲಿ ಅರ್ಧದಷ್ಟು ಜನಸಂಖ್ಯೆಯು ತೀವ್ರವಾದ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು WEP ಈ ವಾರದ ಆರಂಭದಲ್ಲಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ರಾಷ್ಟ್ರಗಳಿಗೆ ಭಾರತ ಆಹಾರ ಸಮಸ್ಯೆ ಸರಿಪಡಿಸಲು ಸಹಾಯವನ್ನು ನೀಡುತ್ತಿದೆ.


Share news

Related Articles

Leave a Reply

Your email address will not be published. Required fields are marked *

Back to top button